ಇ- ಶ್ರಮ್ ಕಾರ್ಡ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದು ಹೇಗೆ? ಯಾರೆಲ್ಲಾ ಅಪ್ಲೈ ಮಾಡಬಹುದು? E-shram Card |
ಇ- ಶ್ರಮ್ ಕಾರ್ಡ್
ಇ- ಶ್ರಮ್ ಕಾರ್ಡನ್ನು ಪಡೆಯುವುದರಿಂದ ಪ್ರತಿಯಾಬ್ಬ ಕಾರ್ಮಿಕರಿಗೆ ಹಲವು ಪ್ರಯೋಜನಗಳು ಸಿಗಲಿದೆ. ಇದಕ್ಕಾಗಿಯೇ ಕೇಂದ್ರ ಸರಕಾರವು ಇ- ಶ್ರಮ್ ಪೋರ್ಟಲ್ ಅನ್ನು ಪ್ರಾರಂಭ ಮಾಡಿದೆ. ಆನ್ಲೈನ್ ಮೂಲಕ ನೀವು ಆಟೋ ರಿಜಿಸ್ಟ್ರೇಷನ್ ಮೂಲಕ ಇ- ಶ್ರಮ್ ಕಾರ್ಡನ್ನು ಪಡೆದುಕೊಳ್ಳಬಹುದಾಗಿದೆ. ಹಾಗಾಗಿಯೇ ಕೇಂದ್ರ ಸರಕಾರವು ಇ- ಶ್ರಮ್ ಕಾರ್ಡನ್ನು ಜಾರಿಗೆ ತಂದಿದೆ.ಇ- ಶ್ರಮ್ ಕಾರ್ಡನ್ನು ಯಾವೆಲ್ಲ ವರ್ಗದ ಜನರು ಮಾಡಬಹುದು ಎಂದು ನೋಡುವುದಾದರೆ,
ಇ- ಶ್ರಮ್ ಕಾರ್ಡ್ ಗೆ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು.
ಸಣ್ಣ ಮತ್ತು ಕನಿಷ್ಠ ರೈತರು, ಕೃಷಿ ಕಾರ್ಮಿಕರು, ಮೀನುಗಾರರು, ಪಶುಸಂಗೋಪನೆಯಲ್ಲಿ ತೊಡಗಿರುವವರು, ಬಿಡಿ ತಯಾರಿಕೆಯಲ್ಲಿ ತೊಡಗಿರುವವರು, ಲೇಬಲ್ ಮತ್ತು ಪ್ಯಾಕಿಂಗ್ ಮಾಡುವವರು, ಕಟ್ಟಡ ಮತ್ತು ನಿರ್ಮಾಣ ಕೆಲಸ ಮಾಡುವವರು, ಚರ್ಮದ ಕೆಲಸಗಾರರು, ನೇಕಾರರು, ಬಡಗಿ ಕೆಲಸದವರು, ಇಟ್ಟಿಗೆ ಗೂಡು ಮತ್ತು ಕಲ್ಲು ಕ್ವಾರಿಗಳಲ್ಲಿ ಕೆಲಸ ಮಾಡುವವರು ಹಾಗೂ ಆಶಾ ಕಾರ್ಯಕರ್ತೆಯರು, ಬೃಹತ್ ಕಾರ್ಮಿಕರು, ಕ್ಷೌರಿಕರು, ಹಣ್ಣು ಮತ್ತು ತರಕಾರಿ ಮಾರಾಟಗಾರರು ಬೀದಿ ಬದಿ ವ್ಯಾಪಾರಿಗಳು ಸುದ್ದಿಪತ್ರಿಕೆ ಮಾರಾಟಗಾರರು, ಆಟೋ ಚಾಲಕರು ಮತ್ತು ಟ್ಯಾಕ್ಸಿ ಚಾಲಕರು, ಟ್ಯಾನರಿ ಕೆಲಸಗಾರರು ಮತ್ತು ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಕೆಲಸ ಮಾಡುವವರು, ಗೃಹ ಸೇವಕರು ಹಾಗೂ ಹಾಲು ಮಾರುವವರು ಹಾಗೂ ವಲಸೆ ಕಾರ್ಮಿಕರು ಹೀಗೆ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವಂತಹ ಪ್ರತಿಯೊಬ್ಬ ಕಾರ್ಮಿಕರು ಇ ಶ್ರಮ್ ಯೋಜನೆಗೆ ನೋಂದಾಯಿಸಿಕೊಳ್ಳಬಹುದಾಗಿದೆ.
ಇ- ಶ್ರಮ್ ಕಾರ್ಡ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದು ಹೇಗೆ? ಯಾರೆಲ್ಲಾ ಅಪ್ಲೈ ಮಾಡಬಹುದು? E-shram Card |
ಇ- ಶ್ರಮ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು
ಕಾರ್ಮಿಕರು ಇ ಶ್ರಮ್ ಕಾರ್ಡ್ ಪಡೆಯಲು 16 ರಿಂದ 59 ವರ್ಷಗಳನ್ನು ಕೇಂದ್ರ ಸರ್ಕಾರವು ನಿಗದಿಪಡಿಸಿದೆ. ಇ ಶ್ರಮ್ ಕಾರ್ಡ್ ಪಡೆಯಲು ಬೇಕಾಗುವ ದಾಖಲಾತಿಗಳು ಯಾವುದೆಂದರೆ,
- ಆಧಾರ್ ಕಾರ್ಡ್
- ಆಧಾರ್ ಕಾರ್ಡ್ಗೆ ಲಿಂಕ್ ಆಗಿರುವ ಫೋನ್ ನಂಬರ್
- ರೇಷನ್ ಕಾರ್ಡ್
- ಚಾಲ್ತಿಯಲ್ಲಿರುವ ಬ್ಯಾಂಕ್ ಪಾಸ್ ಪುಸ್ತಕ
ಇ- ಶ್ರಮ್ ಕಾರ್ಡ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದು ಹೇಗೆ? ಯಾರೆಲ್ಲಾ ಅಪ್ಲೈ ಮಾಡಬಹುದು? E-shram Card |
ಎಲ್ಲಾ ದಾಖಲಾತಿಗಳು ಇ ಶ್ರಮ್ ಕಾರ್ಡ್ ಪಡೆಯಲು ಕಡ್ಡಾಯವಾಗಿರುತ್ತದೆ.ಇ ಶ್ರಮ್ ಕಾಡ್ ಮಾಡಿಸಿಕೊಳ್ಳುವುದರಿಂದ ಕೇಂದ್ರ ಸರಕಾರದಿಂದ ಕಾರ್ಮಿಕರಿಗೆ ಯಾವೆಲ್ಲಾ ಸೌಲಭ್ಯಗಳು ಸಿಗಲಿದೆ ಎಂದು ನೋಡುವುದಾದರೆ,
PPF account -ತಿಂಗಳಿಗೆ 1000 ರೂಪಾಯಿ ಹೂಡಿಕೆ ಮಾಡಿ 12 ಲಕ್ಷ ಗಳಿಸಿ.
ಇ ಶ್ರಮ್ ಕಾರ್ಡ್ನಲ್ಲಿ ನೀವು ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆಯಡಯಲ್ಲಿ 2 ಲಕ್ಷದವರೆಗೂ ವಿಮಾ ರಕ್ಷಣೆಯನ್ನು ಪಡೆಯುವಿರಿ ಅಂದರೆ 2 ಲಕ್ಷ ರೂಪಾಯಿಗಳ ಇನ್ಶೂರೆನ್ಸ್ ಅನ್ನು ಉಚಿತವಾಗಿ ಪಡೆಯುತ್ತೀರಿ.
ಅಪಘಾತದಲ್ಲಿ ಕಾರ್ಮಿಕನು ಸಾವನ್ನಪ್ಪಿದರೆ 2 ಲಕ್ಷ ರೂಪಾಯಿಗಳನ್ನು ನಾಮಿನಿಗೆ ನೀಡಲಾಗುವುದು. ಹಾಗೂ ಅಂಗವೈಫಲ್ಯ ವಾದಲ್ಲಿ ಒಂದು ಲಕ್ಷ ರೂಪಾಯಿಗಳನ್ನು ನೀಡಲಾಗುತ್ತದೆ.
ಕೇಂದ್ರ ಸರ್ಕಾರದಿಂದ ನೀಡುವ ಹಲವಾರು ಯೋಜನೆಗಳಿಗೆ ಇ ಶ್ರಮ್ ಕಾರ್ಡ್ನಿಂದ ವಿವಿಧ ಯೋಜನೆಗಳಿಗೆ ಅರ್ಜಿಯನ್ನು ಸಲ್ಲಿಸಲು ಸಲ್ಲಿಸಲು ಸಹಾಯವಾಗುತ್ತದೆ.
ಇ- ಶ್ರಮ್ ಕಾರ್ಡ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದು ಹೇಗೆ? ಯಾರೆಲ್ಲಾ ಅಪ್ಲೈ ಮಾಡಬಹುದು? E-shram Card |