Agriculture machinery scheme- ರೈತರಿಗೆ ಪ್ರೋತ್ಸಾಹ ಧನದಲ್ಲಿ ಸಿಗುತ್ತೆ ಕೃಷಿ ಯಂತ್ರೋಪಕರಣಗಳು.

 ಈ ಯಾಂತ್ರಿಕ ಯುಗದಲ್ಲಿ ಕೃಷಿ ಚಟುವಟಿಕೆಗಳಿಗೂ ಯಂತ್ರಗಳ ಅಗತ್ಯವಿದೆ. ಕೃಷಿಯನ್ನೇ ನಂಬಿ ಆರ್ಥಿಕವಾಗಿ ಹಿಂದುಳಿದ ರೈತರಿಗೆ ಲಕ್ಷಾಂತರ ಮೌಲ್ಯದ ಯಂತ್ರಗಳನ್ನು ಖರೀದಿಸುವುದು ಕಷ್ಟವೇ ಸರಿ. ಅಂತಹವರಿಗೆ ನೆರವಾಗುವ ಉದ್ದೇಶದಿಂದ ರಾಜ್ಯ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ.

ರೈತರ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲೆಂದು `ಕೃಷಿ ಯಾಂತ್ರೀಕರಣ’ ಯೋಜನೆಯಡಿ ಕೃಷಿ ಯಂತ್ರೋಪಕರಣಗಳಿಗೆ ರಾಜ್ಯ ಸರ್ಕಾರ ಪ್ರೋತ್ಸಾಹ ಧನ ನೀಡುತ್ತಿದೆ. ಏನಿದು ಯೋಜನೆ, ಇದರಲ್ಲಿ ರೈತರಿಗೆ ಏನೆಲ್ಲಾ ಅನುಕೂಲಗಳಿವೆ ಬನ್ನಿ ತಿಳಿಯೋಣ.

Agriculture machinery scheme- ರೈತರಿಗೆ ಪ್ರೋತ್ಸಾಹ ಧನದಲ್ಲಿ ಸಿಗುತ್ತೆ ಕೃಷಿ ಯಂತ್ರೋಪಕರಣಗಳು.

PPF account -ತಿಂಗಳಿಗೆ 1000 ರೂಪಾಯಿ ಹೂಡಿಕೆ ಮಾಡಿ 12 ಲಕ್ಷ ಗಳಿಸಿ.

ಕೃಷಿ ಯಾಂತ್ರೀಕರಣ

ಈ ಯೋಜನೆ 2006-07ನೇ ಸಾಲಿನಲ್ಲಿ ಜಾರಿಗೆ ಬಂದಿತು. ರೈತರು ಹತ್ತಿರದ ತಾಲ್ಲೂಕು ವ್ಯಾಪ್ತಿಯಲ್ಲಿರುವ ಹತ್ತಿರದ ರೈತ ಸಂಪರ್ಕ ಕೇಂದ್ರದಲ್ಲಿ ಯಾವ ಯಂತ್ರೋಪಕರಣಗಳು ಲಭ್ಯವಿದೆ ಎಂಬುದು ವಿಚಾರಿಸಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿ ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು.

Agriculture machinery scheme- ರೈತರಿಗೆ ಪ್ರೋತ್ಸಾಹ ಧನದಲ್ಲಿ ಸಿಗುತ್ತೆ ಕೃಷಿ ಯಂತ್ರೋಪಕರಣಗಳು.

ಏನೇನು ಉಪಕರಣಗಳು?

ಈ ಯೋಜನೆಯಡಿ ಸಾಮಾನ್ಯ ರೈತರಿಗೆ ಸಣ್ಣ ಟ್ರ್ಯಾಕ್ಟರ್‌, ಪವರ್‌ ಟಿಲ್ಲರ್‌, ಭೂಮಿ ಸಿದ್ಧತೆ ಉಪಕರಣಗಳು, ನಾಟಿ/ಬಿತ್ತನೆ ಉಪಕರಣಗಳು, ಕುಯ್ಲು ಮತ್ತು ಒಕ್ಕಣೆ ಉಪಕರಣಗಳು, ಡೀಸೆಲ್‌ ಪಂಪು ಸೆಟ್ಟು, ಅಂತರ ಬೇಸಾಯ ಉಪಕರಣಗಳು, ಸಸ್ಯ ಸಂರಕ್ಷಣಾ ಉಪಕರಣಗಳನ್ನು ಸಹಾಯಧನದಡಿ ವಿತರಿಸಲಾಗುತ್ತದೆ.2 ಲಕ್ಷ ರೂ.ವರೆಗೆ ಇರುವ ಕೃಷಿ ಯಂತ್ರೋಪಕರಣಗಳನ್ನು ಪ್ರತಿ ರೈತ ಫಲಾನುಭವಿಗಳಿಗೆ ನೀಡಲಾಗುತ್ತಿದೆ. ಸಾಮಾನ್ಯ ವರ್ಗದ ರೈತರಿಗೆ ಶೇ. 50 ಸಹಾಯಧನವನ್ನು ಗರಿಷ್ಠಿ ಮಿತಿ 1 ಲಕ್ಷ ರೂ.ವರೆಗೆ ನೀಡಲಾಗುತ್ತದೆ. ಸಣ್ಣ ಟ್ರ್ಯಾಕ್ಟರ್‌ಗಳಿಗೆ 75,000 ಸಹಾಯಧನ ನೀಡಲಾಗುತ್ತದೆ.

Top 3 central government pension scheme-ಕೇಂದ್ರ ಸರ್ಕಾರದ 3 ಪಿಂಚಣಿ ಯೋಜನೆಗಳು.

ಯಾರಿಗೆ ಸಿಗಲಿದೆ?

ನೋಂದಾಯಿತ ರೈತ ಗುಂಪುಗಳಿಗೆ 5 ಲಕ್ಷ ರೂ.ವರೆಗೆ ಎಲ್ಲ ತರಹದ ಕೃಷಿ ಉಪಕರಣಗಳನ್ನು ಬಾಡಿಗೆ ಆಧಾರಿತ ಸೇವಾ ಕೇಂದ್ರಗಳಿಗೆ ಒದಗಿಸಲಾಗುತ್ತದೆ.

Agriculture machinery scheme- ರೈತರಿಗೆ ಪ್ರೋತ್ಸಾಹ ಧನದಲ್ಲಿ ಸಿಗುತ್ತೆ ಕೃಷಿ ಯಂತ್ರೋಪಕರಣಗಳು.

ಎಸ್ಸಿ/ಎಸ್ಟಿ ಸಮುದಾಯದವರಿಗೆ

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ರೈತರಿಗೆ ಸಣ್ಣ ಟ್ರ್ಯಾಕ್ಟರ್‌ಗಳಿಗೆ 3 ಲಕ್ಷ ರೂ. ಸಹಾಯಧನ ಹಾಗೂ ಉಳಿದ ಕೃಷಿ ಉಪಕರಣಗಳಿಗೆ ಶೇ. 90 ರಷ್ಟು ಸಹಾಯಧನವನ್ನು ಗರಿಷ್ಠ ಮಿತಿ 1 ಲಕ್ಷದವರೆಗೆ ನೀಡಲಾಗುತ್ತದೆ.

Leave a Comment