Covid death relief fund – ಬಿಪಿಎಲ್ ಕುಟುಂಬಕ್ಕೆ 1.5 ಲಕ್ಷ ಮತ್ತು ಉಳಿದವರಿಗೆ 50 ಸಾವಿರ ರೂಪಾಯಿ.

ಕೊರೊನಾದಿಂದ ಮೃತಪಟ್ಟ ಬಿಪಿಎಲ್ ಮತ್ತು ಎಪಿಎಲ್ ಕುಟುಂಬಗಳಿಗೆ ರಾಜ್ಯ ಸರ್ಕಾರ ನೀಡುವ ಪರಿಹಾರದ ಮೊತ್ತ ಹೆಚ್ಚಳ ಮಾಡಲಾಗಿದೆ. ಬಿಪಿಎಲ್ ಕುಟುಂಬಕ್ಕೆ 1 ಲಕ್ಷ ರೂ. ಬದಲಿಗೆ 1.5 ಲಕ್ಷ ರೂ. ಹಾಗೂ ಬಿಪಿಎಲ್ ಯೇತರ ಕುಟುಂಬಕ್ಕೆ 50 ಸಾವಿರ ರೂಪಾಯಿ ಪರಿಹಾರ ನೀಡಲು ಸರ್ಕಾರ ಆದೇಶ ಹೊಸದಾಗಿ ಹೊರಡಿಸಿದೆ.

Covid death relief fund - ಬಿಪಿಎಲ್ ಕುಟುಂಬಕ್ಕೆ 1.5 ಲಕ್ಷ ಮತ್ತು ಉಳಿದವರಿಗೆ 50 ಸಾವಿರ ರೂಪಾಯಿ.

ರಾಜ್ಯಸರ್ಕಾರದ ಸಂಧ್ಯಾ ಸುರಕ್ಷಾ ಯೋಜನೆಯಡಿ ಬಿಪಿಎಲ್ ಕುಟುಂಬಕ್ಕೆ ಒಂದು ಲಕ್ಷ ರೂಪಾಯಿ ಮತ್ತು SDRF ನಿಂದ 50,000 ರೂ. ಸೇರಿ 1.5 ಲಕ್ಷ ರೂ. ನೀಡಲಾಗುವುದು.

ಬಿಪಿಎಲ್ ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಮಂದಿ ಕೊರೋನಾದಿಂದ ಮೃತಪಟ್ಟಿದ್ದರೆ ಮೊದಲ ವ್ಯಕ್ತಿಗೆ 1.5 ಲಕ್ಷ ರೂ., ಉಳಿದವರಿಗೆ 50,000 ರೂ. ಪರಿಹಾರ ಸಿಗಲಿದೆ.

ಬಿಪಿಎಲ್ ಯೇತರ ಕುಟುಂಬದಲ್ಲಿ ಒಂದು ಅಥವಾ ಒಂದಕ್ಕಿಂತ ಹೆಚ್ಚು ವ್ಯಕ್ತಿಗಳು ಮೃತಪಟ್ಟಿದ್ದಲ್ಲಿ SDRF ನಿಂದ ತಲಾ 50,000 ರೂ. ನೀಡಲಾಗುವುದು ಎಂದು ಹೇಳಲಾಗಿದೆ.

Covid death relief fund – ಬಿಪಿಎಲ್ ಕುಟುಂಬಕ್ಕೆ 1.5 ಲಕ್ಷ ಮತ್ತು ಉಳಿದವರಿಗೆ 50 ಸಾವಿರ ರೂಪಾಯಿ.

 

 

 

 

Leave a Comment