Duties of village accountant-ಗ್ರಾಮ ಲೆಕ್ಕಾಧಿಕಾರಿಯ ಕರ್ತವ್ಯಗಳು.

ಸ್ನೇಹಿತರೆ, ಇವತ್ತಿನ ಪೋಸ್ಟ್ನಲ್ಲಿ ಗ್ರಾಮ ಲೆಕ್ಕಾಧಿಕಾರಿಯ ಕರ್ತವ್ಯಗಳು ಏನೇನಿರುತ್ತೆ? ಗ್ರಾಮ ಸುಧಾರಣೆ ಮಾಡಲು ಹಾಗೆ ಸಾರ್ವಜನಿಕರಿಗೆ ಸಹಾಯವಾಗುವಂತಹ ಕೆಲಸಗಳು, ಭೂಕಂದಾಯ ಇಲಾಖೆಗೆ ಸಂಬಂಧಪಟ್ಟ ಕೆಲಸ, ತಹಶೀಲ್ದಾರ್ ಕಚೇರಿಯಲ್ಲಿ ಏನೇನು ಕೆಲಸಗಳು ಇರುತ್ತೆ ಗ್ರಾಮ ಲೆಕ್ಕಾಧಿಕಾರಿಗೆ, ಹಳ್ಳಿ ಅಭಿವೃದ್ಧಿಯಾಗಲು ಗ್ರಾಮ ಲೆಕ್ಕಾಧಿಕಾರಿಯ ಪಾತ್ರ ಎಷ್ಟು ಮುಖ್ಯಇದೆಲ್ಲದರ ಬಗ್ಗೆ ನೀವು ಈ ಪೋಸ್ಟ್ನಲ್ಲಿ ತಿಳಿದುಕೊಳ್ಳಲು ಇದ್ದೀರಾ.

Duties of village accountant-ಗ್ರಾಮ ಲೆಕ್ಕಾಧಿಕಾರಿಯ ಕರ್ತವ್ಯಗಳು.

ಕರ್ನಾಟಕ ಭೂ ಕಂದಾಯ ಕಾಯ್ದೆಯ ಪ್ರಕಾರ ಗ್ರಾಮ ಲೆಕ್ಕಾಧಿಕಾರಿ ಅವರನ್ನು ಜಿಲ್ಲಾಧಿಕಾರಿ ನೇಮಕ ಮಾಡುತ್ತಾರೆ. ಗ್ರಾಮ ಲೆಕ್ಕಿಗರು ತಹಶೀಲ್ದಾರ್ ಅವರ ಸೂಚನೆಯನ್ನು ಪಾಲಿಸಿಕೊಂಡು ಅವರ ಅಧೀನದಲ್ಲಿ ಕೆಲಸ ಮಾಡುತ್ತಾರೆ. ಹಾಗಾದರೆ ಗ್ರಾಮಲೆಕ್ಕಾಧಿಕಾರಿ ಕರ್ತವ್ಯಗಳು ಯಾವುವು? ಒಂದೊಂದಾಗಿ ನೋಡೋಣ.

 1. ಗ್ರಾಮ ಲೆಕ್ಕಾಧಿಕಾರಿ ಅವರು ಗ್ರಾಮಕ್ಕೆ ಸಂಬಂಧಿಸಿದ ಭೂಕಂದಾಯ ದಾಖಲೆಗಳ ನಿರ್ವಹಣೆ ಮಾಡಬೇಕು.
 2. ನಿಮ್ಮ ಗ್ರಾಮದಲ್ಲಿ ಜಮೀನುಗಳ ಕಂದಾಯ ವಸೂಲಿ ವರದಿ ಸಲ್ಲಿಸುವುದು ಸಹ ಗ್ರಾಮ ಲೆಕ್ಕಿಗರಿಗೆ ಸರ್ಕಾರ ಕೆಲಸ ನೀಡಿರುತ್ತದೆ.
 3. ಗ್ರಾಮದಲ್ಲಿ ನಡೆಯುವ ಜನನ ಮತ್ತು ಮರಣಗಳ ನೋಂದಣಿಯ ಕರ್ತವ್ಯಗಳಲ್ಲಿ ಪ್ರಮುಖ ಪಾತ್ರ ಗ್ರಾಮ ಲೆಕ್ಕಾಧಿಕಾರಿ ಅವರದ್ದು ಆಗಿರುತ್ತೆ.
 4. ನೈಸರ್ಗಿಕವಾಗಿ ಬೆಳೆ ಹಾನಿಯಾದಾಗ ಸರ್ಕಾರಕ್ಕೆ ಬೆಳೆ ಹಾನಿಯಾಗಿರುವ ವರದಿ ಸಲ್ಲಿಸುವುದು, ಒಂದು ವೇಳೆ ಸರ್ಕಾರ ಬೆಳೆ ಹಾನಿ ಪರಿಹಾರ ಘೋಷಣೆ ಮಾಡಿದ್ದೇ ಆಗಿದ್ದಲ್ಲಿ ಬೆಳೆ ಪರಿಹಾರ ಕೊಡಿಸುವಲ್ಲಿ ಗ್ರಾಮ ಲೆಕ್ಕಾಧಿಕಾರಿಯ ಪಾತ್ರ ಮುಖ್ಯವಾಗಿರುತ್ತದೆ.
 5. ಗ್ರಾಮ ಲೆಕ್ಕಾಧಿಕಾರಿ ಸೇವೆ ಸಲ್ಲಿಸುತ್ತಿರುವ ಪ್ರದೇಶದಲ್ಲಿನ ನಾಗರಿಕರಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಂಶವೃಕ್ಷ ಪ್ರಮಾಣ ಪತ್ರ, ವೃದ್ಧಾಪ್ಯ ವೇತನ, ಅಂಗವಿಕಲ ವೇತನ, ವಿಧವಾ ವೇತನ, ಸಂಧ್ಯಾ ಸುರಕ್ಷಾ ವೇತನ, ಮೈತ್ರಿ ಮತ್ತು ಮನಸ್ವಿನಿ ಹೀಗೆ ಹಲವಾರು ಅವರ ಅಡಿಯಲ್ಲಿ ಬರುವ ಪ್ರಮಾಣಪತ್ರಗಳು ಗ್ರಾಮ ಲೆಕ್ಕಾಧಿಕಾರಿ ಕೈಗೊಂಡ ಸ್ಥಾನಿಕ ವಿಚಾರಣೆ ಆಧರಿಸಿ ತಾಶೀಲ್ದಾರ್ ಅವರು ಮಂಜೂರು ಮಾಡುತ್ತಾರೆ.
 6. ಗ್ರಾಮಗಳಲ್ಲಿ ಬರಗಾಲ ಸಮಯದಲ್ಲಿ ಕುಡಿಯುವ ನೀರಿನ ಬಗ್ಗೆ ಸಮಸ್ಯೆಗೆ ಗಮನಹರಿಸ ಬೇಕಾಗಿರುವುದು ಗ್ರಾಮ ಲೆಕ್ಕಾಧಿಕಾರಿ ಯವರ ಕರ್ತವ್ಯವಾಗಿದೆ.
 7. ಮುಖ್ಯವಾಗಿ ಹೊಸ ಬಿಪಿಎಲ್ ರೇಷನ್ ಕಾರ್ಡ್ ಬಗ್ಗೆ ನಾಗರಿಕರು ಅರ್ಹತೆ ಹೊಂದಿದ್ದಾರೋ ಅಥವಾ ಇಲ್ಲವೋ ಎಂದು ಗ್ರಾಮ ಲೆಕ್ಕಾಧಿಕಾರಿ ವರದಿ ನೀಡುವುದು, ಹೇಗೆಂದರೆ ಭೂದಾಖಲೆಗಳ ಪರಿಶೀಲನೆ ಕರ್ತವ್ಯ ಅವರದ್ದಾಗಿರುತ್ತದೆ.
 8. ಪ್ರತಿವರ್ಷ ಬೆಳೆದಿರುವ ಬೆಳೆಯನ್ನು ಬೆಳೆ ನೋಂದಣಿ ಮಾಡುವುದು ಇವರ ಪ್ರಮುಖ ಕಾರ್ಯವಾಗಿದೆ. ಪ್ರತಿವರ್ಷ ನಿಮ್ಮ ಜಮೀನಿನಲ್ಲಿರುವ ಬೆಳೆಯ ನೋಂದಣಿ ಮಾಡುವುದು.
 9. ಭೂ ಮಂಜೂರಾತಿ, ಭೂಸುಧಾರಣೆ, ಭೂಸ್ವಾಧೀನ ,ಅಕ್ರಮ ಸಕ್ರಮ ಪ್ರಕಾರಗಳಲ್ಲಿನ ಪ್ರಸ್ತಾವನೆ ಸಲ್ಲಿಸಲು ಕಂದಾಯ ನಿರೀಕ್ಷಕರಿಗೆ ಮಾಹಿತಿ ಸಲ್ಲಿಸುವುದು ಸಹ ಗ್ರಾಮಲೆಕ್ಕಿಗರ ಮುಖ್ಯ ಕರ್ತವ್ಯ ಆಗಿದೆ.
 10. ಮುಖ್ಯವಾಗಿ ಸರ್ಕಾರಿ ಜಮೀನನ್ನು ಜನರು ಆಕ್ರಮಿಸಿಕೊಂಡರೆ ಅದನ್ನು ತಡೆಯುವಂತಹ ಕೆಲಸ ಗ್ರಾಮ ಲೆಕ್ಕಾಧಿಕಾರಿಗಳು ಮಾಡುವುದು.
 11. ಗ್ರಾಮಲೆಕ್ಕಾಧಿಕಾರಿಯು ತನ್ನ ವ್ಯಾಪ್ತಿಯಲ್ಲಿ ಭೂ ವಿವಾದ ಇದ್ದರೆ ಅದರ ಪಂಚನಾಮೆಯಲ್ಲಿ ಪ್ರಮುಖವಾಗಿ ಭಾಗವಹಿಸುವುದು.
 12. ಆಯಾ ಗ್ರಾಮಗಳ ಕಂದಾಯ ಆಡಳಿತವನ್ನು ವಿಮರ್ಶಿಸಿ ಸರಿಪಡಿಸುವುದು ಆಗಿದ್ದಲ್ಲದೆ ಸರಕಾರಕ್ಕೆ ಸಂದಾಯವಾದ ಹಾಗೂ ಸಂದಾಯವಾಗಬೇಕಿರುವ ಲೆಕ್ಕಪತ್ರವನ್ನು ಸರಿಪಡಿಸುವುದು.
 13. ಗ್ರಾಮದ ನಕಾಶೆಗಳನ್ನು ಸಿದ್ಧಪಡಿಸುವುದು, ನಕಾಶೆಯಲ್ಲಿ ಗ್ರಾಮದಲ್ಲಿ ಹರಿಯುವ ನದಿ, ನಾಲೆ, ಹಳ್ಳ, ರಸ್ತೆ, ಕೆರೆ ಹೀಗೆ ಪ್ರಮುಖ ಗುರುತುಗಳನ್ನು ಅಂದರೆ ನಕಾಶೆಯಲ್ಲಿ ಇದರ ಗುರುತುಗಳನ್ನು ಸಿದ್ಧಪಡಿಸುವುದು.
 14. ಗ್ರಾಮಗಳಲ್ಲಿನ ಹಕ್ಕು ಬದಲಾವಣೆ ಪ್ರಕರಣ ವಿಲೇವಾರಿ ಮಾಡುವುದು ಜೊತೆಗೆ ಸಾರ್ವಜನಿಕರಿಗೆ ಇತರ ಇಲಾಖೆಗೆ ಗ್ರಾಮಮಟ್ಟದ ಅಂಕಿಅಂಶಗಳ ಪ್ರಾರಂಭಿಕ ದಾಖಲೆ ಮಾಹಿತಿ ನೀಡುವುದು. ಇವೆಲ್ಲವೂ ಗ್ರಾಮಲೆಕ್ಕಾಧಿಕಾರಿ ಅವರ ಪ್ರಮುಖ ಕರ್ತವ್ಯ ಗಳಾಗಿವೆ.

 

 

Leave a Comment