ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಪ್ರಚಲಿತ ವಿದ್ಯಮಾನಗಳಿಗೆ ಸಂಬಂಧಿಸಿದ ಪ್ರಶ್ನೋತ್ತರ .

1) ಬ್ರಹ್ಮೊಸ್ ಕ್ಷಿಪಣಿಯನ್ನು ಉಲ್ಲೇಖಿಸಿ, ಈಹೇಳಿಕೆಗಳನ್ನು ಪರಿಗಣಿಸಿ;
1. ಇದು ಎರಡು ಹಂತದ ಕ್ಷಿಪಣಿಯಾಗಿದ್ದು, ಮೊದಲ ಹಂತದಲ್ಲಿ ಘನ ಪ್ರೊಪೆಲ್ಲೆಂಟ್ ಮತ್ತು ಎರಡನೇ ಹಂತದಲ್ಲಿ ದ್ರವ ರಾಮೈಟ್ ಅನ್ನು ಹೊಂದಿದೆ.
2. ಇದನ್ನು ಭೂಮಿ ಮತ್ತು ಗಾಳಿಯ ಮೂಲಕ ಮಾತ್ರ ಉಡಾವಣೆ ಮಾಡಬಹುದು.
ಕೆಳಗಿನ ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
ಎ) 1 ಮಾತ್ರ
ಬಿ) 2 ಮಾತ್ರ
ಸಿ) 1 ಮತ್ತು 2
ಡಿ) ಯಾವುದು ಅಲ್ಲ
ಉತ್ತರ: 1- ಎ

2) ಕ್ರಿಸಾಲಿಸ್ (Chrysalis), ಇತ್ತೀಚೆಗೆ ಸುದ್ದಿಯಲ್ಲಿ ಕಾಣಿಸಿಕೊಂಡಿದ್ದು, ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?
ಎ) ಅನೇಕ ನದಿಯ ನಾಲೆಗಳನ್ನು ಹೊಂದಿರುವ ಮಂಗಳದ ನದಿ.
ಬಿ) ಮೊದಲೇಅಸ್ತಿತ್ವದಲ್ಲಿರುವ ಚಂದ್ರನು ಶನಿಯನ್ನು ತೊರೆದ ಸಾಧ್ಯತೆ.
ಸಿ) ವಾತಾವರಣದಲ್ಲಿ ಹೆಚ್ಚಿನ ಪ್ರಮಾಣದ ಆಮ್ಲಜನಕವನ್ನು ಹೊಂದಿರುವ ಹೊಸದಾಗಿ ಪತ್ತೆಯಾದ ಗ್ರಹ.
ಡಿ) ಪಶ್ಚಿಮ ಘಟ್ಟಗಳಲ್ಲಿ ಕಂಡುಬರುವ ಆಮೆ ಜಾತಿ.
ಉತ್ತರ: 2 – ಬಿ

3) ವಿಕ-ವಿಭಜಕ ಕ್ಯಾಪ್ಸುಲ್ ಗಳನ್ನು ಉಲ್ಲೇಖಿಸಿ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ;
1. ಇದು 15-20 ದಿನಗಳಲ್ಲಿ ಕಸದಿಂದ ಗೊಬ್ಬರಕ್ಕೆ ಕೊಳೆಯುವಿಕೆಯನ್ನು ವೇಗಗೊಳಿಸುತ್ತದೆ.
2. ಇದು ಆಮ್ಲಜನಕರಹಿತ ಕಳೆಯುವಿಕೆಯನ್ನು ವೇಗಗೊಳಿಸಲು ವಿಶೇಷ ವೈರಸ್ ಅನ್ನು ಒಳಗೊಂಡಿದೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ:
ಎ) 1 ಮಾತ್ರ
ಬಿ) 2 ಮಾತ್ರ
ಸಿ) 1 ಮತ್ತು 2
ಡಿ) ಯಾವುದು ಅಲ್ಲ
ಉತ್ತರ: 3 – ಎ

4) ಕೆಳಗಿನವುಗಳಲ್ಲಿ ಯಾವುದು ಮೂಗಿನ ಲಸಿಕೆ (Nasal Vaccine) ಪ್ರಯೋಜನಗಳು?
1. ಇವು ಆಕ್ರಮಣಶೀಲವಲ್ಲದ ಮತ್ತು ಸೂಜಿ-ಮುಕ್ತ.
2. ಇದಕ್ಕೆ ತರಬೇತಿ ಪಡೆದ ಆರೋಗ್ಯ ಕಾರ್ಯಕರ್ತರ ಅಗತ್ಯವಿಲ್ಲ.
3. ಅವು ಸಾಮಾನ್ಯವಾಗಿ ಹೆಚ್ಚಿನ ಅನುಸರಣೆ (high compliance)ಯನ್ನು ಖಚಿತಪಡಿಸುತ್ತವೆ.
ಕೆಳಗೆ ನೀಡಿರುವ ಕೋಡ್ಗಳನ್ನು ಬಳಸಿಕೊಂಡು ಸರಿಯಾದ ಉತ್ತರವನ್ನು ಆಯ್ಕೆಮಾಡಿ
ಎ) 1 ಮತ್ತು 2
ಸಿ) 1 ಮತ್ತು 3
ಬಿ) 2 ಮತ್ತು 3
ಡಿ) ಮೇಲಿನ ಎಲ್ಲಾ
ಉತ್ತರ: 4 – ಡಿ

5) eSIM ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ,ಹೇಳಿಕೆಗಳನ್ನು ಪರಿಗಣಿಸಿ;
1. ಸಾಮಾನ್ಯ ಸಿಮ್ಗಳಿಗಿಂತ ತುರ್ತು ಸಂದರ್ಭ ಗಳಲ್ಲಿ ಇ-ಸಿಮ್ಗಳು ಹೆಚ್ಚು ಸಹಾಯಕವಾಗಿವೆ.
2. ಒಂದು eSIM ಸಿಮ್ ಕಳ್ಳತನಕ್ಕೆ ಭದ್ರತೆಯನ್ನು ಒದಗಿಸುತ್ತದೆ, ಏಕೆಂದರೆ ಹೊರತೆಗೆಯಲು ಯಾವುದೇ ಭೌತಿಕ ಅಂಶವಿಲ್ಲ.
3. eSIM ಫೋನ್ಗಳು ಟೆಲಿಕಾಂ ಆಪರೇಟರ್ ಗಳಿಗೆ ಹೆಚ್ಚಿನ ನಿಯಂತ್ರಣವನ್ನು ಒದಗಿಸುತ್ತವೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
ಎ) 1 ಮತ್ತು 2 ಬಿ) 2 ಮತ್ತು 3 ಸಿ) 1 ಮತ್ತು 3
ಡಿ) ಮೇಲಿನ ಎಲ್ಲಾ
ಉತ್ತರ: 5 – ಬಿ

6) ಲಾಂಗ್ ರೇಂಜ್ ರೇಡಿಯೊ (Long Range Radio (LoRa)) ಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ;
1. ಇದು ಭೌತಿಕ ಪದರ (physical layer)ದಲ್ಲಿ ವೈರ್ಲೆಸ್ ಮಾಡ್ಯುಲೇಶನ್ ತಂತ್ರವಾಗಿದ್ದು, ಚಿರ್ಪ್ ಸ್ಟೆಡ್ ಸ್ಪೆಕ್ಟಮ್ಸ್ (chirp spread spectrum) ಅನ್ನು ಬಳಸಿಕೊಂಡು ದೀರ್ಘ ಶ್ರೇಣಿಯ ಸಂವಹನವನ್ನು ಅನುಮತಿಸುತ್ತದೆ.
2. LoRa ತಂತ್ರಜ್ಞಾನವು ಡೆಡಿಕೇಟೆಡ್ ರೇಡಿಯೋಗಳನ್ನು ಬಳಸುತ್ತದೆ. ಇದು ಸಾಮಾನ್ಯವಾಗಿ ಅಂತಿಮ ಬಳಕೆದಾರ ಸಾಧನಗಳಲ್ಲಿ ಇರುವುದಿಲ್ಲ,ಇತರ ಸಾಧನಗಳಿಂದ ಅಡಚಣೆಗಳನ್ನು ಸೀಮಿತಗೊಳಿಸುತ್ತದೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
ಎ) 1 ಮಾತ್ರ
ಬಿ) 2 ಮಾತ್ರ
ಸಿ) 1 ಮತ್ತು 2
ಡಿ) ಯಾವುದು ಅಲ್ಲ
ಉತ್ತರ: 6 – ಸಿ

7) ‘ACE2’ ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬಂದಿದೆ. ಇದು ಯಾವುದಕ್ಕೆ ಸಂಬಂಧಿಸಿದೆ.
ಎ) ಭಾರತ ಮತ್ತು ಚೀನಾ ನಡುವಿನ ದ್ವಿಪಕ್ಷೀಯ ಒಪ್ಪಂದ
ಬಿ) ಸುಸ್ಥಿರ ಕೃಷಿ ತಂತ್ರಗಳು
ಸಿ) ಬ್ಯಾಂಕ್ಗಳಲ್ಲಿ ಸುಸ್ತಿ ಸಾಲ ಕಡಿಮೆಯಾಗುತ್ತಿದೆ
ಡಿ) ಕೊರೋನಾವೈರಸ್ ದೇಹಕ್ಕೆ ಪ್ರವೇಶಿಸುವೆಕೆಗೆ
ಉತ್ತರ: 7 – ಡಿ

Leave a Comment