20 lakh Business loan-ಉದ್ಯಮ ಶೀಲತ ಅಭಿವೃದ್ಧಿ ಯೋಜನೆ.

Own Business loan-ಉದ್ಯಮ ಶೀಲತ ಅಭಿವೃದ್ಧಿ ಯೋಜನೆ.

ಕರ್ನಾಟಕ ಸರ್ಕಾರವು ಜಾರಿಗೆ ತಂದಿರುವ ಉದ್ಯಮ ಶೀಲತ ಅಭಿವೃದ್ಧಿ ಯೋಜನೆಯ ಅಡಿಯಲ್ಲಿ ನಿರುದ್ಯೋಗ ಯುವಕ ಮತ್ತು ಯುವತಿಯರಿಗೆ ಸ್ವಯಂ ಉದ್ಯೋಗ ಮಾಡಿಕೊಳ್ಳುವುದಕ್ಕಾಗಿ ಆರ್ಥಿಕ ಸಹಾಯಧನವನ್ನು ನೀಡಲಾಗುತ್ತಿದೆ, ಅಂದರೆ ನೀವು ಹೊಸದಾಗಿ ವ್ಯಾಪಾರ ಮಾಡಿಕೊಳ್ಳುವುದಕ್ಕಾಗಿ ಅಥವಾ already ಈಗಾಗಲೇ ಇರುವ ವ್ಯಾಪಾರವನ್ನು improve ಮಾಡಿಕೊಳ್ಳುವುದಕ್ಕಾಗಿ ಈ ಯೋಜನೆಯ ಅಡಿಯಲ್ಲಿ ಸಾಲವನ್ನು ನೀವು ತೆಗೆದುಕೊಳ್ಳಬಹುದು. ಯಾವೆಲ್ಲ ವ್ಯಾಪಾರವನ್ನು ಮಾಡಿಕೊಳ್ಳುವುದಕ್ಕೆ ಈ ಯೋಜನೆಯಡಿಯಲ್ಲಿ ಸಾಲವನ್ನು ತೆಗೆದುಕೊಳ್ಳಬಹುದು ಎಂಬುದರ ಬಗ್ಗೆ ಈ ಪೋಸ್ಟ್ನಲ್ಲಿ ನೀವು ತಿಳಿದುಕೊಳ್ಳಲು ಇದ್ದೀರಾ.

How to make birth certificate- ಜನನ ಪ್ರಮಾಣ ಪತ್ರ ಹೇಗೆ ಮತ್ತು ಎಲ್ಲಿ ಮಾಡಿಸಬೇಕು.

Own Business loan-ಉದ್ಯಮ ಶೀಲತ ಅಭಿವೃದ್ಧಿ ಯೋಜನೆ.

ಉದಾಹರಣೆಗೆ ನೀವು ಏನಾದರೂ ಸಣ್ಣ ಕೈಗಾರಿಕೆ ಸ್ಥಾಪನೆ ಮಾಡುವುದಾದರೆ ಈ ಯೋಜನೆಯ ಅಡಿಯಲ್ಲಿ ಸಾಲವನ್ನು ಪಡೆಯಬಹುದು, ಅಂದರೆ steel factory, garments, cement factory, iron factory, brick factory ಹೀಗೆ ಮುಂತಾದ ವ್ಯಾಪಾರವನ್ನು ಪ್ರಾರಂಭಿಸಲು ಈ ಯೋಜನೆಯ ಅಡಿಯಲ್ಲಿ ಸಾಲವನ್ನು ತೆಗೆದುಕೊಳ್ಳಬಹುದು ಅಥವಾ ಸೇವಾ ಘಟಕಗಳನ್ನು ಆರಂಭಿಸಬೇಕು ಎಂದುಕೊಂಡಿದ್ದರೆ, ಸೇವಾ ಘಟಕಗಳು ಎಂದರೆ ಹೋಟೆಲ್ ಗಳು, ಫೋಟೋ ಸ್ಟುಡಿಯೋ, ಮೆಡಿಕಲ್ ಶಾಪ್, ಗ್ಯಾರೇಜ್, ಬುಕ್ ಸ್ಟೋರ್, ಪ್ರಾವಿಷನ್ ಸ್ಟೋರ್, ಸೂಪರ್ ಮಾರ್ಕೆಟ್ ಹೀಗೆ ಮುಂತಾದ ವ್ಯಾಪಾರವನ್ನು ಪ್ರಾರಂಭಿಸಲು ಈ ಯೋಜನೆ ಅಡಿಯಲ್ಲಿ ಸಾಲವನ್ನು ತೆಗೆದುಕೊಳ್ಳಬಹುದು. ಸರ್ಕಾರದಿಂದ ಎಷ್ಟು ಸಬ್ಸಿಡಿ ಸಿಗುತ್ತೆ ಅನ್ನೋದನ್ನು ನೋಡುವುದಾದರೆ ಶೇಕಡ 70% ಸರ್ಕಾರದಿಂದ ಉಚಿತವಾಗಿ ಆರ್ಥಿಕ ಸಹಾಯ ಧನವನ್ನು ನೀಡುತ್ತಾರೆ. ಅಂದರೆ ಉದಾಹರಣೆಗೆ ನೀವು ಮಾಡುವಂತಹ ವ್ಯಾಪಾರಕ್ಕೆ 5 ಲಕ್ಷಗಳ ವರೆಗೆ ಲೋನ್ ತೆಗೆದುಕೊಂಡರೆ ಇದರಲ್ಲಿ ಶೇಕಡ 70% ಸರ್ಕಾರದಿಂದ ಉಚಿತವಾಗಿ ಆರ್ಥಿಕ ಸಹಾಯವನ್ನು ನೀಡುತ್ತಾರೆ. ಉಳಿದಂತಹ ಮೊತ್ತಕ್ಕೆ ಬ್ಯಾಂಕ್ನಿಂದ ಸಾಲ ಸೌಲಭ್ಯವನ್ನು ಒದಗಿಸಲಾಗುತ್ತದೆ.

What is mutual fund- ಮ್ಯೂಚುವಲ್ ಫಂಡ್ ನಲ್ಲಿ ಹಣ ಹೂಡಿಕೆ ಮಾಡುವುದು ಹೇಗೆ?

Own Business loan-ಉದ್ಯಮ ಶೀಲತ ಅಭಿವೃದ್ಧಿ ಯೋಜನೆ.

ಈ ಯೋಜನೆ ಅಡಿಯಲ್ಲಿ ಗರಿಷ್ಠ 20 ಲಕ್ಷ ರೂಪಾಯಿಗಳವರೆಗೆ ಸಾಲವನ್ನು ಪಡೆದುಕೊಳ್ಳಬಹುದು. ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ನಿಮ್ಮ ವಯಸ್ಸು 18 ರಿಂದ 55 ವರ್ಷದ ಒಳಗಿರಬೇಕು. ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ಯಾವುವು ಎಂದರೆ,

  • ಆಧಾರ್ ಕಾರ್ಡ್
  • ರೇಷನ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಯೋಜನಾ ವರದಿ ಅಂದರೆ ನೀವು ಮಾಡುವಂತಹ ವ್ಯಾಪಾರದ business report
  • Bank passbook xerox
  • 3 passport size photo

ಈ ಎಲ್ಲಾ ದಾಖಲಾತಿಗಳು ಕಡ್ಡಾಯವಾಗಿ ಬೇಕಾಗುತ್ತದೆ. ಎಂತಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕೆಂದರೆ,

  • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ನೀವು ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕೆಂದರೆ online ಮೂಲಕ ಅರ್ಜಿಯನ್ನು ಸಲ್ಲಿಸಬೇಕು. Online ಅರ್ಜಿ ಸಲ್ಲಿಸಲು ಕೆಳಗೆ ಕಾಣುತ್ತಿರುವ ಲಿಂಕನ್ನು ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬಹುದು.

 

ಅರ್ಜಿಸಲ್ಲಿಸಲು ಈ ಅಧಿಕೃತ ಲಿಂಕನ್ನು ಕ್ಲಿಕ್ ಮಾಡಿ.

http://adcl.karnataka.gov.in/en/schemes.html

 

 

 

 

 

Leave a Comment