ಸ್ನೇಹಿತರೆ, ಇವತ್ತಿನ ಪೋಸ್ಟ್ನಲ್ಲಿ crop loan ಅಂದರೆ ಬೆಳೆ ಸಾಲ ಹೇಗೆ ಪಡೆದುಕೊಳ್ಳುವುದು, crop loan ಪಡೆಯಲು ಮುಖ್ಯವಾಗಿ ನೀವು ಯಾವ ದಾಖಲೆಗಳು ಹೊಂದಿರಬೇಕು, loan ಪ್ರಕ್ರಿಯೆ ಹೇಗಿರುತ್ತೆ, ಎಷ್ಟು ದಿನದಲ್ಲಿ ಬೆಳೆ ಸಾಲ ಸರಳವಾಗಿ ತೆಗೆದುಕೊಳ್ಳಬಹುದು ಹೀಗೆ ಅನೇಕ crop loan ಗೆ ಸಂಬಂಧಪಟ್ಟ ವಿಷಯಗಳನ್ನು ನೀವು ಈ ಪೋಸ್ಟ್ನಲ್ಲಿ ತಿಳಿದುಕೊಳ್ಳಲು ಇದ್ದೀರಾ.
How to take crop loan-ಕೃಷಿ ಲೋನ್ ತೆಗೆದುಕೊಳ್ಳುವುದು ಹೇಗೆ.
Crop loan ಬೇಕೆನ್ನುವವರು ಮೊದಲು ನಿಮ್ಮ ಊರಿನಲ್ಲಿರುವ ಬ್ಯಾಂಕಿಗೆ ಭೇಟಿ ನೀಡಿ, crop loan ಬಗ್ಗೆ ನಿಮ್ಮ ಬ್ಯಾಂಕಿನ manager ಬಳಿ ಮಾತನಾಡಿ, ಅವರು ನಿಮಗೆ ಏನೇನು ದಾಖಲೆಗಳು ಬೇಕೆಂದು ಹೇಳುತ್ತಾರೆ. ಬ್ಯಾಂಕಿಗೆ ಹೋಗುವುದಕ್ಕಿಂತ ಮುಂಚೆ ಒಂದು ಬಾರಿ ಈ ಪೋಸ್ಟ್ನಲ್ಲಿ ಹೇಳಿರುವ ದಾಖಲೆಗಳು ನಿಮ್ಮ ಬಳಿ ಇದೆಯಾ ಅಥವಾ ಇಲ್ವಾ ಎಂದು ಪರೀಕ್ಷಿಸಿಕೊಳ್ಳಿ. ನಂತರ ಬ್ಯಾಂಕಿನವರು ಹೇಳುವ ದಾಖಲೆಗಳನ್ನು ರೆಡಿ ಮಾಡಿಕೊಂಡು ಪುನಹ ಬ್ಯಾಂಕಿಗೆ ಹೋದರೆ documents verification ನಂತರ ನಿಮಗೆ ಬೆಳೆ ಸಾಲ ನಿಮಗೆ ಸರಳವಾಗಿ ಸಿಗುತ್ತದೆ. ಹಾಗಾದರೆ ಬೆಳೆ ಸಾಲ ಕೊಡಲು ಬ್ಯಾಂಕಿನವರು ಮುಖ್ಯವಾಗಿ ಯಾವ ಯಾವ ದಾಖಲೆಗಳನ್ನು ಕೇಳಬಹುದು ಎಂದು ಈ ಕೆಳಗೆ ನೋಡೋಣ.
Documents required to get crop loan under 1 lakh-1 ಲಕ್ಷ ಬೆಳೆ ಸಾಲ ಪಡೆಯಲು ಬೇಕಾಗಿರುವ ಮುಖ್ಯ ದಾಖಲೆಗಳು.
- Crop loan 1 ಲಕ್ಷದ ಒಳಗೆ ಪಡೆಯಲು ಬಯಸಿದರೆ ದಾಖಲೆಗಳು ಜಾಸ್ತಿ ಬೇಕಾಗುವುದಿಲ್ಲ, ನಿಮ್ಮ ಬಳಿ ಕೇವಲ ಆಧಾರ್ ಕಾರ್ಡ್, ವೋಟರ್ ಐಡಿ ಕಾರ್ಡ್, ಜಮೀನಿನ ಇತ್ತೀಚಿನ ಪಹಣಿ ಹಾಗೂ mutation copy(ಆನ್ಲೈನ್ನಲ್ಲಿ ಜಮೀನಿನ mutation copy ಯ ಪ್ರಿಂಟ್ ಸಿಗುತ್ತೆ)
- Mutation ಅಂದರೆ ಜಮೀನು ಯಾರಿಂದ ಯಾರಿಗೆ ವರ್ಗಾವಣೆಯಾಗಿದೆ ಅನ್ನುವ ದಾಖಲೆ ಪತ್ರವೆ mutation copy.
- ಜಮೀನಿನ tax paid receipt ಬೇಕಾಗುತ್ತದೆ ಅಂದರೆ ಜಮೀನಿಗೆ tax ಕಟ್ಟಿರುವ ಬಗ್ಗೆ tax receipt ಬೇಕಾಗುತ್ತೆ. Text ಕಟ್ಟಿರುವ receipt village accountant ಬಳಿ ಸಿಗುತ್ತೆ.
- 2 passport size ಫೋಟೋ ಬೇಕಾಗುತ್ತೆ.
ಇಷ್ಟು ದಾಖಲೆಗಳು ಸಾಕಾಗಬಹುದು 1 ಲಕ್ಷಕ್ಕಿಂತ ಕಡಿಮೆ crop loan ತೆಗೆದುಕೊಳ್ಳಬೇಕೆನ್ನುವವರಿಗೆ.
Documents required to get crop loan from 1 to 3 lakh-1 ರಿಂದ 3 ಲಕ್ಷ ಬೆಳೆ ಸಾಲ ಪಡೆಯಲು ಬೇಕಾಗಿರುವ ಮುಖ್ಯ ದಾಖಲೆಗಳು.
- Family tree certificate ಅಂದರೆ ವಂಶಾವಳಿ ಪ್ರಮಾಣಪತ್ರ ಬೇಕಾಗುತ್ತದೆ, ಜಮೀನು ನಿಮ್ಮ ಮನೆಯ ಹಿರಿಯರ ಹೆಸರಿನಲ್ಲಿ ಇದ್ದರೆ ವಂಶಾವಳಿ ಪ್ರಮಾಣ ಪತ್ರ ಬೇಕು, ಒಂದು ವೇಳೆ ಜಮೀನು ಏನಾದರೂ ನಿಮ್ಮ ಹೆಸರಿನಲ್ಲಿ ಇದ್ದರೆ ಕೇವಲ e-stamp paper update ಮಾಡಿಸಿ ಅದನ್ನು ನಿಮ್ಮ ವಕೀಲರ ಕೈಯಲ್ಲಿ ನೋಟರಿ ಮಾಡಿಸಿದರೆ ಸಾಕಾಗುತ್ತದೆ.
- ಕೆಲವೊಂದು ಬ್ಯಾಂಕ್ನಲ್ಲಿ ಚೆಕ್ ಬಂದಿವಾರು ಕೇಳುತ್ತಾರೆ, ಚೆಕ್ ಬಂದಿ ಕೂಡ ಅಷ್ಟೇ e-stamp paper update ಮಾಡಿಸಿ ನೋಟರಿ ಮಾಡಿಸಬಹುದು.
- Sale deed ಅಂದರೆ ಖರೀದಿ ಪತ್ರ, ಇತ್ತೀಚಿಗೆ ಏನಾದರೂ ಜಮೀನು ಖರೀದಿ ಆಗಿದ್ದರೆ ಜಮೀನಿನ ಖರೀದಿ ಪತ್ರ ಮುಖ್ಯವಾಗಿ ಬೇಕಾಗುತ್ತದೆ.
- RTC ಅಂದರೆ ಪಹಣಿ ಪತ್ರ, ಇದು ಸುಮಾರು 2001ರಿಂದ ಇಲ್ಲಿಯವರೆಗೂ ಪಹಣಿ ಬೇಕಾಗುತ್ತದೆ. ಇದು ನಾಡಕಚೇರಿ ಅಥವಾ ತಹಶೀಲ್ದಾರ್ ಕಚೇರಿಯಲ್ಲಿ ಪಡೆಯಬಹುದು.
- Crop certificate ಅಂದರೆ ಬೆಳೆ ಪ್ರಮಾಣ ಪತ್ರ ಇದು ಕೂಡ ತಹಶೀಲ್ದಾರ್ ಕಚೇರಿಯ ಸುತ್ತಮುತ್ತ ಇರುವ ಜೆರಾಕ್ಸ್ ಸೆಂಟರ್ನಲ್ಲಿ ಬೆಳೆ ಪ್ರಮಾಣ ಪತ್ರದ ಫಾರಂ ತೆಗೆದುಕೊಂಡು, ನಿಮ್ಮ ಹಳ್ಳಿಯ village accountant ಅವರು ನಿಮ್ಮ ಜಮೀನಿನಲ್ಲಿ ಯಾವ ಬೆಳೆ ಇದೆ ಎಂದು ಬರೆದು ಸಹಿಮಾಡಿ ಕೊಡುತ್ತಾರೆ.
How to to take crop loan-ಕೃಷಿ ಲೋನ್ ತೆಗೆದುಕೊಳ್ಳುವುದು ಹೇಗೆ.
ಇಷ್ಟೆಲ್ಲಾ ದಾಖಲೆಗಳನ್ನು ಬ್ಯಾಂಕಿನಲ್ಲಿ ಕೊಟ್ಟರೆ ಸುಮಾರು 15 ರಿಂದ 20 ದಿನಗಳ ಒಳಗಡೆ ಬೆಳೆಸಾಲ ಸಿಗುತ್ತೆ. ಒಂದು ಎಕರೆಗೆ ಅಂದಾಜು 50 ಸಾವಿರ ರೂಪಾಯಿಯಿಂದ 1 ಲಕ್ಷದ ವರೆಗೂ crop loan ಸಿಗಬಹುದು. ಆದರೆ ಎಲ್ಲಕ್ಕಿಂತ ಮುಖ್ಯವಾಗಿ ಬೆಳೆ ಸಾಲ ತೆಗೆದುಕೊಳ್ಳುವ ಮೊದಲು ಬೆಳೆ ಸಾಲದ ಬಡ್ಡಿಯ ಬಗ್ಗೆ ಚೆನ್ನಾಗಿ ತಿಳಿದುಕೊಂಡು ನಂತರ ಬೆಳೆಸಾಲ ತೆಗೆದುಕೊಳ್ಳಿ.