2021ರ ಕೇಂದ್ರ ಬಜೆಟ್‌ನಲ್ಲಿ ಹಣಕಾಸು ಸಚಿವಾಲಯವು ಹೊಸ ತೆರಿಗೆ ನಿಯಮವನ್ನ ಜಾರಿಗೆ ತಂದಿದ್ದು, ಟಿಡಿಎಸ್ ಫೈಲ್ ಮಾಡದವರಿಗೆ ಹೆಚ್ಚಿನ ದಂಡ ವಿಧಿಸಲು ಮುಂದಾಗಿದೆ. ಆದಾಯದ ನಿರ್ದಿಷ್ಟ ಸ್ವರೂಪವನ್ನು ಹೊಂದಿರುವ ಪ್ರಕರಣಗಳ ಮೇಲೆ ಹೆಚ್ಚಿನ ದರದಲ್ಲಿ ಟಿಡಿಎಸ್ ಅನ್ನು ಕಡಿತಗೊಳಿಸಲು ಹೊಸ ಸೆಕ್ಷನ್ 206 ಎಬಿ ಅನ್ನು ಪರಿಚಯಿಸಲಾಗಿದೆ.ಈ ಹೊಸ ತೆರಿಗೆ ನಿಯಮಗಳು ಜುಲೈ 2021ರಿಂದ ಜಾರಿಗೆ ಬಂದಿದ್ದು, ಸರಿಯಾದ ವೇಳೆಯಲ್ಲಿ ಟಿಡಿಎಸ್ ಫೈಲ್ ಮಾಡದಿದ್ದವರು ಹೆಚ್ಚಿನ ದಂಡ ಪಾವತಿಸಬೇಕಾಗುತ್ತದೆ.ಇದು ಕೇವಲ ಕೆಲವು ತೆರಿಗೆದಾರರಿಗೆ ಮಾತ್ರ ಅನ್ವಯಿಸುತ್ತದೆ.
ಹಾಗಾದರೆ ಯಾರು ಹೆಚ್ಚಿನ ಟಿಡಿಎಸ್ ದರ ಪಾವತಿಸಬೇಕು?
ಕಳೆದ ಎರಡು ವರ್ಷಗಳಲ್ಲಿ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಸದ ಮತ್ತು ಪ್ರತಿ ವರ್ಷ ಒಟ್ಟು ಟಿಡಿಎಸ್ 50,000 ರೂ.ಗಳನ್ನು ಮೀರಿದ ತೆರಿಗೆದಾರರು ಜುಲೈನಿಂದ ಹೆಚ್ಚಿನ ದರದಲ್ಲಿ ಟಿಡಿಎಸ್ ಪಾವತಿಸಬೇಕಾಗುತ್ತದೆ.
IT Returns -ಜುಲೈನಿಂದ ಹೊಸ TDS ನಿಯಮ ಜಾರಿ, ಹೊಸ ನಿಯಮ ಏನೆಂದು ತಿಳಿಯಿರಿ.
PM kissan samman nidhi yojana-ಕಿಸಾನ್ ಸಮ್ಮಾನ್ ಯೋಜನೆಯ 9ನೇ ಕಂತಿನ ಹಣ ಬಿಡುಗಡೆ.
ಹಾಗಾದರೆ ಹೊಸ ಟಿಡಿಎಸ್ ದರಗಳೇನು?
ಟಿಡಿಎಸ್ ದರವು ಸಂಬಂಧಿತ ವಿಭಾಗ ಅಥವಾ ನಿಬಂಧನೆಯ ಅಡಿಯಲ್ಲಿ ನಿರ್ದಿಷ್ಟಪಡಿಸಿದ ದರಕ್ಕಿಂತ ಎರಡು ಪಟ್ಟು ಅಥವಾ ಶೇಕಡಾ 5ರಷ್ಟು, ಯಾವುದು ಹೆಚ್ಚಿದೆಯೋ ಅದನ್ನ ವಿಧಿಸಲಾಗುತ್ತದೆ ಎಂದು ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ತಿಳಿಸಿದೆ.
IT Returns -ಜುಲೈನಿಂದ ಹೊಸ TDS ನಿಯಮ ಜಾರಿ, ಹೊಸ ನಿಯಮ ಏನೆಂದು ತಿಳಿಯಿರಿ.
Top 3 central government pension scheme-ಕೇಂದ್ರ ಸರ್ಕಾರದ 3 ಪಿಂಚಣಿ ಯೋಜನೆಗಳು.
ಹೆಚ್ಚಿನ ಟಿಡಿಎಸ್ ಪಾವತಿಸಬೇಕೇ ಅಥವಾ ಬೇಡವೇ ಎಂದು ಪರಿಶೀಲಿಸುವುದು ಹೇಗೆ?
ತೆರಿಗೆದಾರರು ಜುಲೈ ತಿಂಗಳಿನಿಂದ ಹೆಚ್ಚಿನ ದರದಲ್ಲಿ ಟಿಡಿಎಸ್ ಪಾವತಿ ಪಾವತಿಸಬೇಕಾಗಬಹುದೇ ಎಂದು ಪರಿಶೀಲಿಸಬಹುದು. ತೆರಿಗೆದಾರರ ಮೇಲಿನ ಹೊರೆ ಸರಾಗಗೊಳಿಸುವ ಸಲುವಾಗಿ ಆದಾಯ ತೆರಿಗೆ ರೆಗ್ಯುಲೇಟರ್ ಇತ್ತೀಚೆಗೆ “206 ಎಬಿ ಮತ್ತು 206 ಸಿಸಿಎ ವಿಭಾಗಗಳಿಗೆ ಅನುಸರಣೆ ಪರಿಶೀಲನೆ” ಎಂಬ ಹೊಸ ಕಾರ್ಯವನ್ನು ಅನಾವರಣಗೊಳಿಸಿದೆ.
IT Returns -ಜುಲೈನಿಂದ ಹೊಸ TDS ನಿಯಮ ಜಾರಿ, ಹೊಸ ನಿಯಮ ಏನೆಂದು ತಿಳಿಯಿರಿ.
Farmer’s loan waiver scheme 2021-ರೈತರ-ಸಾಲ-ಮನ್ನಾ.
ಆದಾಯ ತೆರಿಗೆ ಇಲಾಖೆಯು TDS ಪಟ್ಟಿಯನ್ನು ಹೇಗೆ ತಯಾರಿಸುತ್ತಿದೆ?
2018-19 ಮತ್ತು 2019-20 ಹಿಂದಿನ ವರ್ಷಗಳನ್ನು ತೆಗೆದುಕೊಂಡು ತೆರಿಗೆ ಇಲಾಖೆಯು 2021-22ರ ಆರ್ಥಿಕ ವರ್ಷದ ಪ್ರಾರಂಭದಂತೆ ಪಟ್ಟಿಯನ್ನು ಸಿದ್ಧಪಡಿಸಿದೆ. 2019-20 ಮತ್ತು 2020-21ರ ಮೌಲ್ಯಮಾಪನ ವರ್ಷಗಳಿಗೆ ಐಟಿ ರಿಟರ್ನ್ ಸಲ್ಲಿಸದ ತೆರಿಗೆದಾರರ ಹೆಸರನ್ನು ಈ ಪಟ್ಟಿಯು ಒಳಗೊಂಡಿದೆ ಮತ್ತು ಈ ಹಿಂದಿನ ಎರಡು ವರ್ಷಗಳಲ್ಲಿ 50,000 ಅಥವಾ ಅದಕ್ಕಿಂತ ಹೆಚ್ಚಿನ ಟಿಡಿಎಸ್ ಮೊತ್ತವನ್ನು ಹೊಂದಿದೆ.
IT Returns -ಜುಲೈನಿಂದ ಹೊಸ TDS ನಿಯಮ ಜಾರಿ, ಹೊಸ ನಿಯಮ ಏನೆಂದು ತಿಳಿಯಿರಿ.
ಸಿಬಿಡಿಟಿ ಪ್ರಸ್ತಾಪಿಸಿದ ಎಲ್ಲಾ ನಿಯಮಗಳನ್ನ ಅನುಸರಿಸಿ ಪ್ರತಿ ಹಣಕಾಸು ವರ್ಷದ ಆರಂಭದಲ್ಲಿ ಹೊಸ ಪಟ್ಟಿಯನ್ನು ತಯಾರಿಸಲಾಗುತ್ತದೆ. 2021-22ರ ಆರ್ಥಿಕ ವರ್ಷದಲ್ಲಿ ತೆರಿಗೆ ಇಲಾಖೆಯು ಯಾವುದೇ ಹೊಸ ಹೆಸರುಗಳನ್ನು ಪಟ್ಟಿಯಲ್ಲಿ ಸೇರಿಸುವುದಿಲ್ಲ.
IT Returns -ಜುಲೈನಿಂದ ಹೊಸ TDS ನಿಯಮ ಜಾರಿ, ಹೊಸ ನಿಯಮ ಏನೆಂದು ತಿಳಿಯಿರಿ.
Jandhan account benefits 2021-ಜನಧನ ಖಾತೆಯ ಹೊಸ ಉಪಯೋಗಗಳು.
ಆದಾಯ ತೆರಿಗೆ ರಿಟರ್ನ್ ಗಡುವು ವಿಸ್ತರಣೆ?
ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಸುವ ದಿನಾಂಕವನ್ನು ಕೇಂದ್ರ ಸರ್ಕಾರ ಎರಡು ತಿಂಗಳ ಕಾಲ ವಿಸ್ತರಿಸಿದ್ದು, ಸೆಪ್ಟೆಂಬರ್ 30ರವರೆಗೆ ಅವಕಾಶ ನೀಡಿದೆ. ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಕಂಪೆನಿಗಳಿಗೆ ಐಟಿಆರ್ ಸಲ್ಲಿಸುವ ಗಡುವನ್ನು ನವೆಂಬರ್ 30 ರವರೆಗೆ ವಿಸ್ತರಿಸಿದೆ.
ಆದಾಯ ತೆರಿಗೆ ಕಾನೂನಿನ ಪ್ರಕಾರ, ಲೆಕ್ಕಪರಿಶೋಧನೆಯ ಅಗತ್ಯವಿಲ್ಲದ ಮತ್ತು ಸಾಮಾನ್ಯವಾಗಿ ಐಟಿಆರ್ -1 ಅಥವಾ ಐಟಿಆರ್ -4 ಬಳಸಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ವ್ಯಕ್ತಿಗಳಿಗೆ ಐಟಿಆರ್ ಸಲ್ಲಿಸಲು ಗಡುವು ಜುಲೈ 31 ಆಗಿತ್ತು.
ಜೊತೆಗೆ ಕಂಪನಿಗಳಂತೆ ತೆರಿಗೆ ಪಾವತಿದಾರರಿಗೆ ಗಡುವು ಅಥವಾ ಆಡಿಟ್ ಮಾಡಬೇಕಾದ ಸಂಸ್ಥೆಗಳ ಅವಧಿಯು ಅಕ್ಟೋಬರ್ 31 ಆಗಿದೆ. ಇನ್ನು ಉದ್ಯೋಗದಾತರಿಂದ(Employers) ಉದ್ಯೋಗಿಗಳಿಗೆ ಫಾರ್ಮ್- 16 ನೀಡುವ ಗಡುವನ್ನು ಜುಲೈ 15 ರವರೆಗೆ ಒಂದು ತಿಂಗಳವರೆಗೆ ವಿಸ್ತರಿಸಲಾಗಿದೆ ಎಂದು ಸಿಬಿಡಿಟಿ ಹೇಳಿದೆ.
INCOME TAX DEPARTMENT WEBSITE LINK
https://www.incometax.gov.in/iec/foportal