Government home loan scheme-ಸ್ವಂತ ಮನೆ ಇಲ್ಲದವರಿಗೆ ಗುಡ್ ನ್ಯೂಸ್.
ಸ್ವಂತ ಮನೆಯಿಲ್ಲದವರಿಗೆ ಸಿಹಿ ಸುದ್ದಿ, ಬೆಂಗಳೂರು ನಗರ ಜಿಲ್ಲೆಗಳಲ್ಲಿ ನಿರ್ಮಾಣ ಮಾಡುತ್ತಿರುವ 1 ಲಕ್ಷ ಬಹುಮಹಡಿ ಮನೆಗಳ ಮಂಜೂರಾತಿಗೆ ಸಂಬಂಧಿಸಿದಂತೆ ಅರ್ಜಿಗಳನ್ನು ಆಹ್ವಾನಿಸುವ ಪ್ರಕ್ರಿಯೆ ಆರಂಭವಾಗಲಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ಮುಖ್ಯಮಂತ್ರಿಗಳ 1 ಲಕ್ಷ ಬಹುಮಹಡಿ ಯೋಜನೆಯಲ್ಲಿ ಈ ಹಿಂದೆ ಅರ್ಜಿ ಸಲ್ಲಿಸಿದಂತಹ ಅರ್ಹ ಫಲಾನುಭವಿಗಳಿಗೆ 2021 ಆಗಸ್ಟ್ 15ರಂದು ರಾಜ್ಯದ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪನವರು 5000 ಮನೆಗಳನ್ನು ವಿತರಿಸಲಿದ್ದಾರೆ. ಈ ಕುರಿತು ವಸತಿ ಸಚಿವರಾದ ವಿ ಸೋಮಣ್ಣನವರು ಮಾಹಿತಿಯನ್ನು ನೀಡಿದ್ದಾರೆ.
Government home loan scheme-ಸ್ವಂತ ಮನೆ ಇಲ್ಲದವರಿಗೆ ಗುಡ್ ನ್ಯೂಸ್.
1 ಲಕ್ಷ ಬಹುಮಹಡಿ ಮನೆಗಳ ಯೋಜನೆಯ ಅನುಷ್ಠಾನ ಕುರಿತಂತೆ ರಾಜೀವ್ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಈ ಮಾಹಿತಿಯನ್ನು ಪ್ರಕಟಿಸಲಾಗಿದೆ ಎಂದು ತಿಳಿಸಲಾಗಿದೆ. ಪ್ರಧಾನಮಂತ್ರಿಗಳ ಆಶಯದಂತೆ ಬಡವರಿಗೆ ಮನೆಗಳನ್ನು ವಿತರಿಸುವ ಈ ಯೋಜನೆಗಾಗಿ ಬೆಂಗಳೂರು ನಗರ, ಜಿಲ್ಲೆ ವ್ಯಾಪ್ತಿಯಲ್ಲಿ ಕಂದಾಯ ಇಲಾಖೆ ಹಾಗೂ ಇನ್ನಿತರ ಸರ್ಕಾರಿ ಸಂಸ್ಥೆಗಳಿಂದ 515 ಎಕರೆ ಭೂಮಿಯನ್ನು ಪಡೆಯಲಾಗಿದೆ. ಮೊದಲ ಹಂತದಲ್ಲಿ 46998 ಮನೆಗಳ ನಿರ್ಮಾಣ ಕಾರ್ಯಕ್ಕೆ ಆದೇಶವನ್ನು ನೀಡಲಾಗಿದೆ. ಈಗಾಗಲೇ ಬಾಕಿ ಇರುವ 42361 ಮನೆಗಳ ನಿರ್ಮಾಣ ಕಾರ್ಯ ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿದೆ.
DAY-NULM scheme- ಬಿಪಿಎಲ್ ಕಾರ್ಡ್ ಇದ್ದವರಿಗೆ ಸ್ವಂತ ಉದ್ಯೋಗ ಲೋನ್.https://mahithimithra.com/day-nulm-scheme/
Government home loan scheme-ಸ್ವಂತ ಮನೆ ಇಲ್ಲದವರಿಗೆ ಗುಡ್ ನ್ಯೂಸ್.
2022ರ ನವೆಂಬರ್ ವೇಳೆಗೆ 80000 ಮನೆಗಳನ್ನು ಹೊಸದಾಗಿ ನಿರ್ಮಿಸಲಾಗುವುದೆಂದು ವಸತಿ ಸಚಿವರಾದ ವಿ ಸೋಮಣ್ಣನವರು ತಿಳಿಸಿದ್ದಾರೆ.’ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಸೀಮಿತವಾಗಿದ್ದ ಸೌಲಭ್ಯವನ್ನು ಬೆಂಗಳೂರು ನಗರ ಜಿಲ್ಲೆಗೆ ವಿಸ್ತರಿಸಲಾಗಿದ್ದು ಕುಟುಂಬದ ವಾರ್ಷಿಕ ಆದಾಯ ಮಿತಿಯನ್ನು 87600 ರೂಪಾಯಿಯಿಂದ 3 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಈ ಹಿಂದೆ ನಗರದಲ್ಲಿ ಒಂದಿಂಚು ಭೂಮಿಯನ್ನು ಹೊಂದದೆ ಮನೆಗಳನ್ನು ವಿತರಿಸಲು ಅರ್ಜಿಯನ್ನು ಆಹ್ವಾನಿಸಲಾಗಿತ್ತು. ಹೀಗಾಗಿ ಈ ಹಿಂದೆ ಸಲ್ಲಿಸಿದಂತಹ ಕೆಲವು ಅರ್ಜಿಗಳನ್ನು ರದ್ದುಪಡಿಸಲಾಗಿದೆ. ಈಗ ಹೊಸದಾಗಿ ಅರ್ಜಿಗಳನ್ನು ಆಹ್ವಾನಿಸಲಾಗುತ್ತಿದೆ. ಈ ಹಿಂದೆ ಅರ್ಜಿ ಸಲ್ಲಿಸಿದವರು ಸಹ ಈಗ ಹೊಸದಾಗಿ ಅರ್ಜಿಗಳನ್ನು ಸಲ್ಲಿಸಬಹುದೆಂದು ಹೇಳಿಕೆಯನ್ನು ನೀಡಿದ್ದಾರೆ.
ಹಾಗಾದರೆ ವಸತಿ ಯೋಜನೆಗೆ ಅರ್ಜಿ ಸಲ್ಲಿಸುವಂತಹ ಅರ್ಹ ಫಲಾನುಭವಿಗಳು ಯಾವೆಲ್ಲಾ ದಾಖಲಾತಿಗಳನ್ನು ಹೊಂದಿರಬೇಕೆಂದು ತಿಳಿಯೋಣ.
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಆಧಾರ್ ಕಾರ್ಡ್
- ಪಾನ್ ಕಾರ್ಡ್
- ಮತದಾರರ ಗುರುತಿನ ಚೀಟಿ
- ವಾಸಸ್ಥಳ ದೃಢೀಕರಣ ಪತ್ರ
- ಬಿಪಿಎಲ್ ರೇಷನ್ ಕಾರ್ಡ್. ಈ ಎಲ್ಲಾ ದಾಖಲಾತಿಗಳು ಕಡ್ಡಾಯವಾಗಿರುತ್ತದೆ.
ಮುಖ್ಯಮಂತ್ರಿಗಳ 1 ಲಕ್ಷ ಬಹುಮಹಡಿ ಮನೆಗಳ ಯೋಜನೆಗೆ ಅರ್ಜಿಸಲ್ಲಿಸಲು ಯಾವೆಲ್ಲಾ ಅರ್ಹತೆಗಳನ್ನು ಹೊಂದಿರಬೇಕು ಎಂದು ನೋಡುವುದಾದರೆ,
- ಅರ್ಜಿದಾರರು ಕರ್ನಾಟಕದಲ್ಲಿ ಖಾಯಂ ನಿವಾಸಿಯಾಗಿರಬೇಕು.
- ಬೆಂಗಳೂರು ನಗರದಲ್ಲಿ ಕನಿಷ್ಠ 5 ವರ್ಷಗಳಿಂದ ವಾಸವಾಗಿರಬೇಕು.
- ಅರ್ಜಿದಾರ ಹಾಗೂ ಅವರ ಕುಟುಂಬದವರು ನಗರ ಪ್ರದೇಶದಲ್ಲಿ ಸ್ವಂತ ಮನೆಯನ್ನು ಹೊಂದಿರಬಾರದು.
- ಅರ್ಜಿದಾರ ಹಾಗೂ ಅರ್ಜಿದಾರನ ಕುಟುಂಬದವರು ನಗರ ಪ್ರದೇಶದಲ್ಲಿ ಯಾವುದೇ ಸ್ವಂತ ಭೂಮಿಯನ್ನು ಹೊಂದಿರಬಾರದು.
- ಒಂದು ವೇಳೆ ಅರ್ಜಿ ಸಲ್ಲಿಸಿದಂತಹ ಅರ್ಜಿದಾರನ ಕುಟುಂಬದವರ ಹೆಸರಿನಲ್ಲಿ ಸ್ವಂತ ಮನೆ ಅಥವಾ ಭೂಮಿ ಇದ್ದಲ್ಲಿ ಇಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು ಹಾಗೂ ಕಾನೂನು ಕ್ರಮವನ್ನು ಕೈಗೊಳ್ಳಲಾಗುವುದು.
Government home loan scheme-ಸ್ವಂತ ಮನೆ ಇಲ್ಲದವರಿಗೆ ಗುಡ್ ನ್ಯೂಸ್.
1 ಲಕ್ಷ ಬಹುಮಹಡಿ ಮನೆ ನಿರ್ಮಾಣ ಹಾಗೂ ವಿತರಣೆ ಕಾರ್ಯ ಅತ್ಯಂತ ಪಾರದರ್ಶಕವಾಗಿ ನಡೆಯುತ್ತಿದೆ. ನಗರದಲ್ಲಿ ಸ್ವಂತ ಮನೆಯನ್ನು ಹೊಂದಿರದ ಬಡವರು ಹಾಗೂ ಆಶಕ್ತರು ಸ್ವಂತ ಸೂರು ಹೊಂದಬೇಕೆಂಬುದೇ ನಮ್ಮ ಬದ್ಧತೆಯಾಗಿದೆ ಎಂದು ವಸತಿ ಸಚಿವರು ಹೇಳಿಕೆಯನ್ನು ನೀಡಿದ್ದಾರೆ. ವಸತಿ ಇಲ್ಲದವರಿಗೆ ರಾಜ್ಯ ಸರ್ಕಾರವು ಮುಂದಿನ ತಿಂಗಳು ಅಂದರೆ 2021 ಜೂನ್ 30 ರಿಂದ 1 ಲಕ್ಷ ಬಹುಮಹಡಿ ಯೋಜನೆಗೆ ಅರ್ಜಿಸಲ್ಲಿಸಲು ಪ್ರಕ್ರಿಯೆ ಆರಂಭವಾಗಲಿದೆ. ಅರ್ಹ ಅರ್ಜಿದಾರರು ಯೋಜನೆಯ ಲಾಭ ಪಡೆಯಲು ತಮ್ಮ ಎಲ್ಲಾ ದಾಖಲಾತಿಗಳನ್ನು ಸಿದ್ಧಪಡಿಸಿಕೊಂಡು ಜೂನ್ 30 ರಿಂದ ಅರ್ಜಿಗಳನ್ನು ಸಲ್ಲಿಸಲು ರಾಜ್ಯ ಸರ್ಕಾರ ಅವಕಾಶವನ್ನು ನೀಡಿದೆ.