ಸ್ನೇಹಿತರೆ, ಈ ಪೋಸ್ಟ್ನಲ್ಲಿ ನಿಮ್ಮ ಮೊಬೈಲ್ ಫೋನ್ ಮೂಲಕನೇ ಕೇವಲ 10 ನಿಮಿಷದಲ್ಲಿ ಪಾನ್ ಕಾರ್ಡ್ ಅನ್ನು ಹೇಗೆ ಪಡೆದುಕೊಳ್ಳುವುದು ಅನ್ನುವುದರ ಬಗ್ಗೆ ಮಾಹಿತಿಯನ್ನು ತಿಳಿಸಿ ಕೊಡ್ತಾ ಇದ್ದೀನಿ. ಹೌದು ಸ್ನೇಹಿತರೆ, ನಿಮ್ಮ ಮೊಬೈಲ್ ಫೋನ್ ಮೂಲಕನೇ ಕೇವಲ 5 ನಿಮಿಷದಲ್ಲಿ ಅರ್ಜಿಯನ್ನು ಸಲ್ಲಿಸಿ, ಕೇವಲ 10 ನಿಮಿಷದಲ್ಲಿ ಹೊಸ ಪಾನ್ ಕಾರ್ಡ್ ಅನ್ನು ನೀವು ಸರ್ಕಾರದಿಂದ ಪಡೆದುಕೊಳ್ಳಬಹುದು. ಹಾಗಾದ್ರೆ ಹೇಗೆ ಅರ್ಜಿಯನ್ನು ಸಲ್ಲಿಸಬೇಕು ಎಂದು ಹಂತಹಂತವಾಗಿ ಈ ಕೆಳಗೆ ನಿಮಗೆ ತಿಳಿಸಿಕೊಡುತ್ತೇನೆ.
How to get a pan card instantly-10 ನಿಮಿಷದಲ್ಲಿ ಪಾನ್ ಕಾರ್ಡ್ ಪಡೆಯುವುದು ಹೇಗೆ?
- ನಿಮ್ಮ ಮೊಬೈಲ್ ನಂಬರ್ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರಬೇಕು, ಹೀಗಿದ್ದಾಗ ಮಾತ್ರ ನೀವು ಹತ್ತು ನಿಮಿಷದಲ್ಲಿ ಪಾನ್ ಕಾರ್ಡನ್ನು ಪಡೆದುಕೊಳ್ಳಬಹುದು.
- ಹೊಸದಾಗಿ ಅರ್ಜಿಯನ್ನು ಸಲ್ಲಿಸಲು Income tax department ನ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಲಿಂಕ್ ಓಪನ್ ಆದಮೇಲೆ ಎಡಬದಿಯಲ್ಲಿರುವ instant pan through Aadhar ಮೇಲೆ ಕ್ಲಿಕ್ ಮಾಡಿ. ನಾವು ಹೊಸದಾಗಿ ಪಾನ್ ಕಾರ್ಡ್ ಗೆ ಅಪ್ಲೈ ಮಾಡುವುದರಿಂದ get a new pan ಮೇಲೆ ಕ್ಲಿಕ್ ಮಾಡಿ.
- ಕ್ಲಿಕ್ ಮಾಡಿದ ಮೇಲೆ ನಾವು 5 ಸ್ಟೆಪ್ ಗಳನ್ನು ಫಾಲೋ ಮಾಡಬೇಕು.
- ಮೊದಲಿಗೆ ನಾವು ನಮ್ಮ ಆಧಾರ್ ಕಾರ್ಡ್ ನಂಬರನ್ನು ಎಂಟರ್ ಮಾಡಬೇಕು, ಹಾಗೆ ಕೆಳಗೆ ನೀಡಿರುವ CAPTCHA ನಮೂದಿಸಿ, confirm ಮೇಲೆ ಕ್ಲಿಕ್ ಮಾಡಿ ನಂತರ generate Aadhar OTP ಮೇಲೆ ಕ್ಲಿಕ್ ಮಾಡಿ.
- ನಿಮ್ಮ ಮೊಬೈಲ್ ಗೆ ಬಂದ OTP ನಮೂದಿಸಿ, ಕೆಳಗೆ ಕಾಣುತ್ತಿರುವ valid Aadhar OTP ಮೇಲೆ ಕ್ಲಿಕ್ ಮಾಡಿ.
- ನಿಮ್ಮ ಆಧಾರ್ ವಿವರಗಳನ್ನು ಪರಿಶೀಲಿಸಿ I accept ಮೇಲೆ ಕ್ಲಿಕ್ ಮಾಡಿ submit Pan request ಮೇಲೆ ಕ್ಲಿಕ್ ಮಾಡಿ.
- ನೀವು ಪಾನ್ ಕಾರ್ಡ್ ಗೆ successful ಆಗಿ request ನೀಡಿದ್ದೀರಾ ಎಂದು ನಿಮಗೆ ಒಂದು request number ನೀಡುತ್ತಾರೆ.
- ನಂತರ homepage ಗೆ ಬಂದು ಹತ್ತರಿಂದ ಹದಿನೈದು ನಿಮಿಷ ಬಿಟ್ಟು ಮತ್ತೆ instant pan through Aadhar ಮೇಲೆ ಕ್ಲಿಕ್ ಮಾಡಿ, second option check PAN status ಮೇಲೆ ಕ್ಲಿಕ್ ಮಾಡಿ.
- ನಂತರ ನಿಮ್ಮ Aadhar card number enter ಮಾಡಿ ಕೆಳಗೆ ಕಾಣುತ್ತಿರುವ CAPTCHA ವನ್ನು ಎಂಟರ್ ಮಾಡಿ, submit ಮೇಲೆ ಕ್ಲಿಕ್ ಮಾಡಿ.
- Submit ಮೇಲೆ ಕ್ಲಿಕ್ ಮಾಡಿದ ನಂತರ ನಿಮ್ಮ ಮೊಬೈಲ್ ನಂಬರ್ ಗೆ OTP ಬರುತ್ತೆ, OTP enter ಮಾಡಿ submitಮೇಲೆ ಕ್ಲಿಕ್ ಮಾಡಿ.
- ನಂತರ download pan ಮೇಲೆ ಕ್ಲಿಕ್ ಮಾಡಿ ನಿಮ್ಮ PAN card PDFform download ಮಾಡಿ, PDF form ಓಪನ್ ಮಾಡಲು ಪಾಸ್ವರ್ಡ್ ನಿಮ್ಮ ಡೇಟ್ ಆಫ್ ಬರ್ತ್ ಅನ್ನು ನಮೂದಿಸಿ, ok ಮೇಲೆ ಕ್ಲಿಕ್ ಮಾಡಿ.
- Screen ಮೇಲೆ ನಿಮ್ಮ ಪಾನ್ ಕಾರ್ಡ್ ಫೋಟೋ ಕಾಣಿಸುತ್ತದೆ, ಇದನ್ನು ಕಲರ್ ಜೆರಾಕ್ಸ್ ಮಾಡಿ ಲ್ಯಾಮಿನೇಷನ್ ಮಾಡಿಕೊಳ್ಳಿ.