How to apply for new PVC voter ID- ಹೊಸ ವೋಟರ್ ಐಡಿಗೆ ಅರ್ಜಿ ಸಲ್ಲಿಸುವುದು ಹೇಗೆ.

How to apply for new PVC voter ID- ಹೊಸ ಪಿವಿಸಿ ವೋಟರ್ ಐಡಿಗೆ ಅರ್ಜಿ ಸಲ್ಲಿಸುವುದು ಹೇಗೆ?

ಸ್ನೇಹಿತರೆ, ಇವತ್ತಿನ ಪೋಸ್ಟ್ನಲ್ಲಿ ನಿಮ್ಮ voter ID ಯ ಫೋಟೋ ಹಾಳಾಗಿ ಹೋದರೆ, ವೋಟರ್ ಐಡಿ ಕಾರ್ಡ್ damage ಆದರೆ, ಕಾರ್ಡ್ ಕಳೆದು ಹೋದರೆ ಅಥವಾ ನಿಮಗೇನಾದರೂ ಹೊಸ voter ID card ಬೇಕಾದರೆ ಕ್ಷಣಮಾತ್ರದಲ್ಲಿ ಹೊಸ PVC voter ID card ನಿಮ್ಮ ಮೊಬೈಲ್ ಮೂಲಕನೇ apply ಮಾಡಿಕೊಂಡು PVC voter ID card ಹೇಗೆ ಪಡೆಯುವುದು ಅನ್ನೋದನ್ನ ಈ ಪೋಸ್ಟ್ನಲ್ಲಿ ನೀವು ತಿಳಿದುಕೊಳ್ಳಲು ಇದ್ದೀರಾ.

 

How to apply for PVC voter ID card

Steps  to apply for new PVC voter ID card- ಹೊಸ ವೋಟರ್ ಐಡಿ ಕಾರ್ಡ್ ಗೆ ಅಪ್ಲೈ ಮಾಡುವ ವಿಧಾನ.

  1. ಮೊದಲು Google Play Store ಗೆ ಹೋಗಿ voter helpline ಅಪ್ಲಿಕೇಶನ್ ಡೌನ್ಲೋಡ್ ಮಾಡಬೇಕು.
  2. ಅಪ್ಲಿಕೇಶನ್ ಓಪನ್ ಮಾಡಿ I agree ಮೇಲೆ ಕ್ಲಿಕ್ ಮಾಡಿ ನಂತರ next ಮೇಲೆ ಕ್ಲಿಕ್ ಮಾಡಿ.
  3. ಕ್ಲಿಕ್ ಮಾಡಿದ ತಕ್ಷಣ ಇಲ್ಲಿ ನಿಮ್ಮ ಮೊಬೈಲ್ ನಂಬರ್ ಮತ್ತು ಪಾಸ್ವರ್ಡ್ ಹಾಕಿ login ಆಗಬಹುದು ಅಥವಾ ಇದುವರೆಗೂ login ಆಗಿಲ್ಲ ಅಂದ್ರೆ, new user ಮೇಲೆ ಕ್ಲಿಕ್ ಮಾಡಿದರೆ ನೀವು ನಿಮ್ಮ ಮೊಬೈಲ್ ನಂಬರ್ ಹಾಕಿ, ನಿಮ್ಮ ಮೊಬೈಲ್ ನಂಬರ್ ಗೆ OTP ಬರುತ್ತೆ, ಬಂದಿರುವ OTP enter ಮಾಡಿ ನಿಮ್ಮ email ID, EPIC ಅಂದರೆ, voter ID number ಮತ್ತು password ಹಾಕಿಕೊಂಡು ನೀವು ಹೊಸದಾಗಿ register ಆಗಬಹುದು.
  4. ಹೊಸದಾಗಿ register ಆಗುವುದರಿಂದ ಏನು ಉಪಯೋಗ ಅಂದರೆ, ನಿಮ್ಮ voter ID card correction ಕೂಡ ಮಾಡಿಕೊಳ್ಳಬಹುದು, ಹಾಗೂ download ಕೂಡ ಮಾಡಿಕೊಳ್ಳಬಹುದು.
  5. ಉತ್ತಮ ಗುಣಮಟ್ಟದ PVC voter ID card ಪೋಸ್ಟ್ ಮುಖಾಂತರ ನಿಮ್ಮ ಮನೆಗೆ ಬರಲು ನೀವು skip login ಮೇಲೆ ಕ್ಲಿಕ್ ಮಾಡಿ ನಂತರ forums ಮೇಲೆ ಕ್ಲಿಕ್ ಮಾಡಿ issue of replacement electors photo identity card ಮೇಲೆ ಕ್ಲಿಕ್ ಮಾಡಿ.
  6. ಕ್ಲಿಕ್ ಮಾಡಿದ ಮೇಲೆ ನಿಮ್ಮ ಹೆಸರು ಕೇಳುತ್ತೆ, ನಿಮ್ಮ ಹೆಸರು ಟೈಪ್ ಮಾಡಿಕೊಂಡು, ನಿಮ್ಮ ಹೆಸರು ಟೈಪ್ ಮಾಡಿದ ಮೇಲೆ ok ಮೇಲೆ ಕ್ಲಿಕ್ ಮಾಡಿ, ನಿಮ್ಮ ಹೆಸರು display ಆಗುತ್ತೆ, ನಂತರ let’s start ಮೇಲೆ ಕ್ಲಿಕ್ ಮಾಡಿ.
  7. Do you already have voter ID number ಅಂತಾ ಕೇಳುತ್ತೆ, voter ID number ಇದ್ರೆ ‘YES’ ಮೇಲೆ ಕ್ಲಿಕ್ ಮಾಡಿ, ಒಂದು ವೇಳೆ ಇಲ್ಲಿಯವರೆಗೂ voter ID card number ಇಲ್ಲ ಅಂದ್ರೆ ‘NO’ ಮೇಲೆ ಕ್ಲಿಕ್ ಮಾಡಿ, next ಮೇಲೆ ಕ್ಲಿಕ್ ಮಾಡಿ.
  8. ನಂತರ ನೀವು ನಿಮ್ಮ voter ID card number ಹಾಕಬೇಕಾಗುತ್ತೆ, voter ID card number ಹಾಕಿದ ನಂತರ fetch details ಮೇಲೆ ಕ್ಲಿಕ್ ಮಾಡಿ ನಂತರ proceed ಮೇಲೆ ಕ್ಲಿಕ್ ಮಾಡಿ.
  9. ಇಲ್ಲಿ ನಿಮ್ಮ voter ID card ನ ಸಂಪೂರ್ಣ ಮಾಹಿತಿ ಬಂದಿರುತ್ತೆ, ಬಂದಿರುವ ಮಾಹಿತಿಯನ್ನು ಸರಿಯಾಗಿ ನೋಡಿ ‘next’ ಮೇಲೆ ಕ್ಲಿಕ್ ಮಾಡಿ.
  10. ಇಲ್ಲಿ ನಿಮ್ಮ address ನಮೂದಿಸಬೇಕಾಗುತ್ತೆ ಯಾಕಂದ್ರೆ, voter ID card ಪೋಸ್ಟ್ ಮುಖಾಂತರ ಬರಲು, ಇಂಗ್ಲಿಷ್ ಭಾಷೆ ಮತ್ತು ಕನ್ನಡದಲ್ಲಿ ಟೈಪ್ ಮಾಡಬೇಕಾಗುತ್ತೆ. ಮೊದಲು ಮನೆ ನಂಬರ್ ಹಾಕಿ, ನಂತರ ಅದೇ ರೀತಿ ಮನೆ ನಂಬರ್ ಕನ್ನಡದಲ್ಲಿ ಟೈಪ್ ಮಾಡಿ ನಂತರ ನಿಮ್ಮ ಊರಿನ ಹೆಸರು ಹಾಕಿ. ಈ ರೀತಿ ಎಲ್ಲಾ ಮಾಹಿತಿಗಳನ್ನು ಟೈಪ್ ಮಾಡಿ ನಂತರ ‘next’ ಮೇಲೆ ಕ್ಲಿಕ್ ಮಾಡಿ.
  11. Next ಸ್ಟೆಪ್ ನಲ್ಲಿ reason for replacement of voter ID card ಅಂದರೆ ಯಾವ ಕಾರಣಕ್ಕಾಗಿ ನೀವು voter ID card ಅನ್ನ replace ಮಾಡ್ತಾ ಇದ್ದೀರಾ ಅಂತ ಕಾರಣವನ್ನು ನಮೂದಿಸಬೇಕು. ಉದಾಹರಣೆಗೆ ನಿಮ್ಮ ಫೋಟೋ ಏನಾದರೂ damage ಆಗಿದ್ದರೆ, photo damage ಅಂತ ಟೈಪ್ ಮಾಡಿ. ಒಂದು ವೇಳೆ voter ID card ಕಳೆದು ಹೋಗಿದ್ದರೆ loss of voter ID card ಅಂತ ಟೈಪ್ ಮಾಡಿ.
  12. ನಂತರ ನಿಮ್ಮ gender select ಮಾಡಿ, ನಿಮ್ಮ ಮೊಬೈಲ್ ನಂಬರ್, email ID ಮತ್ತು ನಿಮ್ಮ date of birth ನಮೂದಿಸಿ  ‘next’ ಮೇಲೆ ಕ್ಲಿಕ್ ಮಾಡಿ.
  13. ನಂತರ choose option  to  collect voter ID card, ಅಂದರೆ ಯಾವ ಆಯ್ಕೆಯ ಮುಖಾಂತರ ನೀವು voter ID card collect ಮಾಡಿಕೊಳ್ಳುತ್ತೀರಾ ಎಂಬ option ಕೇಳುತ್ತೆ. ಇಲ್ಲಿ ಮೂರು ರೀತಿಯ option ಕೇಳುತ್ತೆ, ಇಲ್ಲಿ ನೀವು second option ಮೇಲೆ ಕ್ಲಿಕ್ ಮಾಡಿ ‘next’ ಮೇಲೆ ಕ್ಲಿಕ್ ಮಾಡಿ.
  14.  ನಂತರ select payment mode ಕೇಳುತ್ತೆ. ಇಲ್ಲಿ ಕೇವಲ ಒಂದೇ option ಇರುತ್ತೆ, offline payment ಮೇಲೆ ಕ್ಲಿಕ್ ಮಾಡಿ. ಪೋಸ್ಟ್ ಮುಖಾಂತರ ನಿಮ್ಮ voter ID card ನಿಮ್ಮ ಮನೆಗೆ ಬಂದರೆ 30 ರೂಪಾಯಿ ಪಾವತಿಸಿ ನಿಮ್ಮ ಹೊಸ PVC voter ID card ಪಡೆದುಕೊಳ್ಳಬಹುದು. ಇದು ನೀವು apply  ಮಾಡಿದ ಮೇಲೆ ಸುಮಾರು 45 ರಿಂದ 60 ದಿನಗಳ ಒಳಗಾಗಿ ನಿಮ್ಮ ಮನೆಗೆ ಪೋಸ್ಟ್ ಮುಖಾಂತರ ಬರುತ್ತೆ.
  15. ನಂತರದ step ನಲ್ಲಿ name of the applicant ನಲ್ಲಿ applicant ಹೆಸರು ಟೈಪ್ ಮಾಡಿ, ನೀವು ಇರುವ ಪ್ರಸ್ತುತ ಸ್ಥಳದ ಹೆಸರನ್ನು ಟೈಪ್ ಮಾಡಿ, done ಮೇಲೆ ಕ್ಲಿಕ್ ಮಾಡಿ.
  16. ನಂತರದ step ನಲ್ಲಿ ನಿಮ್ಮ voter ID ಯ ಸಂಪೂರ್ಣ ಮಾಹಿತಿ ತೋರಿಸುತ್ತೆ, ಈ ಹಿಂದೆ ನೀವು ನಮೂದಿಸಿದ ಎಲ್ಲಾ ಮಾಹಿತಿಗಳನ್ನು ತೋರಿಸುತ್ತೆ.
  17. ನಂತರ confirm ಮೇಲೆ ಕ್ಲಿಕ್ ಮಾಡಿ, click ಮಾಡಿದ ಮೇಲೆ ನಿಮಗೆ reference ID number ಬರುತ್ತೆ, ಈ reference ID number ನಿಮ್ಮ ಅಪ್ಲಿಕೇಶನ್ನ status check ಮಾಡೋದಕ್ಕೆ ಬಳಸಿಕೊಳ್ಳಬಹುದು.

ಈ ರೀತಿಯಾಗಿ ನೀವು ನಿಮ್ಮ ಹೊಸ PVC voter ID card ಗೆ ಅರ್ಜಿಯನ್ನು ಸಲ್ಲಿಸಬಹುದು.

Voter helpline Google Play Store application link

https://play.google.com/store/apps/details?id=com.eci.citizen

Leave a Comment