Table of Contents
health insurance-ಸರಿಯಾದ ಹೆಲ್ತ್ ಇನ್ಸೂರೆನ್ಸ್ ಖರೀದಿಸುವುದು ಹೇಗೆ.?
ಸ್ನೇಹಿತರೆ, ಇವತ್ತಿನ ಪೋಸ್ಟ್ನಲ್ಲಿ health insurance ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿಕೊಡ್ತಾ ಇದ್ದಿನಿ. health insurance ಅಂದ ತಕ್ಷಣನೇ ತುಂಬಾ ಜನರು avoid ಮಾಡೋದು ಜಾಸ್ತಿ, neglect ಮಾಡೋದು ಜಾಸ್ತಿ ಅಂತ ಹೇಳಬಹುದು. ಭಾರತದಲ್ಲಿ health insurance ಅನ್ನ ತೆಗೆದುಕೊಂಡಿರುವ ಜನರ ಸಂಖ್ಯೆ ತೀರಾ ಕಡಿಮೆ ಅಂತ ಹೇಳ್ತಾರೆ. ನಾವು ಎಷ್ಟೇ young ಆಗಿದ್ದರು ಸಹಿತ, ಎಷ್ಟೇ ನಮ್ಮ ಆರೋಗ್ಯದ ಬಗ್ಗೆ ಕಾಳಜಿ ತೆಗೆದುಕೊಂಡರು ಕೆಲವು ಸಾರಿ situation critical ಆಗುತ್ತೆ ಅಂತ ಹೇಳಬಹುದು. ಈ ಟೈಮ್ನಲ್ಲಿ ನಮಗೆ ರಾಜ್ಯ ಸರ್ಕಾರದಿಂದ ಹಾಗೂ ಕೇಂದ್ರ ಸರ್ಕಾರದಿಂದ ಸಿಗುವಂತಹ ಸೌಲಭ್ಯಗಳು ನೆನಪಾಗುತ್ತವೆಯೇ ವಿನಹ, ನಾವು ಆರೋಗ್ಯವಾಗಿದ್ದಾಗ health insurance ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ನಾವೀಗ COVID-19 situation ನಲ್ಲಿ ತುಂಬಾ ಜಾಗರೂಕತೆಯಿಂದ ಇರಬೇಕಾಗುತ್ತದೆ. ಮೊದಲನೆಯದಾಗಿ ನಾವು ಎಲ್ಲಾ ಮುಂಜಾಗೃತ ಕ್ರಮವನ್ನು ಅನುಸರಿಸಬೇಕಾಗುತ್ತದೆ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕಾಗುತ್ತದೆ. ನಮ್ಮ ಸಮಯ ಬಂದಾಗ vaccination ತೆಗೆದುಕೊಳ್ಳಬೇಕಾಗುತ್ತದೆ. ಇದೆಲ್ಲದರ ಜೊತೆಗೆ ನಮ್ಮ ಬಳಿ health insurance ಇತ್ತು ಅಂದ್ರೆ ತುಂಬಾ ಅನುಕೂಲ ಆಗುತ್ತೆ ಅಂತ ಹೇಳಬಹುದು.
health insurance-ಸರಿಯಾದ ಹೆಲ್ತ್ ಇನ್ಸೂರೆನ್ಸ್ ಖರೀದಿಸುವುದು ಹೇಗೆ.?
ನಾವು ವರ್ಷಪೂರ್ತಿ ಕಷ್ಟಪಟ್ಟು ದುಡಿದ ಹಣವನ್ನ, ನಮ್ಮ ಉಳಿತಾಯವನ್ನು ನಮಗೆ ಹುಷಾರಿಲ್ಲದಿದ್ದಾಗ ಆಸ್ಪತ್ರೆಗೆ ಸುರೀತಿವೆ ಅಂದ್ರೆ, ನಮ್ಮ ಬಳಿ ಉಳಿತಾಯವೇ ಇಲ್ಲ ಅಂದ್ರೆ ಈ health insurance ನಮ್ಮನ್ನ ಕಾಪಾಡುತ್ತೆ ಅಂತ ಹೇಳಬಹುದು. ಯಾಕಂದ್ರೆ ಈ covid-19 situation ನಲ್ಲಿ ಟೈಮ್ ಹೇಗಿರುತ್ತೆ ಅಂತ ಹೇಳುವುದಕ್ಕೆ ಆಗಲ್ಲ. ಒಂದು ವೇಳೆ ನಾವು ಖಾಸಗಿ ಆಸ್ಪತ್ರೆಗೆ admit ಆಗುತ್ತಿವೆ ಅಂದರೆ ICU ಹಾಗೂ bed charges ಎಷ್ಟಿರುತ್ತೆ ಅಂತ ನಮಗೆ ಗೊತ್ತೇ ಇದೆ. ಈ ಸಂದರ್ಭದಲ್ಲಿ ನಾವು ಬೇರೆಯವರ ಮೇಲೆ ಹೊರೆಯನ್ನ ಹಾಕುವುದನ್ನು ಈ health insurance ತಡೆಯುತ್ತೆ ಅಂತ ಹೇಳಬಹುದು. ನಮ್ಮ ಎಲ್ಲಾ ಖರ್ಚುವೆಚ್ಚವನ್ನು ಈ health insurance ಕಂಪನಿಯವರು ಆ ಟೈಮ್ ನಲ್ಲಿ ನೋಡಿಕೊಳ್ಳುತ್ತಾರೆ ಎಂದು ಹೇಳಬಹುದು. ಹಾಗಾದರೆ ಉತ್ತಮ health insurance ಯಾವುದು? ನಾವು ಯಾವ ರೀತಿ ಉತ್ತಮ health insurance ಆಯ್ಕೆ ಮಾಡಬೇಕು? ಈ ಎಲ್ಲದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀವು ಈ ಪೋಸ್ಟ್ನಲ್ಲಿ ತಿಳಿದುಕೊಳ್ಳಲು ಇದ್ದೀರಾ.
health insurance-ಸರಿಯಾದ ಹೆಲ್ತ್ ಇನ್ಸೂರೆನ್ಸ್ ಖರೀದಿಸುವುದು ಹೇಗೆ.?
health insurance ಅನ್ನ ಆಯ್ಕೆ ಮಾಡುವಾಗ ನಾವು ಒಂದಿಷ್ಟು ವಿಷಯಗಳನ್ನು compulsory ಆಗಿ ತಿಳಿದುಕೊಳ್ಳಬೇಕಾಗುತ್ತದೆ. ಮೊದಲನೆಯದಾಗಿ ನಿಮಗೆ ಅತಿ ಕಡಿಮೆ ಬೆಲೆಯಲ್ಲಿ premium health insurance ಕೊಡ್ತಾ ಇದ್ದಾರೆ ಅಂದ್ರೆ, ದಯವಿಟ್ಟು ಅಂತಾ insurance ಅನ್ನ ಖರೀದಿ ಮಾಡುವುದಕ್ಕೆ ಹೋಗಬೇಡಿ. ಅತಿ ಕಡಿಮೆ ಬೆಲೆಯಲ್ಲಿ ಪ್ರೀಮಿಯಂ ಸರ್ವಿಸ್ ಕೊಡ್ತಾ ಇದಾರೆ ಅಂದ್ರೆ ಖಂಡಿತವಾಗಿಯೂ ನಾವು ಅದರ ಬಗ್ಗೆ ವಿಚಾರಿಸಿ ನೋಡಬೇಕಾಗುತ್ತೆ. ಇಂಥ insurance ಗಳನ್ನ avoid ಮಾಡುವುದು ಉತ್ತಮ ಅಂತ ಹೇಳಬಹುದು. ಎರಡನೆಯದಾಗಿ ನಾವು ತೆಗೆದುಕೊಳ್ಳುವಂತಹ insurance ನಲ್ಲಿ ಎಷ್ಟು disease ಗಳು ಕವರ್ ಆಗಿದೆ, ಈ ಒಂದು ರೋಗಗಳು ಭಾರತದಲ್ಲಿ ಬರುವ ಸಾಧ್ಯತೆಗಳು ಇವೆಯಾ ಅನ್ನೋದರ ಬಗ್ಗೆ ಖಂಡಿತವಾಗಿಯೂ ವಿಚಾರ ಮಾಡಬೇಕಾಗುತ್ತದೆ. ಆಮೇಲೆ ನಾವು ತೆಗೆದುಕೊಳ್ಳುವಂತಹ health insurance ನಲ್ಲಿ ಯಾವ ಒಂದು disease ಗಳು ಸೇರ್ಪಡೆ ಆಗಿಲ್ಲ ಅನ್ನೋದರ ಬಗ್ಗೆ ಖಂಡಿತವಾಗಿಯೂ ವಿಚಾರ ಮಾಡಿ ಯಾಕೆಂದರೆ ರೋಗಗಳ ದೊಡ್ಡ ಪಟ್ಟಿಯನ್ನು ಕೊಟ್ಟು ಅದರಲ್ಲಿ ಭಾರತದಲ್ಲಿ ಬರುವರೋಗಗಳು ಇಲ್ಲ ಅಂದರೆ ಆ health insurance ವೆಸ್ಟ್ ಆಗಿ ಬಿಡುತ್ತೆ.