Table of Contents
How to link PAN card with Aadhar card-ಪಾನ್ ಕಾರ್ಡ್ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಹೇಗೆ?
ಸ್ನೇಹಿತರೆ, ಏಪ್ರಿಲ್ 1 ರಿಂದ ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಜೋಡಣೆ ಆಗದ ಪಾನ್ ಕಾರ್ಡ್ ಕೆಲಸ ಮಾಡುವುದಿಲ್ಲ. ಅಂದರೆ ನಮ್ಮ ಬಳಿಯಿರುವ ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಆಗಿಲ್ಲ ಅಂದ್ರೆ ಯಾವುದೇ ಕೆಲಸಕ್ಕೂ ಕೂಡ ಪಾನ್ ಕಾರ್ಡ್ ಬಳಕೆ ಆಗುವುದಿಲ್ಲ, ಅಂದರೆ ಆಧಾರ್ ಕಾರ್ಡ್ ಜೋಡಿಸದೇ ಇರುವುದಕ್ಕೆ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 272 ಬಿ ಪ್ರಕಾರ 10 ಸಾವಿರ ದಂಡ ವಿಧಿಸಲು ಅವಕಾಶವಿದೆ.
How to link PAN card with Aadhar card-ಪಾನ್ ಕಾರ್ಡ್ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಹೇಗೆ?
ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಹಾಗಾದರೆ ಆಧಾರ್ ಕಾರ್ಡ್ ಪಾನ್ ಕಾರ್ಡ್ ಹೇಗೆ ಲಿಂಕ್ ಮಾಡುವುದು ಅಥವಾ ನಮ್ಮ ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಆಗಿದಿಯಾ ಅಥವಾ ಇಲ್ವ ಅನ್ನೋದನ್ನ ಹೇಗೆ ತಿಳಿಯೋದು ಅನ್ನೋದನ್ನ ಈ ಪೋಸ್ಟ್ನಲ್ಲಿ ನೀವು ತಿಳಿಯಲು ಇದ್ದೀರಾ.
How to link PAN card with Aadhar card step by step procedure-ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಹೇಗೆ .
- ಮೊದಲಿಗೆ income tax department ನ ಅಧಿಕೃತ ವೆಬ್ಸೈಟ್ ಗೆ Chrome browser ಮುಖಾಂತರ ಲಾಗಿನ್ ಆಗಿ.
- Income tax ನ ವೆಬ್ಸೈಟ್ ಓಪನ್ ಆದನಂತರ ಎಡಬದಿಯಲ್ಲಿ ಕಾಣುತ್ತಿರುವ link Aadhar ಮೇಲೆ ಕ್ಲಿಕ್ ಮಾಡಿ.
- ನೀವೇನಾದರೂ ಮೊದಲೇ ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿದ್ದೀರಿ ಅಂದರೆ ಅದನ್ನು ತಿಳಿಯಲು click here ಮೇಲೆ ಕ್ಲಿಕ್ ಮಾಡಿ.
- ಕ್ಲಿಕ್ ಮಾಡಿದ ಮೇಲೆ ಇಲ್ಲಿ ನಿಮ್ಮ PAN card ಮತ್ತು Aadhaar card ನಂಬರ್ enter ಮಾಡಿ, view link Aadhar status ಮೇಲೆ ಕ್ಲಿಕ್ ಮಾಡಿ.
- ನಿಮ್ಮ ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಆಗಿದ್ದರೆ, Your PAN card is linked to Aadhar ಅಂತ ಬರುತ್ತೆ. ಒಂದು ವೇಳೆ PAN card ಗೆ Aadhar card ಲಿಂಕ್ ಆಗದಿದ್ದರೆ ಪುನಹ link Aadhar ಮೇಲೆ ಕ್ಲಿಕ್ ಮಾಡಿ.
- ಕ್ಲಿಕ್ ಮಾಡಿದ ಮೇಲೆ ನಿಮ್ಮ PAN card, Aadhar card number ಹಾಗೂ name as per Aadhaar ಅಂದರೆ ನಿಮ್ಮ ಹೆಸರನ್ನು ಆಧಾರ್ ಕಾರ್ಡ್ನಲ್ಲಿ ಇರುವ ಹಾಗೆ enter ಮಾಡಿ.
- ನಂತರ I have Yerar of birth in Aadhar card ಅಂದರೆ ಆಧಾರ್ ಕಾರ್ಡ್ ನಲ್ಲಿ ಬರೀ ನಿಮ್ಮ ಹುಟ್ಟಿದ ವರ್ಷ ಇದ್ರೆ ಇದರ ಮೇಲೆ ಕ್ಲಿಕ್ ಮಾಡಿ, ಅಥವಾ ಪೂರ್ತಿ date of birth ಇದ್ರೆ ಇದನ್ನು ಮಾಡುವ ಅವಶ್ಯಕತೆ ಇರುವುದಿಲ್ಲ. ಇಷ್ಟೆಲ್ಲಾ ಆದಮೇಲೆ agree ಮೇಲೆ ಕ್ಲಿಕ್ ಮಾಡಿ.
- ನಂತರ ಕೆಳಗೆ ಕಾಣುತ್ತಿರುವ CAPTCHA enter ಮಾಡಿ, ನಂತರ request OTP ಮೇಲೆ ಕ್ಲಿಕ್ ಮಾಡಿ. ನಂತರ link Aadhar ಮೇಲೆ ಕ್ಲಿಕ್ ಮಾಡಿದ್ರೆ ನಿಮ್ಮ ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಆಗುತ್ತೆ.
- ಈ ಕೆಲಸವನ್ನು ನೀವು ಆದಷ್ಟು ಬೇಗ ಮಾಡಿಕೊಳ್ಳಿ. ಯಾಕಂದ್ರೆ ಈಗಾಗಲೇ income tax department ನಿಂದ ಕಟ್ಟುನಿಟ್ಟಾದ ಕ್ರಮ ಜಾರಿಗೊಳಿಸುತ್ತೇವೆ ಎಂದು ಸೂಚಿಸಿದೆ.
income tax department ನ ಅಧಿಕೃತ ವೆಬ್ಸೈಟ್ ಲಿಂಕ್.
https://www.incometax.gov.in/iec/foportal/