How to make birth certificate- ಜನನ ಪ್ರಮಾಣ ಪತ್ರ ಹೇಗೆ ಮತ್ತು ಎಲ್ಲಿ ಮಾಡಿಸಬೇಕು.


How to make birth certificate-ಜನನ ಪ್ರಮಾಣ ಪತ್ರ ಹೇಗೆ ಮತ್ತು ಎಲ್ಲಿ ಮಾಡಿಸಬೇಕು?

ಸ್ನೇಹಿತರೆ, ಕರ್ನಾಟಕ ರಾಜ್ಯದಲ್ಲಿ ಜನಿಸುವ ಮಕ್ಕಳಿಗೆ ಜನನ ಪ್ರಮಾಣ ಪತ್ರ ಅಂದರೆ birth certificate ಬೇಕೇ ಬೇಕು. ಹಾಗಾದರೆ ಜನನ ಪ್ರಮಾಣ ಪತ್ರ ಪಡೆಯಲು ಅರ್ಜಿ ಎಲ್ಲಿ ಹಾಗೂ ಹೇಗೆ ಸಲ್ಲಿಸಬೇಕು? ದಾಖಲೆಗಳು ಏನು ಬೇಕು ಮತ್ತು ಅರ್ಜಿ ಸಲ್ಲಿಸಿದ ನಂತರ ಏನೆಲ್ಲಾ ಪ್ರಕ್ರಿಯೆ ಇರುತ್ತೆ ಅನ್ನೋದನ್ನ ನೀವು ಈ ಪೋಸ್ಟ್ನಲ್ಲಿ ತಿಳಿಯಲು ಇದ್ದೀರಿ.

ಮೂರು ರೀತಿಯಾಗಿ birth certificate ಮಾಡಲು ಅರ್ಜಿಯನ್ನು ಸಲ್ಲಿಸಬಹುದು. ಈ ಮೂರು ಪ್ರಕ್ರಿಯೆಯನ್ನು ಒಂದೊಂದಾಗಿ ನೋಡೋಣ.

How to make birth certificate

1.First method to make birth certificate-ಜನನ ಪ್ರಮಾಣ ಪತ್ರ ಮಾಡಿಸುವ ಮೊದಲನೇ ವಿಧಾನ.

ಮಗುವಿನ ಜನನ ಮನೆಯಲ್ಲಿ ಆದರೆ ನಿಮ್ಮ ಸ್ಥಳೀಯ ಅಂಗನವಾಡಿ ಕಾರ್ಯಕರ್ತರಿಗೆ ತಿಳಿಸಬೇಕು. ಮತ್ತು ಅವರ ಬಳಿ ನಮೂನೆ-1 ಅಂದರೆ forum-1 ಸಿಗುತ್ತೆ ಇದನ್ನು ಭರ್ತಿ ಮಾಡಬೇಕು. ಒಂದು ವೇಳೆ ಅವರ ಬಳಿ forum-1 ಇರಲಿಲ್ಲ ಅಂದರೆ https://ejanma.karnataka.gov.in/Website ನಲ್ಲೂ ಈ ಫಾರಂ ಸಿಗುತ್ತೆ ಅಲ್ಲಿಂದ ಪ್ರಿಂಟ್ ಕೂಡ ತೆಗೆದುಕೊಳ್ಳಬಹುದು. ನಂತರ ಅಂಗನವಾಡಿ ಕಾರ್ಯಕರ್ತರು ನೋಂದಾಯಿಸಿ ಕೊಳ್ಳುತ್ತಾರೆ, ತದನಂತರ ಅಂಗನವಾಡಿ ಕಾರ್ಯಕರ್ತೆ village accountant ಮೂಲಕ ತಹಶೀಲ್ದಾರ್ ಕಚೇರಿಯಲ್ಲಿ ಅಧಿಕೃತ ನೋಂದಣಿ  ಆಗುತ್ತೆ. ಸ್ವಲ್ಪ ದಿನಗಳ ನಂತರ ಪಾಲಕರು ಅಂದರೆ ಮಗು ಜನಿಸಿದ ಕೆಲವು ದಿನಗಳ ನಂತರ ಪೋಷಕರು ಮಗುವಿನ ಹೆಸರು ನಿರ್ಧರಿಸಿದ ಬಳಿಕ ತಂದೆ ಮತ್ತು ತಾಯಿಯ ಆಧಾರ್ ಕಾರ್ಡ್ ಜೊತೆಗೆ ನೋಂದಣಿ ಪತ್ರ ಇದನ್ನು ಅಂಗನವಾಡಿ ಕಾರ್ಯಕರ್ತೆಯಿಂದ ಪಡೆದುಕೊಳ್ಳಿ. Village accountant ಅವರು ಇದನ್ನು ಅಂಗನವಾಡಿ ಕಾರ್ಯಕರ್ತೆಗೆ ಕೊಟ್ಟಿರುತ್ತಾರೆ. ಇಷ್ಟೆಲ್ಲಾ ಆದಮೇಲೆ ನಾಡಕಚೇರಿಯಲ್ಲಿ ಜನನ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಿದ ನಂತರ ಕನಿಷ್ಠ 7 ದಿನಗಳ ಒಳಗಡೆ birth certificate ರೆಡಿ ಆಗುತ್ತೆ. ಇದನ್ನು ನೀವು ನಾಡಕಚೇರಿಯಲ್ಲಿ ಸಹ ಪ್ರಿಂಟ್ ತೆಗೆದುಕೊಳ್ಳಬಹುದು. ನಿಮಗೆ ಎಷ್ಟು ಬೇಕು ಅಷ್ಟು copy ತೆಗೆದುಕೊಳ್ಳಬಹುದು ಮತ್ತು ಪ್ರತಿ ಪುಟಕ್ಕೆ ಗರಿಷ್ಠ 5 ರೂಪಾಯಿ ಇರಬಹುದು ಅದನ್ನು ನೀವು ಪಾವತಿಸಿ ಎಷ್ಟು copy ಬೇಕು ಅಷ್ಟು print ತೆಗೆದುಕೊಳ್ಳಿ.

2.Second method to make birth certificate-ಜನನ ಪ್ರಮಾಣ ಪತ್ರ ಮಾಡಿಸುವ ಎರಡನೇ ವಿಧಾನ.

ತಾಲೂಕು ಹಾಗೂ ಜಿಲ್ಲೆಯಲ್ಲಿರುವ ಯಾವುದೇ ಆಸ್ಪತ್ರೆಯಲ್ಲಿ ಸರ್ಕಾರಿ ಆಸ್ಪತ್ರೆಯೇ ಆಗಲಿ ಅಥವಾ ಖಾಸಗಿ ಆಸ್ಪತ್ರೆಯೇ ಆಗಲಿ ಆ ಆಸ್ಪತ್ರೆಯಲ್ಲಿ ಮಗು ಜನಿಸಿದರೆ hospital ಕಡೆಯಿಂದ ಜನನದ ಬಗ್ಗೆ ಚೀಟಿ ಪಡೆದುಕೊಳ್ಳಬೇಕು ಅಥವಾ discharge summary ಯಲ್ಲಿಯೂ ಕೂಡ ಮಗು ಜನಿಸಿದ ಬಗ್ಗೆ ನಮೂದಿಸಿರುತ್ತಾರೆ ಅವಾಗ ಚೀಟಿಯ ಅವಶ್ಯಕತೆ ಇರುವುದಿಲ್ಲ. ಮಗು ಜನಿಸಿದ ದಿನದಿಂದ 21 ದಿನಗಳ ಒಳಗಡೆ ತಾಲೂಕು ಮತ್ತು ಜಿಲ್ಲೆಯಲ್ಲಿರುವ ಪುರಸಭೆ ಮತ್ತು ಮಹಾನಗರ ಪಾಲಿಕೆಗೆ ಭೇಟಿ ನೀಡಬೇಕು. ತಂದೆ ಮತ್ತು ತಾಯಿಯ details ಹಾಗೂ ಮಗುವಿನ ಹೆಸರು ಮತ್ತು ಜನಿಸಿದ ವಿವರಗಳನ್ನು ಒಂದು ಅರ್ಜಿಯಲ್ಲಿ ಭರ್ತಿ ಮಾಡಿ ಅರ್ಜಿಯೊಂದಿಗೆ ತಂದೆ ಮತ್ತು ತಾಯಿಯ ಆಧಾರ್ ಕಾರ್ಡ್ ಮತ್ತು ಆಸ್ಪತ್ರೆಯ discharge summary ಅಥವಾ hospital slip ಲಗತ್ತಿಸಬೇಕು. Slip ಲಗತ್ತಿಸಿದ ಮೇಲೆ ಪುರಸಭೆಯಲ್ಲಿ ಅಥವಾ ಮಹಾನಗರ ಪಾಲಿಕೆಯ ಕಚೇರಿಯಲ್ಲಿ ಸಕಾಲದಲ್ಲಿ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ಬಳಿಕ ಅಲ್ಲಿಯೂ ಕೂಡ 7 ದಿನಗಳ ಒಳಗಾಗಿ birth certificate ಎಷ್ಟು copy ಬೇಕೊ ಅಷ್ಟು copy ಪ್ರಿಂಟ್ ತೆಗೆದುಕೊಳ್ಳಬಹುದು.

3. Third method to  make birth certificate-ಜನನ ಪ್ರಮಾಣ ಪತ್ರ ಮಾಡಿಸುವ ಮೂರನೇ ವಿಧಾನ.

ಮಗು ಮನೆಯಲ್ಲಿ ಜನಿಸಿದರೂ ಪರವಾಗಿಲ್ಲ ಅಥವಾ ಆಸ್ಪತ್ರೆಯಲ್ಲಿ ಜನಿಸಿದರೂ ಪರವಾಗಿಲ್ಲ ಅಥವಾ ಬೇರೆ ಎಲ್ಲೇ ಜನಿಸಿದರು ಕೂಡ ಸೇವಾ ಸಿಂಧು website ನಲ್ಲಿ birth certificate ಗೆ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಿ ಜನನ ಪ್ರಮಾಣ ಪತ್ರ ಪಡೆದುಕೊಳ್ಳಬಹುದು. ಮುಖ್ಯವಾದ ವಿಷಯ ಏನೆಂದರೆ ಇದೆಲ್ಲಾ ಮಗು ಜನಿಸಿದ 21 ದಿನಗಳ ಒಳಗಡೆ ಮಾಡಬೇಕು. ಒಂದು ವೇಳೆ ಮಗು ಜನಿಸಿ ಒಂದು ತಿಂಗಳಿಂದ ಒಂದು ವರ್ಷದ ಒಳಗಡೆ ಜನನ ಪ್ರಮಾಣ ಪತ್ರ ಪಡೆದಿಲ್ಲವೆಂದರೆ ಅರ್ಜಿ ಹಾಕುವಾಗ ದಂಡ ಬೀಳಬಹುದು. ಆದ್ದರಿಂದ ದಯವಿಟ್ಟು ಮಗು ಜನಿಸಿದ 21 ದಿನಗಳ ಒಳಗಾಗಿ birth certificate ಗೆ ಅರ್ಜಿ ಸಲ್ಲಿಸಿ ಯಾವುದೇ ರೀತಿಯ ತೊಂದರೆ ಇರುವುದಿಲ್ಲ.

 

Leave a Comment