ಹಸು ಎಮ್ಮೆ ಖರೀದಿಗೆ ಸರಕಾರದಿಂದ ಸಹಾಯಧನ – Loan Scheme For Animal Husbandry.

ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ 2021-22ನೇ ಸಾಲಿಗೆ ಆರ್‌ಕೆವಿವೈ ಯೋಜನೆಯಲ್ಲಿ ಪಶುಭಾಗ್ಯ ಆಧಾರಿತ ಕಾರ್ಯಕ್ರಮವಾದ ‘ಮುಖ್ಯಮಂತ್ರಿಗಳ ಅಮೃತ ಯೋಜನೆ’ ಅನುಷ್ಠಾನಗೊಳಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.ಯೋಜನೆಯಡಿ ಒಂದು ಮಿಶ್ರ ತಳಿ ಹಾಲು ಕರೆಯುವ ಹಸು ಅಥವಾ ಒಂದು ಸುಧಾರಿತ ಎಮ್ಮೆ ಖರೀದಿಗೆ ಸಹಾಯಧನ ನೀಡಲಾಗುವುದು. ಘಟಕದ ಮೊತ್ತ ₹ 62,000 ಆಗಿದ್ದು, ಪರಿಶಿಷ್ಟ ಜಾತಿಯ ಫಲಾನುಭವಿಗಳಿಗೆ ₹ 20,665 ಮತ್ತು ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ₹15,500 ಸಹಾಯಧನವನ್ನು ಸರ್ಕಾರ ಒದಗಿಸಲಿದೆ. ಸಹಾಯಧನ ಹೊರತುಪಡಿಸಿದಂತೆ ಉಳಿದ ಮೊತ್ತವನ್ನು ಫಲಾನುಭವಿಗಳ ವಂತಿಗೆ ಅಥವಾ ಸಾಲದ ರೂಪದಲ್ಲಿ ಬ್ಯಾಂಕ್‌ನಿಂದ ಪಡೆಯಬೇಕು.

ಹಸು ಎಮ್ಮೆ ಖರೀದಿಗೆ ಸರಕಾರದಿಂದ ಸಹಾಯಧನ - Loan Scheme For Animal Husbandry.

ಹಸು ಎಮ್ಮೆ ಖರೀದಿಗೆ ಸರಕಾರದಿಂದ ಸಹಾಯಧನ – Loan Scheme For Animal Husbandry.

ಆಸಕ್ತರು ಭರ್ತಿ ಮಾಡಿದ ಅರ್ಜಿಗಳನ್ನು ಆಯಾ ತಾಲ್ಲೂಕಿನ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕರಿಗೆ ಸಲ್ಲಿಸಲು ಅ.5 ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗೆ ತಾಲ್ಲೂಕು ಕೇಂದ್ರಗಳಲ್ಲಿರುವ ಪಶು ಆಸ್ಪತ್ರೆಯ ಮುಖ್ಯ ಪಶುವೈದ್ಯಾಧಿಕಾರಿಗಳನ್ನು ಸಂಪರ್ಕಿಸಬೇಕು ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಡಾ.ಅಶೋಕ ಎಲ್. ಕೊಳ್ಳಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಸು ಎಮ್ಮೆ ಖರೀದಿಗೆ ಸರಕಾರದಿಂದ ಸಹಾಯಧನ – Loan Scheme For Animal Husbandry.

ಸಂಪರ್ಕಕ್ಕೆ: ಅಥಣಿ (ಮೊ.9448305513), ಕಾಗವಾಡ (9741599273), ಬೈಲಹೊಂಗಲ (9448346935), ಕಿತ್ತೂರು (9972996209), ಬೆಳಗಾವಿ (9448116671), ಚಿಕ್ಕೋಡಿ (9448859656), ನಿಪ್ಪಾಣಿ (9110418330), ಗೋಕಾಕ (9986280456), ಮೂಡಲಗಿ (9448185607), ಹುಕ್ಕೇರಿ (9448564126), ಖಾನಾಪುರ (8073028448), ರಾಯಬಾಗ (9449661871), ರಾಮದುರ್ಗ (9945854277) ಮತ್ತು ಸವದತ್ತಿ (9448823080).

Leave a Comment