Ganga Kalyana Yojana 2021-ರಾಜ್ಯ ಸರ್ಕಾರದಿಂದ ರೈತರಿಗೆ ಉಚಿತ ಬೋರ್ವೇಲ್ ಈಗಲೇ ಅರ್ಜಿ ಸಲ್ಲಿಸಿ.

Ganga Kalyana Yojana 2021-ರಾಜ್ಯ ಸರ್ಕಾರದಿಂದ ರೈತರಿಗೆ ಉಚಿತ ಬೋರ್ವೇಲ್.

ರಾಜ್ಯ ಸರ್ಕಾರದ ವತಿಯಿಂದ ಗಂಗಾಕಲ್ಯಾಣ ನೀರಾವರಿ ಯೋಜನೆಯ ಅಡಿಯಲ್ಲಿ ರೈತರು ತಮ್ಮ ಜಮೀನುಗಳಲ್ಲಿ ಉಚಿತವಾಗಿ ಬೋರ್ವೆಲ್ ಮತ್ತು ಕೊಳವೆ ಬಾವಿಯನ್ನು ಹಾಕಿಸಿಕೊಳ್ಳಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತಿ ಇರುವಂತಹ ರೈತರು ತಾವು ಸಹ ತಮ್ಮ ಜಮೀನಿನಲ್ಲಿ ಉಚಿತವಾಗಿ ಬೋರ್ವೆಲ್ ಮತ್ತು ಕೊಳವೆಬಾವಿಯನ್ನು ಹಾಕಿಸಿಕೊಳ್ಳಬಹುದು. ಹಾಗಾದರೆ ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು, ಅರ್ಜಿಯನ್ನು ಸಲ್ಲಿಸಲು ಯಾವೆಲ್ಲಾ ದಾಖಲಾತಿಗಳು ಬೇಕು?ಗಂಗಾ ಕಲ್ಯಾಣ ಯೋಜನೆಯಲ್ಲಿ ಬೋರ್ವೆಲ್ ಹಾಕಿಸಿಕೊಳ್ಳಲು ಸರ್ಕಾರದಿಂದ ಎಷ್ಟು ಸಬ್ಸಿಡಿ ಹಣ ಸಿಗುತ್ತದೆ? ಗಂಗಾ ಕಲ್ಯಾಣ ಯೋಜನೆಯ ಲಾಭ ಪಡೆಯಲು ಎಂತಹ ರೈತರು ಅರ್ಜಿಯನ್ನು ಸಲ್ಲಿಸಬೇಕು? ಗಂಗಾ ಕಲ್ಯಾಣ ಯೋಜನೆಯ ಎಲ್ಲಾ ಮಾಹಿತಿಯನ್ನು ನೀವು ಈ ಪೋಸ್ಟ್ನಲ್ಲಿ ತಿಳಿಯಲು ಇದ್ದೀರಾ.

Ganga Kalyana Yojana 2021-ರಾಜ್ಯ ಸರ್ಕಾರದಿಂದ ರೈತರಿಗೆ ಉಚಿತ ಬೋರ್ವೇಲ್.

Ganga Kalyana Yojana 2021-ರಾಜ್ಯ ಸರ್ಕಾರದಿಂದ ರೈತರಿಗೆ ಉಚಿತ ಬೋರ್ವೇಲ್.

ಗಂಗಾ ಕಲ್ಯಾಣ ಯೋಜನೆಯಲ್ಲಿ ಅರ್ಜಿ ಸಲ್ಲಿಸಲು ರೈತರಿಗೆ ಅನುಕೂಲವಾಗಲೆಂದು ತಮ್ಮ ತಮ್ಮ ಜಮೀನಿನಲ್ಲಿ ಉಚಿತವಾಗಿ ಬೋರ್ವೆಲ್ ಹಾಕಿಸಿಕೊಳ್ಳಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.ಈ ಯೋಜನೆಯಲ್ಲಿ ಲಾಭ ಪಡೆಯಲು ಏನೆಲ್ಲಾ ಅರ್ಹತೆ ಹೊಂದಿರಬೇಕೆಂದರೆ,

  • ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಲು ರೈತರ ವಯಸ್ಸು ಕನಿಷ್ಠ 18 ವರ್ಷ ಗರಿಷ್ಠ 55 ವರ್ಷದ ಒಳಗೆ ಇರಬೇಕು.
  • ಕುಟುಂಬದ ವಾರ್ಷಿಕ ಆದಾಯವು ಗ್ರಾಮೀಣ ಪ್ರದೇಶದವರಿಗೆ 1 ಲಕ್ಷದ 50 ಸಾವಿರದ ಒಳಗೆ ಇರಬೇಕು. ನಗರ ಪ್ರದೇಶದವರಿಗೆ ವಾರ್ಷಿಕ ಆದಾಯವು 2 ಲಕ್ಷ ರೂಪಾಯಿಯ ಒಳಗೆ ಇರಬೇಕು.
  • ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
  • ಒಂದು ಕುಟುಂಬದ ಒಬ್ಬ ಸದಸ್ಯನಿಗೆ ಮಾತ್ರ ಸೌಲಭ್ಯ ಒದಗಿಸಲಾಗುವುದು.
  • ಸರ್ಕಾರ ಅಥವಾ ನಿಗಮದಿಂದ ಬೇರೆ ಯಾವುದೇ ಯೋಜನೆಯಲ್ಲಿ ಸಾಲ ಅಥವಾ ಇತರೆ ಆರ್ಥಿಕ ಸಹಾಯ ಪಡೆದಿರಬಾರದು.
  • ಸರ್ಕಾರಿ ಅಥವಾ ಅರೆ ಸರ್ಕಾರಿ ಸಂಸ್ಥೆಗಳಲ್ಲಿ ನೌಕರಿಯಲ್ಲಿ ಇರಬಾರದು.

Ganga Kalyana Yojana 2021-ರಾಜ್ಯ ಸರ್ಕಾರದಿಂದ ರೈತರಿಗೆ ಉಚಿತ ಬೋರ್ವೇಲ್.

ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಲು ಇಷ್ಟೆಲ್ಲಾ ಅರ್ಹತೆಯನ್ನು ಹೊಂದಿರಬೇಕು. ಗಂಗಾ ಕಲ್ಯಾಣ ಯೋಜನೆಯಲ್ಲಿ ಅರ್ಜಿ ಸಲ್ಲಿಸಲು ರೈತರು ಕನಿಷ್ಠ ಮತ್ತು ಗರಿಷ್ಠ ಎಷ್ಟು ಜಮೀನು ಹೊಂದಿರಬೇಕು ಎಂದರೆ, ಮಲೆನಾಡು ಪ್ರದೇಶಗಳಾದ ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಕಾರವಾರ, ಹಾಸನ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ವಾಸಿಸುವಂತಹ ರೈತರು ಕನಿಷ್ಠ 1 ಎಕರೆ ಒಣಭೂಮಿಯನ್ನು ಹೊಂದಿರಬೇಕು. ಇನ್ನು ಉಳಿದ ಜಿಲ್ಲೆಗಳಲ್ಲಿ ಕನಿಷ್ಠ 1ಎಕರೆ 20 ಕುಂಟೆ ಗರಿಷ್ಠ 5 ಎಕರೆ ಒಳಗೆ ಒಣಭೂಮಿಯನ್ನು ಹೊಂದಿರಬೇಕು.

Jandhan account benefits 2021-ಜನಧನ ಖಾತೆಯ ಹೊಸ ಉಪಯೋಗಗಳು.

Ganga Kalyana Yojana 2021-ರಾಜ್ಯ ಸರ್ಕಾರದಿಂದ ರೈತರಿಗೆ ಉಚಿತ ಬೋರ್ವೇಲ್.

ಗಂಗಾ ಕಲ್ಯಾಣ ಯೋಜನೆಯಲ್ಲಿ ಬೋರ್ವೆಲ್ ಹಾಕಿಸಿಕೊಳ್ಳಲು ಸರ್ಕಾರದಿಂದ ರೈತರಿಗೆ ಎಷ್ಟು ಸಬ್ಸಿಡಿ ಸಿಗುತ್ತದೆ ಎಂದು ನೋಡುವುದಾದರೆ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಹಾಗೂ ತುಮಕೂರು ಈ ಜಿಲ್ಲೆಯಲ್ಲಿರುವ ಸಣ್ಣ ಮತ್ತು ಅತಿಸಣ್ಣ ರೈತರಿಗೆ ತಮ್ಮ ಜಮೀನಿನಲ್ಲಿ ಒಂದು ಬೋರ್ವೆಲ್ ಹಾಕಿಸಿ ಪಂಪ್ಸೆಟ್ ಮತ್ತು ಅದಕ್ಕೆ ಸಂಬಂಧಿಸಿದ ಉಪಕರಣಗಳನ್ನು ಸರಬರಾಜು ಮಾಡಿ ವಿದ್ಯುತ್ ಸಂಪರ್ಕ ಕಲ್ಪಿಸಿ ನೀರಾವರಿ ಸೌಲಭ್ಯ ಒದಗಿಸಲಾಗುವುದು. ಇದರ ವೆಚ್ಚ 4 ಲಕ್ಷದ 50 ಸಾವಿರ ರೂಪಾಯಿಗಳು ಆಗುತ್ತದೆ. ಇದರಲ್ಲಿ 4 ಲಕ್ಷ ರೂಪಾಯಿಗಳನ್ನು ಸರ್ಕಾರದಿಂದ ಸಹಾಯಧನ ನೀಡುತ್ತಾರೆ. ಅಂದರೆ ಈ 4 ಲಕ್ಷ ಸಬ್ಸಿಡಿ ಯಾಗಿರುತ್ತದೆ. ಈ 4 ಲಕ್ಷ ರೂಪಾಯಿಗಳನ್ನು ರೈತರು ಪಾವತಿಸುವಂತಿಲ್ಲ. ಉಳಿದಂತಹ 50 ಸಾವಿರ ರೂಪಾಯಿಗೆ 4% ಬಡ್ಡಿ ದರದಲ್ಲಿ ಬ್ಯಾಂಕುಗಳಿಂದ ಸಾಲ ನೀಡಲಾಗುವುದು.

Pradhan mantri krishi sinchai yojana-ಪ್ರಧಾನಮಂತ್ರಿ ಕೃಷಿ ಸಿಂಚಯಿ ಯೋಜನೆ 2021.

Ganga Kalyana Yojana 2021-ರಾಜ್ಯ ಸರ್ಕಾರದಿಂದ ರೈತರಿಗೆ ಉಚಿತ ಬೋರ್ವೇಲ್.

ಈ 50 ಸಾವಿರ ರೂಪಾಯಿಗಳನ್ನು ಪಾವತಿಸಲು ರೈತರಿಗೆ 3 ವರ್ಷಗಳ ಕಾಲಾವಕಾಶ ಇರುತ್ತದೆ. ಇನ್ನು ಉಳಿದಂತಹ ಜಿಲ್ಲೆಯಲ್ಲಿರುವ ರೈತರಿಗೆ ತಮ್ಮ ಹೊಲದಲ್ಲಿ ಕೊಳವೆಬಾವಿ ಕೊರೆಯಿಸಿ, ಬೋರ್ವೆಲ್ ಹಾಕಿಸಿ, ಪಂಪ್ಸೆಟ್ ಮತ್ತು ಅದಕ್ಕೆ ಸಂಬಂಧಿಸಿದ ಉಪಕರಣಗಳನ್ನು ಸರಬರಾಜು ಮಾಡಿ, ವಿದ್ಯುತ್ ಸಂಪರ್ಕ ಕಲ್ಪಿಸಿ, ನೀರಾವರಿ ಸೌಲಭ್ಯ ಒದಗಿಸಲಾಗುವುದು. ಇದರ ವೆಚ್ಚ 3 ಲಕ್ಷದ 50 ಸಾವಿರ ರೂಪಾಯಿಗಳು ಆಗುತ್ತದೆ. ಇದರಲ್ಲಿ 3 ರೂಪಾಯಿಗಳನ್ನು ಸರ್ಕಾರದಿಂದ ಸಹಾಯಧನವಾಗಿ ನೀಡುತ್ತಾರೆ. ಅಂದರೆ ಈ 3 ಲಕ್ಷ ರೂಪಾಯಿಗಳು ಸಬ್ಸಿಡಿ ಆಗಿರುತ್ತದೆ. ಈ 3 ಲಕ್ಷ ರೂಪಾಯಿಗಳನ್ನು ಪಾವತಿಸುವಂತಿಲ್ಲ, ಉಳಿದ 50 ಸಾವಿರ ರೂಪಾಯಿಗಳಿಗೆ 4% ಬಡ್ಡಿ ದರದಲ್ಲಿ ಬ್ಯಾಂಕಿನಿಂದ ಸಾಲ ನೀಡಲಾಗುವುದು.

20 lakh Business loan-ಉದ್ಯಮ ಶೀಲತ ಅಭಿವೃದ್ಧಿ ಯೋಜನೆ.

Ganga Kalyana Yojana 2021-ರಾಜ್ಯ ಸರ್ಕಾರದಿಂದ ರೈತರಿಗೆ ಉಚಿತ ಬೋರ್ವೇಲ್.

ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಲು ಯಾವೆಲ್ಲ ದಾಖಲಾತಿಗಳನ್ನು ಹೊಂದಿರಬೇಕೆಂದರೆ,

  1. RD ಸಂಖ್ಯೆಯಿರುವ ತಹಶೀಲ್ದಾರ್ ರಿಂದ ಪಡೆದಿರುವ ಜಾತಿ ಮತ್ತು ಆದಾಯ ದೃಢೀಕರಣ ಪತ್ರ ಇರಬೇಕು.
  2. ಪಡಿತರ ಚೀಟಿ ಅಂದರೆ ರೇಷನ್ ಕಾರ್ಡ್.
  3. ಆಧಾರ್ ಕಾರ್ಡ್.
  4. ಜಮೀನಿಗೆ ಸಂಬಂಧಿಸಿದ ಇತ್ತೀಚಿನ ಪಹಣಿ.
  5. ಇತ್ತೀಚಿನ 2 ಪಾಸ್ಪೋರ್ಟ್ ಸೈಜಿನ ಫೋಟೋ.
  6. ಚಾಲ್ತಿಯಲ್ಲಿರುವ ನಿಮ್ಮ ಬ್ಯಾಂಕ್ ಪಾಸ್ ಬುಕ್.
  7. ಸಣ್ಣ ಮತ್ತು ಅತಿ ಸಣ್ಣ ರೈತರ ಹಿಡುವಳಿ ಪ್ರಮಾಣಪತ್ರ.

What is mutual fund- ಮ್ಯೂಚುವಲ್ ಫಂಡ್ ನಲ್ಲಿ ಹಣ ಹೂಡಿಕೆ ಮಾಡುವುದು ಹೇಗೆ?

Ganga Kalyana Yojana 2021-ರಾಜ್ಯ ಸರ್ಕಾರದಿಂದ ರೈತರಿಗೆ ಉಚಿತ ಬೋರ್ವೇಲ್.

ಎಲ್ಲಾ ದಾಖಲಾತಿಗಳು ಕಡ್ಡಾಯವಾಗಿರುತ್ತದೆ.ಈ ಯೋಜನೆ ಅಡಿಯಲ್ಲಿ ಎಂತಹ ರೈತರು ಅರ್ಜಿ ಸಲ್ಲಿಸಬೇಕೆಂದರೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದಂತಹ ರೈತರು ಅರ್ಜಿಯನ್ನು ಸಲ್ಲಿಸಬೇಕು. ಈ ಯೋಜನೆಯಡಿಯಲ್ಲಿ ನೀವು ಎಲ್ಲಿ ಅರ್ಜಿಯನ್ನು ಸಲ್ಲಿಸಬೇಕು ಎಂದರೆ, ನಿಮ್ಮ ತಾಲೂಕು ಅಥವಾ ನಿಮ್ಮ ಜಿಲ್ಲೆಯಲ್ಲಿರುವ ಡಾ. ಬಿಆರ್ ಅಂಬೇಡ್ಕರ್ ಅಭಿವೃದಸರ್ಕಾರದಿಂದ್ಧಿ ನಿಗಮ ಮತ್ತು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ. ಈ ಎರಡು ಇಲಾಖೆಯ ಕಚೇರಿಗಳಲ್ಲಿ ಉಚಿತವಾಗಿ ಅರ್ಜಿಗಳನ್ನು ಪಡೆದು ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿಯನ್ನು ಸಲ್ಲಿಸಬೇಕು.

 

Leave a Comment