1.Income and cast certificate-ಜಾತಿ ಮತ್ತು ಆದಾಯ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸುವುದು ಹೇಗೆ.

Income and cast certificate-ಜಾತಿ ಮತ್ತು ಆದಾಯ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸುವುದು ಹೇಗೆ.?

ಸ್ನೇಹಿತರೆ, ಇವತ್ತಿನ ಪೋಸ್ಟ್ನಲ್ಲಿ online ಮೂಲಕ ಜಾತಿ ಮತ್ತು ಆದಾಯ ಪ್ರಮಾಣ ಪತ್ರಕ್ಕೆ ಹೇಗೆ ಅರ್ಜಿಯನ್ನು ಸಲ್ಲಿಸುವುದು ಮತ್ತು ಏನೆಲ್ಲಾ ದಾಖಲಾತಿಗಳು ಬೇಕು ಅನ್ನುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಪೋಸ್ಟ್ನಲ್ಲಿ ನೀವು ತಿಳಿದುಕೊಳ್ಳಲು ಇದ್ದೀರಾ.

ಸ್ನೇಹಿತರೆ, ಮೊದಲಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಲು ಏನೆಲ್ಲಾ ದಾಖಲಾತಿಗಳು ಬೇಕು ಅನ್ನೋದನ್ನ ನೋಡುವುದಾದರೆ,

  • ಆಧಾರ್ ಕಾರ್ಡ್
  • ರೇಷನ್ ಕಾರ್ಡ್
  • ನಿಮ್ಮ ಹಳೆಯ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಅಥವಾ
  • ನಿಮ್ಮ TC

Income and cast certificate-ಜಾತಿ ಮತ್ತು ಆದಾಯ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸುವುದು ಹೇಗೆ.?Income and cast certificate-ಜಾತಿ ಮತ್ತು ಆದಾಯ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸುವುದು ಹೇಗೆ.?

ಸ್ನೇಹಿತರೆ, ಇಷ್ಟು ದಾಖಲಾತಿಗಳು ನಿಮ್ಮ ಬಳಿ ಇತ್ತು ಅಂದ್ರೆ ಹೇಗೆ online ಮೂಲಕ ಹೇಗೆ ಅರ್ಜಿಯನ್ನು ಸಲ್ಲಿಸುವುದು ಅನ್ನೋದನ್ನ ನೋಡೋಣ.

ಮೊದಲಿಗೆ ನೀವು ನಿಮ್ಮ Chrome browser ನಲ್ಲಿ ನಾಡಕಛೇರಿ ವೆಬ್ಸೈಟ್ ಗೆ ಲಾಗಿನ್ ಆಗಬೇಕು. ಲಾಗಿನ್ ಆದಮೇಲೆ ನಿಮ್ಮ ಮೊಬೈಲ್ ನಂಬರ್ ಎಂಟರ್ ಮಾಡಿ, get OTP ಮೇಲೆ ಕ್ಲಿಕ್ ಮಾಡಿ. ನಿಮ್ಮ ಮೊಬೈಲ್ಗೆ ಬಂದ OTP ಯನ್ನ ಎಂಟರ್ ಮಾಡಿ ಲಾಗಿನ್ ಮೇಲೆ ಕ್ಲಿಕ್ ಮಾಡಿ. ಲಾಗಿನ್ ಆದಮೇಲೆ new request ಮೇಲೆ ಕ್ಲಿಕ್ ಮಾಡಿ, ನಂತರ cast certificate ಮೇಲೆ ಕ್ಲಿಕ್ ಮಾಡಿ. ಕ್ಲಿಕ್ ಮಾಡಿದ ಮೇಲೆ ನಿಮ್ಮ ಆಧಾರ್ ಅಥವಾ ರೇಷನ್ ಕಾರ್ಡ್ number enter ಮಾಡಿ. ನಂಬರ್ ಎಂಟರ್ ಮಾಡಿದಮೇಲೆ go ಮೇಲೆ ಕ್ಲಿಕ್ ಮಾಡಿ.

ನಂತರದ ಪೇಜ್ನಲ್ಲಿ ನಿಮ್ಮ ಜಿಲ್ಲೆ, ತಾಲೂಕು, ನಿಮ್ಮ ಹೋಬಳಿ, ನೀವು ವಾಸ ಮಾಡುತ್ತಿರುವ ಸ್ಥಳ ಗ್ರಾಮೀಣ ಅಥವಾ ನಗರ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿ, ನಂತರ ನಿಮ್ಮ ವಾರ್ಡ್ ಸಂಖ್ಯೆ ಯನ್ನು ಎಂಟರ್ ಮಾಡಿ, ನಿಮಗೆ ಸರ್ಟಿಫಿಕೇಟ್ ಕನ್ನಡದಲ್ಲಿ ಬೇಕಾದರೆ ಕನ್ನಡವನ್ನು ಸೆಲೆಕ್ಟ್ ಮಾಡಿ, ಇಂಗ್ಲಿಷ್ನಲ್ಲಿ ಬೇಕಾದರೆ ಇಂಗ್ಲಿಷ್ ಸೆಲೆಕ್ಟ್ ಮಾಡಿ. ನಂತರ applicant name ಸೆಲೆಕ್ಟ್ ಮಾಡಿ, ಮೊದಲೇ ನೀವು ರೇಷನ್ ಕಾರ್ಡ್ ನಂಬರ್ ನಮೂದಿಸಿ ರುವುದರಿಂದ ನಿಮ್ಮ ಕುಟುಂಬದವರ ಹೆಸರು ಮೊದಲೇ ತೋರಿಸುತ್ತದೆ. ಯಾರ ಹೆಸರಲ್ಲಿ ಸರ್ಟಿಫಿಕೇಟ್ ಮಾಡಬೇಕು ಅವರ ಹೆಸರನ್ನು ಸೆಲೆಕ್ಟ್ ಮಾಡಿ. ನಂತರ ಅವರ ತಂದೆಯ ಹೆಸರನ್ನು ನಮೂದಿಸಿ. ನಂತರ ನಿಮ್ಮ category ಅಂದರೆ ನಿಮ್ಮ ಜಾತಿ ಯಾವ category ಯಲ್ಲಿ ಬರುತ್ತೆ ಅನ್ನೋದನ್ನು ಸೆಲೆಕ್ಟ್ ಮಾಡಿಕೊಳ್ಳಿ.ಈ ಎಲ್ಲಾ ವಿವರಗಳನ್ನು ನಮೂದಿಸಿದ ನಂತರ search ಮೇಲೆ ಕ್ಲಿಕ್ ಮಾಡಿ. ಕ್ಲಿಕ್ ಮಾಡಿದ ಮೇಲೆ ನಿಮಗೊಂದು online application form ಓಪನ್ ಆಗುತ್ತೆ, ಇದನ್ನು ಕೂಡ ನಾವು ಭರ್ತಿ ಮಾಡಬೇಕಾಗುತ್ತೆ.

Income and cast certificate-ಜಾತಿ ಮತ್ತು ಆದಾಯ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸುವುದು ಹೇಗೆ.?

ಈ ಎಲ್ಲಾ ವಿವರಗಳನ್ನು ನಮೂದಿಸಿದ ನಂತರ upload scan documents ಅಂತ ಇರುತ್ತೆ, ಇಲ್ಲಿ ನೀವು ನಿಮ್ಮ ಆಧಾರ್ ಕಾರ್ಡ್, school certificate, ರೇಷನ್ ಕಾರ್ಡ್, ನಿಮ್ಮ ಹಳೆಯ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಹಳೆಯ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಇಲ್ಲ ಅಂದರೆ ನೀವು ನಿಮ್ಮTC ಯನ್ನ ಕೂಡ upload ಮಾಡಬಹುದು. ಇಷ್ಟೆಲ್ಲಾ ದಾಖಲೆಗಳನ್ನು upload ಮಾಡಿದ ನಂತರ save ಮೇಲೆ ಕ್ಲಿಕ್ ಮಾಡಿ. ನಂತರ CAPTCHA ನಮೂದಿಸಿ save ಮೇಲೆ ಕ್ಲಿಕ್ ಮಾಡಿ. ನಂತರ ನಿಮಗೊಂದು acknowledgement number ಬರುತ್ತೆ, ಈ ನಂಬರನ್ನು ನೋಟ್ ಮಾಡಿ ಇಟ್ಟುಕೊಳ್ಳಿ, ನಂತರ proceed to e-sign ಮೇಲೆ ಕ್ಲಿಕ್ ಮಾಡಿ. ಕ್ಲಿಕ್ ಮಾಡಿದ ಮೇಲೆ ನಿಮಗೆ ಅಪ್ಲಿಕೇಶನ್ ಕಾಪಿ ಸಿಗುತ್ತೆ ಇದನ್ನ ಸೇವ್ ಮಾಡಿಕೊಳ್ಳಿ, ಸೇವ್ ಮಾಡಿದ copy ಯನ್ನ ಪ್ರಿಂಟ್ ತೆಗೆದುಕೊಳ್ಳಿ.

 

How to apply for new PVC voter ID- ಹೊಸ ಪಿವಿಸಿ ವೋಟರ್ ಐಡಿಗೆ ಅರ್ಜಿ ಸಲ್ಲಿಸುವುದು ಹೇಗೆ?

https://mahithimithra.com/how-to-apply-for-new-pvc-voter-id/

ಈ  copy ಯನ್ನ ನಿಮ್ಮ ಇತರ ದಾಖಲೆಗಳೊಂದಿಗೆ ನಿಮ್ಮ ಹತ್ತಿರದ ನಾಡ ಕಚೇರಿಗೆ ತಲುಪಿಸಿ. ಇದನ್ನು ಪ್ರಿಂಟ್ ತೆಗೆದ ಮೇಲೆ e-sign ಮೇಲೆ ಕ್ಲಿಕ್ ಮಾಡಿ ನಿಮ್ಮ ಆಧಾರ್ ಕಾರ್ಡ್ ನಂಬರ್ ಎಂಟರ್ ಮಾಡಿ, get OTP ಮೇಲೆ ಕ್ಲಿಕ್ ಮಾಡಿ, ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಮೊಬೈಲ್ ನಂಬರ್ ಗೆ ಒಂದು OTP ಬರುತ್ತೆ ಅದನ್ನ ಎಂಟರ್ ಮಾಡಿ submit ಮೇಲೆ ಕ್ಲಿಕ್ ಮಾಡಿ. ನಿಮ್ಮ ಅಪ್ಲಿಕೇಶನ್ ಫಾರಂ submit ಆಗಿರುತ್ತೆ. ಈ ಎಲ್ಲಾ process ಮುಗಿದಮೇಲೆ payment section ಗೆ ಬಂದು payment ಮಾಡಬೇಕಾಗುತ್ತೆ. ನೀವು ಆನ್ಲೈನ್ ಮುಖಾಂತರ ಪೇಮೆಂಟ್ ಮಾಡಬಹುದು. Payment ಮಾಡಲು ನಿಮ್ಮ acknowledgement number ಎಂಟರ್ ಮಾಡಿ show status ಮೇಲೆ ಕ್ಲಿಕ್ ಮಾಡಿ pay ಮೇಲೆ ಕ್ಲಿಕ್ ಮಾಡಿಕೊಂಡು ನೀವು ನಿಮ್ಮ debit card ಮುಖಾಂತರ 25 ರೂಪಾಯಿಯನ್ನು ಪಾವತಿಸಬೇಕಾಗುತ್ತದೆ. ಒಂದು ವಾರದಿಂದ 10 ದಿನಗಳ ಒಳಗಾಗಿ ಸರ್ಟಿಫಿಕೇಟ್ ನಿಮ್ಮ ಕೈಗೆ ಬಂದು ಸೇರುತ್ತದೆ.

ನಾಡಕಚೇರಿ ವೆಬ್ಸೈಟ್ ಲಿಂಕ್-https://nadakacheri.karnataka.gov.in/ajsk

Leave a Comment