Big Breaking News: ನಾಳೆಯಿಂದ ಕಾಂಗ್ರೆಸ್ ಬಂಪರ್ ಗ್ಯಾರಂಟಿ ಜಾರಿ, ಸಿಎಂ ಸಿದ್ದರಾಮಯ್ಯ ಮತ್ತು ಡಿಕೆಶಿಯಿಂದ ಅಧಿಕೃತ ಘೋಷಣೆ.


ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ತಾವು ಘೋಷಣೆ ಮಾಡಿದ ಕಾಂಗ್ರೆಸ್ ಸರಕಾರದ ಐದು ಗ್ಯಾರಂಟಿಗಳನ್ನು ಜಾರಿಗೆ ತರುತ್ತೇವೆ ಎಂದು ಕಾಂಗ್ರೆಸ್ ಚುನಾವಣೆಗೂ ಮುನ್ನ ಜನಸಾಮಾನ್ಯರಿಗೆ ಆಶ್ವಾಸನೆ ನೀಡಿತ್ತು. ಆದರೆ ಇದೀಗ ನಾನ ಕಾರಣಾಂತರಗಳಿಂದ ಕಾಂಗ್ರೆಸ್ ಸರಕಾರವು ಮುಂದೂಡುತ್ತಿದ್ದು ಆದರೆ ಈಗ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗ್ಯಾರಂಟಿ ಜಾರಿಗೆ ಕುರಿತು ಅಧಿಕೃತವಾಗಿ ಮಾಹಿತಿಯನ್ನು ನೀಡಿದ್ದು ಇದೀಗ ಎಲ್ಲಾ ಐದು ಗ್ಯಾರಂಟಿಗಳನ್ನು ಹಂತ ಹಂತವಾಗಿ ಜಾರಿಗೆ ಮಾಡಲಿಕ್ಕೆ ಕಾಂಗ್ರೆಸ್ ಸರ್ಕಾರ ನಿರ್ಧರಿಸಿದೆ.

ಹೌದು ಗ್ಯಾರಂಟಿ ಕೊಡುವುದರ ಬಗ್ಗೆ ಈಗಾಗಲೇ ವಿವಿಧ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ಜೊತೆ ಚರ್ಚೆಯನ್ನ ಮಾಡಲಾಗಿದ್ದು ಅಧಿಕಾರಿಗಳ ಜೊತೆ ಸಚಿವರುಗಳು ಮತ್ತು ಡಿಸಿಎಂ ಹಾಗೂ ಸಿಎಂ ಚರ್ಚೆ ಮಾಡಿದ್ದಾರೆ. ಹಣಕಾಸಿನ ಲಭ್ಯತೆ ಮತ್ತು ವೆಚ್ಚದ ಕುರಿತು ಆಂತರಿಕ ಸಭೆಯನ್ನು ನಡೆಸಲಾಗಿದ್ದು, ಮೊದಲಿಗೆ ಮೂರು ಗ್ಯಾರಂಟಿಯನ್ನು ಜಾರಿಗೆ ಮಾಡಲಿಕ್ಕೆ ಮೊದಲ ಹಂತದಲ್ಲಿ ತೀರ್ಮಾನ ಮಾಡಲಾಗಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ.

ಹೌದು, ಅನ್ನಭಾಗ್ಯ, ಗೃಹ ಜ್ಯೋತಿ ಹಾಗೂ ಮಹಿಳೆಯರಿಗೆ ಬಸ್ನಲ್ಲಿ ಉಚಿತವಾಗಿ ಪ್ರಯಾಣ ಮಾಡ್ಲಿಕ್ಕೆ ಈ ಮೂರು ಯೋಜನೆಗಳನ್ನು ಮೊದಲ ಹಂತದಲ್ಲಿ ಇನ್ನೇನು ಇಂದು ಸಾಯಂಕಾಲ ಅಥವಾ ನಾಳೆಯ ಒಳಗಾಗಿ ಜಾರಿಗೆ ಮಾಡಲಿಕ್ಕೆ ನಿರ್ಧಾರ ಮಾಡಲಾಗಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಅಧಿಕೃತವಾಗಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

Leave a Comment