National saving certificate-ಪೋಸ್ಟ್ ಆಫೀಸ್ ನಲ್ಲಿ NSC ಅಕೌಂಟ್ ತೆರೆಯುವುದು ಹೇಗೆ?
ಸ್ನೇಹಿತರೆ, ಈ ಪೋಸ್ಟ್ನಲ್ಲಿ ಪೋಸ್ಟ್ ಆಫೀಸ್ ಗೆ ಸಂಬಂಧಪಟ್ಟ saving scheme ಬಗ್ಗೆ ತಿಳಿದುಕೊಳ್ಳೋಣ, ಆ scheme ಯಾವುದೆಂದರೆ NSC scheme NSC ಅಂದರೆ National savings certificate scheme. ಈ scheme ನಲ್ಲಿ ಪ್ರಸ್ತುತವಾಗಿ ಬಡ್ಡಿಡಿ ದರ ಎಷ್ಟಿದೆ? Minimum ಎಷ್ಟು deposit ಮಾಡಬೇಕು? ಈ ಅಕೌಂಟ್ ತೆರೆಯಲು minimum age limit ಎಷ್ಟು ಮತ್ತು ಹೇಗೆ NSC ಅಕೌಂಟ್ ಗೆ ಅರ್ಜಿ ಸಲ್ಲಿಸಬೇಕು ಅನ್ನೋದನ್ನ ಈ ಪೋಸ್ಟ್ನಲ್ಲಿ ನೀವು ತಿಳಿದುಕೊಳ್ಳಲು ಇದ್ದೀರಿ.
What is national saving certificate? NSC ಅಂದರೆ ಏನು?
ಈಗ ಪೋಸ್ಟ್ ಆಫೀಸ್ ನಲ್ಲಿ Saving scheme ಇರೋತರ ಇದು ಒಂದು saving scheme. ಇದನ್ನು short term saving scheme ಅಂತಾನೂ ಕರೀತಾರೆ.ಈ scheme government backed scheme ಆಗಿರುವುದರಿಂದ ಇದರಲ್ಲಿ ಹೂಡಿಕೆ ಮಾಡಿದ ಹಣ 100% ಸುರಕ್ಷಿತವಾಗಿ ಇರುತ್ತೆ ಹಾಗೂ ಸರ್ಕಾರ ಕೂಡ 100% ಗ್ಯಾರೆಂಟಿ ಕೊಡುತ್ತೆ. ಹಾಗಾಗಿ ಈ scheme ನಲ್ಲಿ ಯಾವುದೇ ಮೋಸವಿರುವುದಿಲ್ಲ. ಈ scheme ನ maturity period ನೋಡುವುದಾದರೆ ಕನಿಷ್ಠ 5 ವರ್ಷ ಹಾಗೂ ಗರಿಷ್ಠ 10 ವರ್ಷ. Maturity amount ಹೇಗೆ ಬರುತ್ತೆ ಅಂದರೆ ಒಂದೇ ಬಾರಿ ಹೂಡಿಕೆ ಮಾಡಬೇಕು, ನೀವು ಹೂಡಿಕೆ ಮಾಡಿದ ಮೊತ್ತಕ್ಕೆ ಬಡ್ಡಿ ಸೇರಿಸಿ 5 ವರ್ಷ ಆದಮೇಲೆ ನಿಮಗೆ maturity amount ಕೊಡ್ತಾರೆ. ಈ ಅಕೌಂಟ್ ತೆರೆಯಲು ವಯಸ್ಸಿನ ಮಿತಿ ನೋಡುವುದಾದರೆ 18 ವರ್ಷ ಮೇಲ್ಪಟ್ಟವರು ತಮ್ಮ ಹೆಸರಿನಲ್ಲಿ ಈ National savings certificate ಅನ್ನ ಖರೀದಿಸಬಹುದು ಅಥವಾ ನಿಮ್ಮ ಮನೆಯಲ್ಲಿ 18 ವರ್ಷ ಕೆಳಗಿನವರು ಇದ್ದರೆ ಅವರ ಹೆಸರಿನಲ್ಲಿ ಕೂಡ ಈ certificate ಖರೀದಿ ಮಾಡಬಹುದು. ಒಂದು ವೇಳೆ joint account ಇದ್ದರು ಈ certificate ಅನ್ನ ಖರೀದಿಸಬಹುದು.
Government home loan scheme-ಸ್ವಂತ ಮನೆ ಇಲ್ಲದವರಿಗೆ ಗುಡ್ ನ್ಯೂಸ್.https://mahithimithra.com/government-home-loan-scheme/
National saving certificate-ಪೋಸ್ಟ್ ಆಫೀಸ್ ನಲ್ಲಿ NSC ಅಕೌಂಟ್ ತೆರೆಯುವುದು ಹೇಗೆ?
ಈ scheme ನಲ್ಲಿ ಪ್ರಸ್ತುತ ಬಡ್ಡಿ ದರ ಎಷ್ಟಿದೆ ಅನ್ನೋದನ್ನ ನೋಡುವುದಾದರೆ ಇವಾಗ 6.8% ರಷ್ಟು ಬಡ್ಡಿ ದರ ಇದೆ. ಕನಿಷ್ಠ ನೀವು ಎಷ್ಟು deposit ಮಾಡಬೇಕೆಂದರೆ 1 ಸಾವಿರ ರೂಪಾಯಿ deposit ಮಾಡಬೇಕು. ಗರಿಷ್ಠ ನೀವು ಎಷ್ಟು ಬೇಕಾದರೂ deposit ಮಾಡಬಹುದು.
How to purchase NSC certificate- NSC certificate ಖರೀದಿ ಮಾಡುವುದು ಹೇಗೆ?
ಈ ಸರ್ಟಿಫಿಕೇಟನ್ನು ನೀವು ಪೋಸ್ಟ್ ಆಫೀಸ್ ನಲ್ಲಿ ಖರೀದಿ ಮಾಡಬೇಕು. ಇದಕ್ಕೆ ಯಾವುದೆಲ್ಲಾ ದಾಖಲೆಗಳು ಬೇಕು ಅನ್ನೋದನ್ನ ನೋಡುವುದಾದರೆ,
- ನಿಮ್ಮ ಇತ್ತೀಚಿನ ಫೋಟೋ.
- ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್.
- ಬ್ಯಾಂಕ್ ಚೆಕ್.
ಈ certificate ಅನ್ನ ಖರೀದಿ ಮಾಡುವಾಗ nominee ಹೆಸರನ್ನು mention ಮಾಡೋದನ್ನ ಮಾತ್ರ ಮರೆಯ ಬೇಡಿ. ಒಂದು ವೇಳೆ ಖಾತೆದಾರ ಮೃತಪಟ್ಟರೆ ಆಗ ಅವರು deposit ಮಾಡಿದ ಮೊತ್ತ nominee ಗೆ ಸೇರುತ್ತದೆ. ನೀವು ಈ certificate ಅನ್ನ ಒಂದು ಪೋಸ್ಟ್ ಆಫೀಸ್ ಇಂದ ಇನ್ನೊಂದು ಪೋಸ್ಟ್ ಆಫೀಸ್ ಗೆ ವರ್ಗಾವಣೆ ಕೂಡ ಮಾಡಿಕೊಳ್ಳಬಹುದು. ಒಂದು ವೇಳೆ ನಿಮಗೆ ಹಣದ ತೀರ ಅವಶ್ಯಕತೆ ಇದ್ದರೆ ಈ certificate ಮೇಲೆ ಲೋನ್ ಕೂಡ ಪಡೆದುಕೊಳ್ಳಬಹುದು.