How to give complaint if grama panchayat not responding to you-ಗ್ರಾಮ ಪಂಚಾಯತಿ ಸ್ಪಂದಿಸದಿದ್ದರೆ ದೂರು ಕೊಡುವುದು ಹೇಗೆ.

How to give complaint if grama panchayat not responding to you. ಗ್ರಾಮ ಪಂಚಾಯತಿ ನಿಮಗೆ ಸ್ಪಂದಿಸದಿದ್ದರೆ ದೂರು ಕೊಡುವುದು ಹೇಗೆ.

ಸ್ನೇಹಿತರೆ, ಇವತ್ತಿನ ಪೋಸ್ಟ್ನಲ್ಲಿ ಗ್ರಾಮ ಪಂಚಾಯಿತಿ ಮುಖಾಂತರ ನಿಮ್ಮ ಊರಿನಲ್ಲಿ ಯಾವುದೇ ಸರ್ಕಾರಿ ಕೆಲಸವಾಗಲಿ ಅಥವಾ ಸಾರ್ವಜನಿಕರಿಗೆ ಸಹಾಯವಾಗುವ ಯಾವುದೇ ಕೆಲಸ ಆಗಿರಬಹುದು, ಸರಕಾರಿ ಸೌಲಭ್ಯ ಅಥವಾ ಉದ್ಯೋಗ ಖಾತ್ರಿ ಕೆಲಸದ ಬಗ್ಗೆ ಆಗಿರಬಹುದು, ಊರು ಅಭಿವೃದ್ಧಿ ಹೊಂದಬೇಕು ಎಂದು ಪ್ರತಿಯೊಬ್ಬರ ಅಭಿಪ್ರಾಯ ಇರುತ್ತೆ ಆದರೆ ಕೆಲವೊಂದು ಸಮಯದಲ್ಲಿ ಗ್ರಾಮ ಪಂಚಾಯಿತಿ ಕಾರ್ಯಾಲಯ ಸರಿಯಾಗಿ ಸ್ಪಂದಿಸುವುದಿಲ್ಲ. ಯಾವುದೇ ಕೆಲಸ ಮಾಡುವುದಕ್ಕೆ ಹಿಂದೆ-ಮುಂದೆ ನೋಡುತ್ತದೆ.ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಕೆಲಸಗಳು ಆಗಬೇಕೆಂದರೆ ನಾಗರಿಕರು ಏನು ಮಾಡಬೇಕು ಎಂದು ಈ ಪೋಸ್ಟ್ನಲ್ಲಿ ತಿಳಿದುಕೊಳ್ಳಿ.

How to give complaint if grama panchayat not responding to you. ಗ್ರಾಮ ಪಂಚಾಯತಿ ನಿಮಗೆ ಸ್ಪಂದಿಸದಿದ್ದರೆ ದೂರು ಕೊಡುವುದು ಹೇಗೆ.

Grama panchayat

ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಕೆಲಸಗಳು ಆಗಬೇಕೆಂದರೆ ಗ್ರಾಮದಲ್ಲಿ ಸುಮಾರು 5ರಿಂದ 10 ಜನ ಸೇರಿಕೊಂಡು ಏನು ತೊಂದರೆ ಆಗಿದೆ ಎಂದು ಮೊದಲು ಚರ್ಚೆ ಮಾಡಬೇಕು, ನಂತರ ಆಗಿರುವ ತೊಂದರೆ ಎಂದು ವಿವರಿಸಿ ಲಿಖಿತ ರೂಪದಲ್ಲಿ ಸ್ಪಷ್ಟವಾಗಿ ದೂರನ್ನು ಬರೆಯಬೇಕು. ಆ ದೂರು ಹೇಗಿರಬೇಕೆಂದರೆ ದೂರಿನಲ್ಲಿ ನೈತಿಕತೆ ಇರಬೇಕು ಅಂದರೆ ನಿಜಾಂಶ ಇರಬೇಕು ಮತ್ತು ದೂರು ನಿಮ್ಮ ಗ್ರಾಮದ ಮತ್ತು ಗ್ರಾಮದವರು ಒಳಿತಿಗಾಗಿ ಅನ್ನುವುದನ್ನು ಗ್ರಾಮಸ್ಥರಿಗೆ ವಿವರಿಸಬೇಕು. ದೂರು ಸ್ಪಷ್ಟವಾಗಿ ಯಾವುದರ ಬಗ್ಗೆ ಅನ್ನುವುದನ್ನು ಉದ್ದೇಶ ಹೊಂದಿರಬೇಕು.

How to give complaint if grama panchayat not responding to you. ಗ್ರಾಮ ಪಂಚಾಯತಿ ನಿಮಗೆ ಸ್ಪಂದಿಸದಿದ್ದರೆ ದೂರು ಕೊಡುವುದು ಹೇಗೆ.

ಬರೆದಿರುವ ದೂರನ್ನು ನಿಮ್ಮ ಗ್ರಾಮ ಪಂಚಾಯತಿಯ ಕಾರ್ಯಾಲಯಕ್ಕೆ ಸಲ್ಲಿಸಬೇಕು. ಗ್ರಾಮ ಪಂಚಾಯಿತಿಗೆ ದೂರು ಕೊಟ್ಟ ನಂತರ acknowledgement ಪಡೆದುಕೊಳ್ಳಿ. ದೂರು ಕೊಟ್ಟಾಗ ಯಾವುದೇ ಕಾರಣಕ್ಕೂ acknowledgement ಪಡೆಯುವುದನ್ನು ಮರೆಯಬೇಡಿ. ಗ್ರಾಮ ಪಂಚಾಯತಿಯವರು ಕೇಳಿದಷ್ಟು ಸಮಯದಲ್ಲಿ ಕೆಲಸ ಪೂರ್ಣಗೊಳಿಸಬೇಕು. ಒಂದು ವೇಳೆ ನಿಮ್ಮ ಕೆಲಸ ಪೂರ್ಣಗೊಳಿಸದಿದ್ದರೆ ನೀವು ಮುಂದಿನ ಹಂತದ ಕ್ರಮಗಳನ್ನು ಕೈಗೊಳ್ಳಬಹುದು.

How to give complaint if grama panchayat not responding to you. ಗ್ರಾಮ ಪಂಚಾಯತಿ ನಿಮಗೆ ಸ್ಪಂದಿಸದಿದ್ದರೆ ದೂರು ಕೊಡುವುದು ಹೇಗೆ.

ಮುಂದಿನ ಕ್ರಮವಾಗಿ ಗ್ರಾಮ ಪಂಚಾಯಿತಿಯ ವಿರುದ್ಧ ತಾಲೂಕು ಪಂಚಾಯಿತಿಗೆ ದೂರು ಕೊಡಬಹುದು. ಎಲ್ಲಿಯ ಕೂಡ ನೀವು ಐದರಿಂದ ಹತ್ತು ಜನ ಸೇರಿ ನಿಮ್ಮ ಗ್ರಾಮ ಪಂಚಾಯತಿಗೆ ಕೊಟ್ಟಿರುವ ದೂರನ್ನು ಉಲ್ಲೇಖಿಸಿ ಲಿಖಿತ ರೂಪದಲ್ಲಿ ಮತ್ತೆ ಪುನಹ ತಾಲೂಕು ಪಂಚಾಯತಿಗೆ ಸಲ್ಲಿಸಬೇಕು. ತಾಲೂಕು ಪಂಚಾಯಿತಿ ಇಲ್ಲಿಯ ಕೂಡ ದೂರಿನ acknowledgement ತಪ್ಪದೇ ಪಡೆಯಬೇಕು. ಹಾಗೇನಾದರೂ ಒಂದು ವೇಳೆ ತಾಲೂಕು ಪಂಚಾಯಿತಿಯಿಂದಲೂ ನಿಮ್ಮೂರಿನ ಕೆಲಸ ಪೂರ್ಣಗೊಳ್ಳದೆ ಇದ್ದರೆ ಮುಂದಿನ ಕ್ರಮವಾಗಿ ಜಿಲ್ಲಾ ಪಂಚಾಯತಿಗೆ ನೇರವಾಗಿ ದೂರು ಕೊಡಬಹುದು. ಅವಾಗ ನಿಮ್ಮೂರಿನ ಕೆಲಸ ತಪ್ಪದೆ ಆಗುತ್ತದೆ. ಆದರೆ ದೂರು ಕೊಡುವುದಕ್ಕಿಂತ ಮುಂಚೆ ನಿಮ್ಮೂರಿನ ಚುನಾಯಿತ ಸದಸ್ಯನಿಗೆ ದೂರಿನ ವಿಷಯ ಮೊಟ್ಟಮೊದಲಾಗಿ ತಿಳಿದಿರಬೇಕು.

 

 

Leave a Comment