0% interest loan-ಶೂನ್ಯ ರಿಯಾಯಿತಿ ಬಡ್ಡಿದರ ಸಾಲ ಸೌಲಭ್ಯ.

ರಾಜ್ಯದ ರೈತರಿಗೆ 2020-21ನೇ ಸಾಲಿನಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಶೂನ್ಯ ಹಾಗೂ ರಿಯಾಯಿತಿ ಬಡ್ಡಿದರದಲ್ಲಿ ಅಲ್ಪಾವಧಿ ಮತ್ತು ಮಧ್ಯಮಾವಧಿ ಸಾಲ ನೀಡುವ ಯೋಜನೆಯಲ್ಲಿನ ಷರತ್ತುಗಳನ್ನು ಸಡಿಲಿಸಲಾಗಿದೆ.

0% interest loan-ಶೂನ್ಯ ರಿಯಾಯಿತಿ ಬಡ್ಡಿದರ ಸಾಲ ಸೌಲಭ್ಯ.

ರಾಜ್ಯ ಸರ್ಕಾರದ ಯೋಜನೆಯಂತೆ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕುಗಳಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಶೂನ್ಯ ಹಾಗೂ ರಿಯಾಯಿತಿ ಬಡ್ಡಿದರದಲ್ಲಿ ಅಲ್ಪಾವಧಿ ಮತ್ತು ಮಧ್ಯಮಾವಧಿ ಸಾಲ ನೀಡುವ ಯೋಜನೆಯಲ್ಲಿ ಈ ಮುಂಚೆ ನೀಡಿದ್ದ ಷರತ್ತಗಳನ್ನು ರಾಜ್ಯ ಸರ್ಕಾರವು ಸಡಿಲಗೊಳಿಸಿ ದಿನಾಂಕ 29-07-2021 ರಂದು ಆದೇಶ ನೀಡಿದೆ.

0% interest loan-ಶೂನ್ಯ ರಿಯಾಯಿತಿ ಬಡ್ಡಿದರ ಸಾಲ ಸೌಲಭ್ಯ.

0% interest loan-ಶೂನ್ಯ ರಿಯಾಯಿತಿ ಬಡ್ಡಿದರ ಸಾಲ ಸೌಲಭ್ಯ.

ಮುಂಚಿನ ಆದೇಶದಲ್ಲಿ ಈ ಯೋಜನೆಯು ಒಂದು ಕುಟುಂಬಕ್ಕೆ ಗರಿಷ್ಟ 3 ಲಕ್ಷ ರೂ. ನೀಡಿದ ಸಾಲಗಳಿಗೆ ಮಾತ್ರ ಅನ್ವಯವಾಗುತ್ತಿತ್ತು. ಈ ಷರತ್ತನ್ನು ಸಡಿಲಿಸಿ ಒಂದು ಕುಟುಂಬಕ್ಕೆ ಬದಲಾಗಿ ಒಬ್ಬ ವ್ಯಕ್ತಿಗೆ 3 ಲಕ್ಷ ರೂ.ಗಳವರೆಗೆ ಯೋಜನೆಯನ್ನು ಅನ್ವಯಿಸಲಾಗಿದೆ.

New schemes announced by basavaraj bommai- ನೂತನ ಮುಖ್ಯಮಂತ್ರಿಗಳಿಂದ ರಾಜ್ಯದ ಜನತೆಗೆ ಗುಡ್ ನ್ಯೂಸ್.

0% interest loan-ಶೂನ್ಯ ರಿಯಾಯಿತಿ ಬಡ್ಡಿದರ ಸಾಲ ಸೌಲಭ್ಯ.

ಎರಡನೇಯದಾಗಿ ಸಾಲ ಪಡೆದ ರೈತ ಸರ್ಕಾರಿ/ಸರ್ಕಾರಿ ಸಾಮ್ಯದ ಸಂಸ್ಥೆಗಳಲ್ಲಿ ನೌಕರನಾಗಿದ್ದು ಮಾಸಿಕ .20,000 ರೂ. ಗಳ ವೇತನ/ಪಿಂಚಣಿ ಪಡೆಯುತ್ತಿರುವ ಅಥವಾ ಕಳೆದ ಮೂರು ವರ್ಷಗಳಲ್ಲಿ ಆದಾಯ ತೆರಿಗೆ ಪಾವತಿಸಿದ್ದರೆ ಅಂತಹ ರೈತರಿಗೆ ಬಡ್ಡಿ ಪ್ರೋತ್ಸಾಹಧನ ದೊರೆಯುವುದಿಲ್ಲವೆಂದಿತ್ತು. ಇದೀಗ ಈ ಷರತ್ತನ್ನು ಸಂಪೂರ್ಣವಾಗಿ ಕೈಬಿಟ್ಟು ಅಂತಹ ರೈತರಿಗೂ ಈ ಯೋಜನೆಯ ಲಾಭವು ಸಿಗುವಂತೆ ಅವಕಾಶ ಕಲ್ಪಿಸಲಾಗಿದೆ.

Vikas Patra Scheme-ಪೋಸ್ಟ್ ಆಫೀಸ್ ನಲ್ಲಿ ಹಣ ಡಬಲ್ ಆಗುವ ಸ್ಕೀಮ್.

0% interest loan-ಶೂನ್ಯ ರಿಯಾಯಿತಿ ಬಡ್ಡಿದರ ಸಾಲ ಸೌಲಭ್ಯ.

ಅದೇ ರೀತಿ ರೈತ ಸದಸ್ಯರು ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಮತ್ತು ಕೃಷಿ ಸಂಬಂಧಿತ ಸಾಲಗಳನ್ನು ಶೇ.3 ರ ಬಡ್ಡಿ ದರದಲ್ಲಿ ಒದಗಿಸುವ ಯೋಜನೆಯು ಒಂದು ಕುಟುಂಬಕ್ಕೆ ಗರಿಷ್ಟ 10 ಲಕ್ಷ ರೂ.ಗಳವರೆಗಿನ ಸಾಲಗಳಿಗೆ ಮಾತ್ರ ಅನ್ವಯವಾಗುತ್ತಿತ್ತು. ಅಲ್ಲದೇ ಅಲ್ಪಾವಧಿ ಬೆಳೆ ಸಾಲ ಮತ್ತು ಮಧ್ಯಮಾವಧಿ, ದೀರ್ಘಾವಧಿ ಕೃಷಿ ಸಾಲದ ಮಿತಿ ಒಂದು ಕುಟುಂಬಕ್ಕೆ ಅನ್ವಯವಾಗುತ್ತಿತ್ತು. ಈ ಷರತ್ತಿನನ್ವಯ ಒಂದೇ ಕುಟುಂಬದಲ್ಲಿ ಗಂಡ, ಹೆಂಡತಿ ಅಥವಾ ಮಕ್ಕಳ ಹೆಸರಿನಲ್ಲಿ ಪಡೆದ ಸಾಲವು ಒಟ್ಟಾರೆ 10 ಲಕ್ಷ ರೂ.ಮೀರಿದಲ್ಲಿ ಬ್ಯಾಂಕು ವಿಧಿಸುವ ಸಾಮಾನ್ಯ ಬಡ್ಡಿದರ ಅನ್ವಯವಾಗುತ್ತಿತ್ತು. ಇದೀಗ ಈ ಷರತ್ತನ್ನು ಒಂದು ಕುಟುಂಬದ ಬದಲಾಗಿ ಒಬ್ಬ ಸದಸ್ಯನಿಗೆ ಎಂದು ಸಡಿಲಿಸಲಾಗಿದೆ.

Poultry farming scheme-ಕೋಳಿ ಸಾಕಾಣಿಕೆ ಮಾಡುವವರಿಗೆ ರಾಜ್ಯ ಸರ್ಕಾರದಿಂದ 4 ಲಕ್ಷ ಸಹಾಯಧನ.

0% interest loan-ಶೂನ್ಯ ರಿಯಾಯಿತಿ ಬಡ್ಡಿದರ ಸಾಲ ಸೌಲಭ್ಯ.

ಅಂತಿಮವಾಗಿ ರೈತರು ಎರಡು ಸಂಘಗಳ ಕಾರ್ಯವ್ಯಾಪ್ತಿನಲ್ಲಿ ಬೇರೆ ಬೇರೆ ಭೂಮಿ ಹೊಂದಿದ್ದರೆ ಅಥವಾ ಭೂಮಿ ಮತ್ತು ವಾಸ ಸ್ಥಳ ವಿವಿಧ ಸಂಘಗಳ ವ್ಯಾಪ್ತಿಯಲ್ಲಿದ್ದರೆ ಯಾವ ಸಂಘದ ವ್ಯಾಪ್ತಿಯಲ್ಲಿ ವಾಸವಿರುತ್ತಾನೆಯೋ ಆ ಸಂಘದಲ್ಲಿ ಪಡೆದ ಸಾಲಗಳಿಗೆ ಮಾತ್ರ ಬಡ್ಡಿ ಸಹಾಯಧನ ಅನ್ವಯವಾಗುತ್ತಿತ್ತು. ಇದೀಗ ಈ ಷತ್ತನ್ನು ಸಡಿಲಿಸಿ ಎರಡು ಸಹಕಾರ ಸಂಘಗಳಲ್ಲಿ ಸಾಲ ಪಡೆದಿದ್ದಲ್ಲಿ ಒಂದು ಸಂಘದಲ್ಲಿ ಮಾತ್ರ ರಿಯಾಯಿತಿ ಬಡ್ಡಿದರವನ್ನು ಪಡೆಯಬಹುದಾಗಿರುತ್ತದೆ.

ರಾಜ್ಯ ಸರ್ಕಾರವು ಮೇಲ್ಕಂಡ ಷರತ್ತನ್ನು ಸಡಿಲಿಸಿರುವುದರಿಂದ ಜಿಲ್ಲೆಯ ಅನೇಕ ರೈತರಿಗೆ ಈ ಯೋಜನೆಯ ಲಾಭ ದೊರೆಯುವಂತಾಗಿದೆ ಎಂದು ಹೇಳಲಾಗಿದೆ.

 

Leave a Comment