Jandhan account benefits 2021-ಜನಧನ ಖಾತೆಯ ಹೊಸ ಉಪಯೋಗಗಳು.
ಜನಧನ ಖಾತೆಯ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಎಲ್ಲರಿಗೂ ಗೊತ್ತಿರೋದೇ, ಜನಧನ ಖಾತೆ ಅದು ಒಂದು ಯೋಜನೆ ಆದರೆ ಅದರಲ್ಲಿ ಹಲವು ಪ್ರಯೋಜನಗಳಿವೆ. ಈ ಜನಧನ ಖಾತೆಯಿಂದ ಏನೆಲ್ಲಾ ಪ್ರಯೋಜನಗಳು ಇವೆ ಅನ್ನೋದನ್ನ ನೋಡೋಣ.
ಸಾಮಾನ್ಯವಾಗಿ ಯಾವುದೇ ಬ್ಯಾಂಕಿನಲ್ಲಿ ನೀವು ಖಾತೆ ತೆರೆಯಬೇಕಾದರೆ ನಿರ್ದಿಷ್ಟ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಅಲ್ಲದೇ ಖಾತೆಯಲ್ಲಿ ಕನಿಷ್ಠ ಇಂತಿಷ್ಟು ಹಣ ಇರಲೇಬೇಕೆಂಬ ನಿಯಮವಿರುತ್ತದೆ ಆದರೆ ಜನಧನ ಯೋಜನೆಯಡಿಯಲ್ಲಿ ನೀವು ಬ್ಯಾಂಕ್ ಖಾತೆಯನ್ನು ಉಚಿತವಾಗಿ ತೆರೆಯಬಹುದು. ಎಲ್ಲದಕ್ಕಿಂತ ಮುಖ್ಯವಾಗಿ ನಿಮ್ಮ ಖಾತೆಯಲ್ಲಿ minimum balance ಇರಲೇಬೇಕು ಎಂದೇನಿಲ್ಲ ಆದರೆ ಶೂನ್ಯ balance ಹಾಗೂ ಶೂನ್ಯ ಶುಲ್ಕಕ್ಕೆ ಖಾತೆ ತೆರೆಯಬಹುದು. KYC ಕೂಡ ಸರಳವಾಗಿದೆ.
Jandhan account benefits 2021-ಜನಧನ ಖಾತೆಯ ಹೊಸ ಉಪಯೋಗಗಳು.
ಖಾತೆ ತೆರೆದು 6 ತಿಂಗಳು ಕಳೆದ ಬಳಿಕ ನಿಮಗೆ over draw ಸೌಲಭ್ಯ ನೀಡಲಾಗುತ್ತದೆ. ಅಂದರೆ ಸಾಲವನ್ನು ನೀಡಲಾಗುತ್ತದೆ. ಗರಿಷ್ಠ 10 ಸಾವಿರ ರೂಪಾಯಿಗಳವರೆಗೂ ಸಾಲವನ್ನು ನೀಡಲಾಗುವುದು, ಆದರೆ ಇಷ್ಟು ಮೊತ್ತದ over draw ಪಡೆಯಲು ಕೆಲವು ಷರತ್ತುಗಳಿಗೆ ನೀವು ಬದ್ಧರಾಗಬೇಕು. ಆದರೆ ಯಾವುದೇ ಷರತ್ತುಗಳಿಲ್ಲದೆ 2 ಸಾವಿರ ರೂಪಾಯಿಗಳವರೆಗೂ ನೀವು ಸಾಲವನ್ನು ಪಡೆಯಬಹುದು. ಜನಧನ ಖಾತೆ ತೆರೆದವರಿಗೆ Rupay ಡೆಬಿಟ್ ಕಾರ್ಡ್ ನೀಡಲಾಗುತ್ತದೆ. ಇದರ ಮೂಲಕ ನೀವು ATM ಕೇಂದ್ರಗಳಲ್ಲಿ ನಿಮ್ಮ ಖಾತೆಯಿಂದ ಹಣವನ್ನು ಡ್ರಾ ಮಾಡಿಕೊಳ್ಳಬಹುದು. ಅಷ್ಟೇ ಅಲ್ಲದೆ online ಅಥವಾ shop ಗಳಲ್ಲಿ ವಸ್ತುಗಳನ್ನು ಖರೀದಿಸಿದ ಬಳಿಕ Rupay card ಬಳಸಿ ಪೇಮೆಂಟ್ ಕೂಡ ಮಾಡಬಹುದಾಗಿದೆ.
Pradhan mantri krishi sinchai yojana-ಪ್ರಧಾನಮಂತ್ರಿ ಕೃಷಿ ಸಿಂಚಯಿ ಯೋಜನೆ 2021.https://mahithimithra.com/pradhan-mantri-krishi-sinchai-yojana-2021/
Jandhan account benefits 2021-ಜನಧನ ಖಾತೆಯ ಹೊಸ ಉಪಯೋಗಗಳು.
2018 ಆಗಸ್ಟ್ 28 ರ ಬಳಿಕ ತೆರೆದಂತಹ ಖಾತೆಗಳಿಗೆ ಆಕಸ್ಮಿಕ ವಿಮೆ ಸೌಲಭ್ಯವನ್ನು ಸಹ ಕಲ್ಪಿಸಲಾಗಿದೆ. ಈ ಜನಧನ ಖಾತೆ ಹೊಂದಿರುವವರಿಗೆ 2 ಲಕ್ಷ ರೂಪಾಯಿಯವರೆಗೂ ಅಪಘಾತ ವಿಮೆ ಕವರೇಜ್ ನೀಡಲಾಗಿದೆ. ಒಂದು ವೇಳೆ ಖಾತೆದಾರರು ಮರಣಹೊಂದಿದರೆ 30 ಸಾವಿರ ರೂಪಾಯಿ ಜೀವ ವಿಮೆಯನ್ನು ನೀಡಲಾಗುತ್ತದೆ ಆದರೆ ಈ ಸೌಲಭ್ಯ ಪಡೆಯಲು ಕೆಲವು ಷರತ್ತುಗಳಿವೆ. ಅವರ ಸಾವು ಅದಕ್ಕೆ ಅನುಗುಣವಾಗಿ ಆಗಿದ್ದರೆ ಮಾತ್ರ ವಿಮೆಯ ಹಣ ಸಿಗುತ್ತದೆ. ಈ ಖಾತೆ ಹೊಂದಿರುವವರು ದೇಶದಾದ್ಯಂತ ಯಾವುದೇ ಬ್ಯಾಂಕುಗಳಲ್ಲಿನ ಖಾತೆಗೆ ಹಣವನ್ನು ವರ್ಗಾಯಿಸಬಹುದಾಗಿದೆ.
20 lakh Business loan-ಉದ್ಯಮ ಶೀಲತ ಅಭಿವೃದ್ಧಿ ಯೋಜನೆ.
Jandhan account benefits 2021-ಜನಧನ ಖಾತೆಯ ಹೊಸ ಉಪಯೋಗಗಳು.
ನೀವು ಸರ್ಕಾರಿ ಯೋಜನೆಗಳ ಫಲಾನುಭವಿಗಳಾಗಿದ್ದಾರೆ ನಿಮಗೆ ಸೇರಬೇಕಾದ ಹಣ ನೇರವಾಗಿ ಜನಧನ ಖಾತೆಗೆ ಜಮೆಯಾಗುತ್ತದೆ. ಈ ಮೊದಲಿನಂತೆ ಹಣಕ್ಕಾಗಿ ಸರ್ಕಾರಿ ಕಚೇರಿಗಳಿಗೆ ಅಲೆಯಬೇಕಾಗಿಲ್ಲ ಅಥವಾ ಯೋಜನೆಯಿಂದ ಸಿಕ್ಕ ಹಣದ ಸ್ವಲ್ಪ ಭಾಗವನ್ನು ಲಂಚದ ರೂಪದಲ್ಲಿ ಅಧಿಕಾರಿಗಳಿಗೆ ನೀಡಬೇಕಾಗಿಲ್ಲ. ಖಾತೆಯಲ್ಲಿ ನೀವು ಉಳಿತಾಯ ಮಾಡಿರುವ ಹಣಕ್ಕೆ ಇತರ ಬ್ಯಾಂಕ್ ಖಾತೆಗಳಿಗೆ ನೀಡುವಂತೆ ಬಡ್ಡಿಯನ್ನು ಕೂಡ ಜಮೆ ಮಾಡಲಾಗುತ್ತದೆ. ಮೊಬೈಲ್ ಅಥವಾ ನೆಟ್ ಬ್ಯಾಂಕಿಂಗ್ ಸೌಲಭ್ಯ ಕೂಡ ನೀಡಲಾಗುವುದು.
ಜನಧನ ಖಾತೆಯ ಮೂಲಕ ವಿಮೆ ಹಾಗೂ ಪಿಂಚಣಿಗೆ ಸಂಬಂಧಿಸಿದ ಯೋಜನೆಗಳಲ್ಲಿ ಸುಲಭವಾಗಿ ಹಣವನ್ನು ಹೂಡಿಕೆ ಮಾಡಬಹುದಾಗಿದೆ. ಜನಧನ ಖಾತೆ ಇದ್ದರೆ PM ಕಿಸಾನ್ ಹಾಗೂ ಶ್ರಮಯೋಗಿ ಮಾನ್ ಧನ್ ಮುಂತಾದ ಯೋಜನೆಗಳ ಅಡಿಯಲ್ಲಿ ಪಿಂಚಣಿಗಾಗಿ ನೀವು ಖಾತೆಯನ್ನು ತೆರೆಯಬಹುದಾಗಿದೆ.
How to make birth certificate- ಜನನ ಪ್ರಮಾಣ ಪತ್ರ ಹೇಗೆ ಮತ್ತು ಎಲ್ಲಿ ಮಾಡಿಸಬೇಕು.