Table of Contents
How to open pradhana mantri Jan dhan account-ಪ್ರಧಾನಮಂತ್ರಿ ಜನಧನ ಖಾತೆಯನ್ನು ತೆರೆಯುವುದು ಹೇಗೆ?
ಸ್ನೇಹಿತರೆ, ಈ ಪೋಸ್ಟ್ನಲ್ಲಿ ಪ್ರಧಾನಮಂತ್ರಿ ಜನಧನ ಖಾತೆಯನ್ನು ಹೇಗೆ ತೆರೆಯಬೇಕು, ಇದಕ್ಕೆ ಯಾವುದೆಲ್ಲ ಕ್ರಮಗಳನ್ನು ಅನುಸರಿಸಬೇಕು ಹಾಗೂ ಪ್ರಧಾನಮಂತ್ರಿ ಜನಧನ ಖಾತೆಯನ್ನು ತೆರೆಯುವುದರಿಂದ ನಮಗಾಗುವ ಲಾಭಗಳೇನು ಈ ವಿವರಗಳನ್ನು ಈ ಪೋಸ್ಟ್ನಲ್ಲಿ ನೀವು ತಿಳಿದುಕೊಳ್ಳಲು ಇದ್ದೀರಾ.
ಜನಧನ ಖಾತೆ ಅಂದರೆ zero balance account ಎಂದರ್ಥ. ಸಾಮಾನ್ಯವಾಗಿ ಜನಧನ ಯೋಜನೆಯಲ್ಲಿ ಫ್ರೀ ಆಗಿ account open ಮಾಡಬಹುದು. ಈ account open ಮಾಡಿದ್ರೆ ಸರ್ಕಾರದ ವತಿಯಿಂದ ತುಂಬಾನೇ ಲಾಭಗಳು ಸಿಗುತ್ತಾ ಇರುತ್ತವೆ. ಹಾಗಾಗಿ ಜನಧನ ಖಾತೆಗೆ ಅರ್ಜಿ ಎಲ್ಲಿ ಹಾಗೂ ಹೇಗೆ ಸಲ್ಲಿಸಬೇಕು, ಈ ಅಕೌಂಟ್ ಇದ್ರೆ ಸರ್ಕಾರದ ವತಿಯಿಂದ ಏನು ಲಾಭ ಸಿಗುತ್ತದೆ, ಮುಖ್ಯವಾಗಿ ಈ ಅಕೌಂಟ್ ಇರುವವರು ಏನೇನು ರೂಲ್ಸ್ ಫಾಲೋ ಮಾಡಬೇಕು, ಹಾಗೆ ಯಾವ ಯಾವ ಬ್ಯಾಂಕುಗಳಲ್ಲಿ ಜನಧನ ಖಾತೆ ತೆರೆಯಬಹುದು ಎಂದು ಈ ಪೋಸ್ಟ್ನಲ್ಲಿ ಸಂಪೂರ್ಣವಾಗಿ ನೀವು ತಿಳಿಯಲು ಇದ್ದೀರಾ.
What are the documents required to open Jan dhan account-ಜನ ಧನ ಖಾತೆ ತೆರೆಯಲು ಅಗತ್ಯವಾಗಿ ಬೇಕಾಗಿರುವ ದಾಖಲೆಗಳು.
How to open Jan dhan account.
- PAN card-ಪಾನ್ ಕಾರ್ಡ್
- Aadhar card-ಆಧಾರ್ ಕಾರ್ಡ್
- Voter ID-ವೋಟರ್ ಐಡಿ
- Job card-ಉದ್ಯೋಗ ಪತ್ರ
- Passport size photo-3
- Jan dhan account opening form
ಪಾನ್ ಕಾರ್ಡ್ ಕಡ್ಡಾಯವಾಗಿ ಸಲ್ಲಿಸಬೇಕು, ಹಾಗೆ ಆಧಾರ್ ಕಾರ್ಡ್, ವೋಟರ್ ಐಡಿ ಕಾರ್ಡ್, ಉದ್ಯೋಗ ಜಾಬ್ ಕಾರ್ಡ್ ಇವೆಲ್ಲಾ ದಾಖಲೆಗಳು address proof ಗಾಗಿ ನೀವು ಸಲ್ಲಿಸಬೇಕಾಗುತ್ತದೆ. ಹಾಗೆ 3 ಪಾಸ್ಪೋರ್ಟ್ ಸೈಜ್ ಫೋಟೋ ಬೇಕು, ಇದರ ಜೊತೆಗೆ ಜನಧನ ಖಾತೆ ತೆರೆಯಲು ಫಾರಂ ಭರ್ತಿ ಮಾಡಿ ಸಲ್ಲಿಸಬೇಕು.
ಈ ಮೇಲೆ ಹೇಳಿದ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಸರ್ಕಾರ ಸೂಚಿಸಿರುವ ಭಾರತದಲ್ಲಿರುವ 27 public sector ಬ್ಯಾಂಕುಗಳಿವೆ ಹಾಗೆ ಕೆಲವು private ಬ್ಯಾಂಕುಗಳಲ್ಲಿ ಕೂಡ ಜನಧನ ಯೋಜನೆ ಅಕೌಂಟ್ ತೆರೆಯಬಹುದು.
ಜನಧನ ಖಾತೆ ತೆರೆಯಲು ಸೂಕ್ತವಿರುವ ಬ್ಯಾಂಕುಗಳ ವಿವರ.
How to open Jan dhan account
- Allahabad Bank
- Andhra Bank
- Bank of Baroda (Bob)
- State Bank of India (sbi)
- Bank of Maharashtra
- Canara Bank
- Central Bank of India
- Bhartiya mahila Bank
- ICICI Bank
- HDFC Bank etc……………
Benefits of opening PM Jan dhan account-ಪ್ರಧಾನಮಂತ್ರಿ ಜನಧನ ಖಾತೆ ತೆರೆಯುವುದರಿಂದ ನಮಗಾಗುವ ಲಾಭಗಳು.
How to open Jan dhan account.
- Deposit ಮಾಡಿರುವ ಹಣಕ್ಕೆ ಬಡ್ಡಿ ಸಿಗುತ್ತೆ.
- ಎರಡು ಲಕ್ಷದವರೆಗೆ personal accident insurance ಯೋಜನೆಯನ್ನು ಪಡೆಯಬಹುದು. 2018ರ ಹಿಂದೆ ಒಂದು ಲಕ್ಷ ಇದ್ದ ಮೊತ್ತ ಸೆಪ್ಟೆಂಬರ್ 2018 ರಿಂದ 2 ಲಕ್ಷ ಆಗಿದೆ.
- Accident insurance ಪಡೆಯಲು accident ಆದನಂತರ 90 ದಿನಗಳ ಒಳಗಾಗಿ ಜನಧನ ಖಾತೆ ಹೊಂದಿರುವ ಬ್ಯಾಂಕಿಗೆ ಅರ್ಜಿ ಸಲ್ಲಿಸಿ insurance coverage ಪಡೆಯಬಹುದು.
- ಜನಧನ ಖಾತೆ ಹೊಂದಿರುವವರಿಗೆ Rupay debit card ನೀಡುತ್ತಾರೆ.
- Life insurance cover 30 ಸಾವಿರದ ವರೆಗೂ ಜನಧನ ಖಾತೆ ಹೊಂದಿರುವವರಿಗೆ ಈ ಲಾಭ ಸಿಗುತ್ತೆ. ಇದನ್ನು ಹೇಗೆ ಪಡೆಯುವುದೆಂದರೆ ಖಾತೆದಾರ ಮರಣಹೊಂದಿದರೆ ಆ ಹಣ nominee ಗೆ ನೀಡುತ್ತಾರೆ.
- ಭಾರತದಾದ್ಯಂತ ಸರಳವಾಗಿ ಜನಧನ ಖಾತೆಯಿಂದ ಹಣವನ್ನು ಬೇರೆ ಬ್ಯಾಂಕಿನ ಖಾತೆಗೆ ಸರಳವಾಗಿ ವರ್ಗಾವಣೆ ಮಾಡಿಕೊಳ್ಳಬಹುದು.
- ಸರ್ಕಾರದ ಯೋಜನೆಗಳಿಂದ ನೇರವಾಗಿ ಈ ಬ್ಯಾಂಕ್ ನ ಖಾತೆಗೆ ಹಣ ಖಾತೆದಾರ ಸ್ವೀಕರಿಸಬಹುದು. ಉದಾಹರಣೆಗೆ ಪಿಎಂ ಕಿಸಾನ್ ಯೋಜನೆಯಿಂದ ಬರುತ್ತಿರುವ ಹಣ, ಗ್ಯಾಸ್ ಸಬ್ಸಿಡಿ ಹಣ, ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ಫ್ರೀ ಆಗಿ 500 ಬರುತ್ತಿರುವ ಹಣ ಹಾಗೆ ಇನ್ನಿತರ ಸರ್ಕಾರದ ಇತರ ಸೇವೆಗಳಿಂದ ಬರುತ್ತಿರುವ ಹಣ ನೇರವಾಗಿ ಜನಧನ ಬ್ಯಾಂಕ್ ಅಕೌಂಟ್ ಗೆ ಜಮಾವಣೆ ಆಗುತ್ತದೆ.
Rules to follow on jandhan Bank account-ಜನಧನ ಖಾತೆ ಹೊಂದಿರುವವರು ಅನುಸರಿಸಬೇಕಾದ ನಿಯಮಗಳು.
How to open Jan dhan account.
- ಜನಧನ ಖಾತೆಯಲ್ಲಿ ಒಂದು ವರ್ಷದಲ್ಲಿ ಜಮಾವಣೆ ಮಾಡುವ ಹಣ 1 ಲಕ್ಷ ಮೀರಬಾರದು.
- ಜನಧನ ಖಾತೆಯಲ್ಲಿ ಬಂದು ತಿಂಗಳಿನಲ್ಲಿ ಹಣ ಡ್ರಾ ಮಾಡುವುದಾಗಲಿ, ಇನ್ನೊಬ್ಬರಿಗೆ ಕಳಿಸುವುದಾಗಲಿ 10 ಸಾವಿರಕ್ಕಿಂತ ಹೆಚ್ಚು ಮೀರಿರಬಾರದು.
- ಒಂದು ತಿಂಗಳಿನಲ್ಲಿ ನಾಲ್ಕು ಬಾರಿ ಮಾತ್ರ ಹಣ ಡ್ರಾ ಮಾಡೋದಕ್ಕೆ ಮಾತ್ರ ಅವಕಾಶವಿದೆ.
- ಜನಧನ ಖಾತೆಯಲ್ಲಿ ಜಮಾವಣೆಯಾಗುವ ಹಣ 50 ಸಾವಿರ ಮೀರಿರಬಾರದು.