Best Saving Scheme For Future- ಮಕ್ಕಳ ಭವಿಷ್ಯಕ್ಕೆ ಯಾವ ಉಳಿತಾಯ ಯೋಜನೆ ಉತ್ತಮ.

ಮಕ್ಕಳ ಶೈಕ್ಷಣಿಕ ವೆಚ್ಚ ವರ್ಷದಿಂದ ವರ್ಷಕ್ಕೆ ಏರಿಕೆ ಕಾಣುತ್ತಿದೆ. ಮುಂದಿನ ದಿನಗಳಲ್ಲಿ ಉನ್ನತ ಶಿಕ್ಷಣ ಇನ್ನಷ್ಟು ದುಬಾರಿಯಾಗೋದ್ರಲ್ಲಿ ಸಂಶಯವಿಲ್ಲ. ಹೀಗಾಗಿ ಪಾಲಕರು ಮಕ್ಕಳ ಮುಂದಿನ ಭವಿಷ್ಯವನ್ನು ಸುರಕ್ಷಿತವಾಗಿಡಲು ಈಗಲೇ ಯೋಜನೆ ರೂಪಿಸೋದು ಅಗತ್ಯ.ಸುರಕ್ಷಿತ ಹಾಗೂ ಉತ್ತಮ ರಿಟರ್ನ್ಸ್‌ ನೀಡೋ ಯೋಜನೆಗಳಲ್ಲಿ ಹೂಡಿಕೆ ಮಾಡೋದ್ರಿಂದ ಮಕ್ಕಳ ಶೈಕ್ಷಣಿಕ ವೆಚ್ಚವನ್ನು ಯಾವುದೇ ತಲೆನೋವಿಲ್ಲದೆ ಆರಾಮವಾಗಿ ನಿಭಾಯಿಸಬಹುದು. ಹಾಗಾದ್ರೆ ಪ್ರಸ್ತುತ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಗಮನಿಸಿದ್ರೆ ಉತ್ತಮ ರಿಟರ್ನ್ಸ್‌ ನೀಡಬಲ್ಲ ಯೋಜನೆಗಳು ಯಾವುವು?

Best Saving Scheme For Future- ಮಕ್ಕಳ ಭವಿಷ್ಯಕ್ಕೆ ಯಾವ ಉಳಿತಾಯ ಯೋಜನೆ ಉತ್ತಮ.

Best Saving Scheme For Future- ಮಕ್ಕಳ ಭವಿಷ್ಯಕ್ಕೆ ಯಾವ ಉಳಿತಾಯ ಯೋಜನೆ ಉತ್ತಮ.

ಸುಕನ್ಯಾ ಸಮೃದ್ಧಿ ಯೋಜನೆ (ಎಸ್‌ಎಸ್‌ವೈ)

10 ವರ್ಷದೊಳಗಿನ ಹೆಣ್ಣು ಮಗುವಿನ ಹೆತ್ತವರಿಗಿರೋ ಅತ್ಯುತ್ತಮ ಉಳಿತಾಯ ಯೋಜನೆಯೆಂದ್ರೆ ಸುಕನ್ಯಾ ಸಮೃದ್ಧಿ. ಇದು ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಒಂದು ಕುಟುಂಬದ ಗರಿಷ್ಠ ಎರಡು ಹೆಣ್ಣುಮಕ್ಕಳ ಹೆಸರಿನಲ್ಲಿ ಈ ಯೋಜನೆಯ ಖಾತೆಗಳನ್ನು ತೆರೆಯಬಹುದು. ಅಂಚೆ ಕಚೇರಿ ಅಥವಾ ಬ್ಯಾಂಕ್ನಲ್ಲಿ ಎಸ್‌ಎಸ್‌ವೈ ಖಾತೆ ತೆರೆಯಬಹುದು. ಪ್ರಾರಂಭದಲ್ಲಿ ಕನಿಷ್ಠ 250 ರೂ. ಜಮೆ ಮಾಡೋದು ಅಗತ್ಯ. ಆ ಬಳಿಕ ವಾರ್ಷಿಕ ಕನಿಷ್ಠ 250 ರೂ.ನಿಂದ ಗರಿಷ್ಠ 1.5 ಲಕ್ಷ ರೂ. ತನಕ ಜಮೆ ಮಾಡಬಹುದು. ಇ-ವರ್ಗಾವಣೆ ಮೂಲಕ ಕೂಡ ಖಾತೆಗೆ ಹಣ ಜಮಾ ಮಾಡೋ ಅವಕಾಶ ನೀಡಲಾಗಿದೆ. ಈ ಯೋಜನೆ ಅವಧಿ 21ವರ್ಷಗಳಾಗಿದ್ದರೂ 18 ವರ್ಷ ತುಂಬಿದ ಬಳಿಕ ಮದುವೆಗಾಗಿ ಈ ಹಣವನ್ನು ಪಾಲಕರು ಹಿಂಪಡೆಯಬಹುದು. ಇನ್ನು ಉನ್ನತ ಶಿಕ್ಷಣಕ್ಕಾಗಿ ಖಾತೆಯಲ್ಲಿರೋ ಹಣದ ಶೇ.50 ಡ್ರಾ ಮಾಡಿಕೊಳ್ಳಲು ಅವಕಾಶವಿದೆ.ಪಿಪಿಎಫ್

ಒಂದು ವೇಳೆ ನೀವು ಪಬ್ಲಿಕ್‌ ಪ್ರಾವಿಡೆಂಟ್‌ ಫಂಡ್ (ಪಿಪಿಎಫ್) ಖಾತೆ ಹೊಂದಿದ್ರೆ, ನಿಮ್ಮ ಮಗುವಿನ ಹೆಸರಲ್ಲಿ ಇನ್ನೊಂದು ಖಾತೆ ತೆರೆಯಲು ಅವಕಾಶವಿದೆ. ವಾರ್ಷಿಕ ಗರಿಷ್ಠ 1.5 ಲಕ್ಷ ರೂ. ಈ ಖಾತೆಗೆ ಜಮೆ ಮಾಡಬಹುದು. ನಿಮ್ಮ ಖಾತೆಗಷ್ಟೇ ಅಲ್ಲ, ಮಗುವಿನ ಹೆಸರಿನಲ್ಲಿರೋ ಖಾತೆಗೆ ನೀವು ಜಮೆ ಮಾಡಿರೋ ಹಣಕ್ಕೆ ಕೂಡ ಆದಾಯ ತೆರಿಗೆ ಕಾಯ್ದೆ ಸೆಕ್ಷನ್‌ 80ಸಿ ಅಡಿಯಲ್ಲಿ 1.5 ಲಕ್ಷ ರೂ. ತನಕ ತೆರಿಗೆ ವಿನಾಯ್ತಿ ಪಡೆಯಬಹುದು.

Best Saving Scheme For Future- ಮಕ್ಕಳ ಭವಿಷ್ಯಕ್ಕೆ ಯಾವ ಉಳಿತಾಯ ಯೋಜನೆ ಉತ್ತಮ.

ಮಕ್ಕಳಿಗಾಗಿ ವಿಮೆ ಪ್ಲ್ಯಾನ್

ಮಕ್ಕಳ ಶಿಕ್ಷಣ ಅಥವಾ ಭವಿಷ್ಯಕ್ಕೆ ನೆರವಾಗುವಂತಹ ಜೀವ ವಿಮೆ ಯೋಜನೆಗಳು ಕೂಡ ಇವೆ. ಈ ಜೀವ ವಿಮೆಗಳ ವಿಶೇಷತೆ ಏನೆಂದ್ರೆ ಒಂದು ವೇಳೆ ವಿಮೆ ಹೊಂದಿರೋ ವ್ಯಕ್ತಿ ಮರಣ ಹೊಂದಿದ್ರೆ ಅಥವಾ ಸಮಯಕ್ಕೆ ಸರಿಯಾಗಿ ಪ್ರೀಮಿಯಂ ಪಾವತಿಸಲು ವಿಫಲನಾದ್ರೂ ವಿಮೆ ಕೊನೆಗೊಳ್ಳೋದು ಅಥವಾ ನಿಷ್ಕ್ರಿಯವಾಗೋದಿಲ್ಲ. ಹೀಗಾಗಿ ಈ ಪಾಲಿಸಿಯನ್ನು ಮುಂದುವರಿಸಿಕೊಂಡು ಹೋಗಲು ಅವಕಾಶ ಸಿಗುತ್ತದೆ. ಎಸ್‌ಬಿಐ ಲೈಫ್‌ ಸ್ಮಾರ್ಟ್‌ ಸ್ಕಾಲರ್, ಎಸ್‌ಬಿಐ ಸ್ಮಾರ್ಟ್‌ ಚಾಪ್‌ ಇನ್ಯುರೆನ್ಸ್‌ ಪ್ಲ್ಯಾನ್‌ ಇವೆಲ್ಲವೂ ಮಕ್ಕಳಿಗಾಗಿಯೇ ಇರೋ ವಿಮೆ ಯೋಜನೆಗಳು.

Best Saving Scheme For Future- ಮಕ್ಕಳ ಭವಿಷ್ಯಕ್ಕೆ ಯಾವ ಉಳಿತಾಯ ಯೋಜನೆ ಉತ್ತಮ.

ಮ್ಯೂಚುವಲ್‌ ಫಂಡ್ಸ್

ಮಕ್ಕಳ ಭವಿಷ್ಯಕ್ಕಾಗಿ ಇಕ್ವಿಟಿ ಮ್ಯೂಚುವಲ್‌ ಫಂಡ್ಸ್‌ನಲ್ಲಿ ಹೂಡಿಕೆ ಮಾಡಬಹುದು. ಕನಿಷ್ಠ 7 ವರ್ಷಗಳ ಅವಧಿ ಹೊಂದಿರೋ ಮ್ಯೂಚುವಲ್ ಫಂಡ್ಸ್‌ನಲ್ಲಿ ಹೂಡಿಕೆ ಮಾಡಿ. ಇದ್ರಿಂದ ಉತ್ತಮ ರಿಟರ್ನ್ಸ್‌ ಸಿಗೋ ಜೊತೆ ಮಕ್ಕಳ ಉನ್ನತ ಶಿಕ್ಷಣ ವೆಚ್ಚಕ್ಕೆ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ.

ಗೋಲ್ಡ್‌ ಇಟಿಎಫ್

ಮಕ್ಕಳ ಶಿಕ್ಷಣ ವೆಚ್ಚಕ್ಕಾಗಿ ಉಳಿತಾಯ ಮಾಡೋರು ಚಿನ್ನದ ಮೇಲೆ ಹೂಡಿಕೆ ಮಾಡೋದು ಕೂಡ ಉತ್ತಮ ನಿರ್ಧಾರವೇ. ಚಿನ್ನ ಎಕ್ಸ್‌ಚೇಂಜ್‌ ಟ್ರೇಡೇಡ್ ಫಂಡ್ಸ್‌ (ಇಟಿಎಫ್‌) ಮುಖಾಂತರ ಚಿನ್ನದ ಮೇಲೆ ಹೂಡಿಕೆ ಮಾಡಬಹುದು. ಗೋಲ್ಡ್‌ ಇಟಿಎಫ್ ಅಂದ್ರೆ ಪೇಪರ್ ಗೋಲ್ಡ್ ಎಂದೇ ಹೇಳಬಹುದು. ಇದು ಮ್ಯೂಚುವಲ್‌ ಫಂಡ್‌ ಯುನಿಟ್‌ಗಳನ್ನು ಖರೀದಿಸಿದ ಮಾದರಿಯಲ್ಲೇ ಇರುತ್ತೆ. ಇವನ್ನು ಸ್ಟಾಕ್‌ ಎಕ್ಸ್‌ಚೇಂಜ್‌ ಮಾರ್ಕೆಟ್‌ನಲ್ಲಿ ಖರೀದಿಸಬಹುದು ಹಾಗೂ ಮಾರಬಹುದು. ಒಬ್ಬ ವ್ಯಕ್ತಿ ಕನಿಷ್ಠ 1 ಗ್ರಾಂ ಚಿನ್ನವನ್ನು ಕೂಡ ಖರೀದಿಸಬಹುದು. ಹೀಗೆ ಸ್ವಲ್ಪ ಸ್ವಲ್ಪವೇ ಖರೀದಿಸಿ ಸಂಗ್ರಹಿಸಿಡಬಹುದು. ಚಿನ್ನ ದರದಲ್ಲಿ ಏರಿಕೆ ಕಂಡಾಗ ಮಾರಾಟ ಮಾಡಬಹುದು. ಅದೇ ರೀತಿ ಸರ್ಕಾರದ ಸಾವರಿನ್‌ ಗೋಲ್ಡ್‌ ಬಾಂಡ್ಗಳನ್ನು ಕೂಡ ಖರೀದಿಸಬಹುದು. ಇವು 8 ವರ್ಷಗಳ ಮೆಚ್ಯುರಿಟಿ ಅವಧಿ ಹೊಂದಿರುತ್ತವೆ.

Best Saving Scheme For Future- ಮಕ್ಕಳ ಭವಿಷ್ಯಕ್ಕೆ ಯಾವ ಉಳಿತಾಯ ಯೋಜನೆ ಉತ್ತಮ.

ಆರ್‌ಡಿಯಲ್ಲಿ ಹೂಡಿಕೆ

ಮಕ್ಕಳ ಭವಿಷ್ಯದ ದೃಷ್ಟಿಯಿಂದ ನೀವು ಸುರಕ್ಷಿತ ಹೂಡಿಕೆ ಮಾಡಲು ಬಯಸಿದ್ರೆ ಆರ್‌ಡಿಯಲ್ಲಿ ಹೂಡಿಕೆ ಮಾಡೋದು ಉತ್ತಮ. ಆರ್‌ಡಿಗೆ ಉತ್ತಮ ಬಡ್ಡಿದರ ನೀಡಲಾಗುತ್ತಿದೆ ಕೂಡ. ಬ್ಯಾಂಕ್‌ ಹಾಗೂ ಪೋಸ್ಟ್‌ ಆಫೀಸ್‌ ಎರಡೂ ಕಡೆ ಆರ್‌ಡಿ ಖಾತೆಗಳ ಸೌಲಭ್ಯವಿದೆ. ಈ ಖಾತೆಯಲ್ಲಿ ಮಾಸಿಕ 1000 ರೂ. ಹೂಡಿಕೆ ಮಾಡಿದ್ರೆ 10 ವರ್ಷಗಳ ಬಳಿಕ 2 ಲಕ್ಷ ರೂ. ಸಿಗುತ್ತದೆ.

ರಾಷ್ಟ್ರೀಯ ಪ್ರಮಾಣ ಪತ್ರ (ಎನ್‌ಎಸ್‌ಸಿ)

ನಿಮ್ಮ ಮಕ್ಕಳ ಶಿಕ್ಷಣಕ್ಕೆ ಉಳಿತಾಯ ಮಾಡೋರಿಗೆ ಎನ್‌ಎಸ್‌ಸಿ ಅತ್ಯುತ್ತಮ ಆಯ್ಕೆ. ಎನ್‌ಎಸ್‌ಸಿಯನ್ನು 5 ವರ್ಷಗಳ ಅವಧಿಗೂ ಪಡೆಯಬಹುದು. ಇದಕ್ಕೆ ಪ್ರಸ್ತುತ ಶೇ.8.10 ಬಡ್ಡಿ ನೀಡಲಾಗುತ್ತಿದೆ. ಒಬ್ಬ ವ್ಯಕ್ತಿ ಕನಿಷ್ಠ 100 ರೂ. ಮೌಲ್ಯದ ಪ್ರಮಾಣಪತ್ರವನ್ನು ಕೂಡ ಖರೀದಿಸಬಹುದು. ಇದ್ರಲ್ಲಿ ವಾರ್ಷಿಕ 1 ಲಕ್ಷ ರೂ. ಹೂಡಿಕೆ ಮಾಡಿದ್ರೆ ಆದಾಯ ತೆರಿಗೆ ಕಾಯ್ದೆ 80 ಸಿ ಅಡಿಯಲ್ಲಿ ಆದಾಯ ತೆರಿಗೆ ವಿನಾಯ್ತಿ ಕೂಡ ಸಿಗುತ್ತದೆ.

Leave a Comment