PM Kisan scheme 2021-ಟ್ರ್ಯಾಕ್ಟರ್ ಖರೀದಿಸಲು ರೈತರಿಗೆ 5 ಲಕ್ಷ ರೂಪಾಯಿ ಸಹಾಯಧನ.
ಕೇಂದ್ರ ಸರ್ಕಾರವು ಪಿಎಂ ಕಿಸಾನ್ ಯೋಜನೆಯಡಿ ಟ್ರ್ಯಾಕ್ಟರ್ ಖರೀದಿಸಲು ಸಿಹಿಸುದ್ದಿಯನ್ನು ನೀಡಿದೆ. ರೈತರು ಹೊಲದ ಕೆಲಸಗಳನ್ನು ಮಾಡಿಕೊಳ್ಳಲು ಟ್ರಾಕ್ಟರ್ ಬಹುಮುಖ್ಯವಾಗಿ ಬೇಕಾಗುತ್ತದೆ. ಕೃಷಿಯ ಕೆಲಸಗಳಿಗೆ ಟ್ರ್ಯಾಕ್ಟರ್ ಅತಿ ಮುಖ್ಯವಾಗಿರುತ್ತದೆ. ಟ್ರ್ಯಾಕ್ಟರ್ ಇದ್ದಲ್ಲಿ ಕೃಷಿಗೆ ಸಂಬಂಧಿಸಿದ ಹಲವು ಕೆಲಸಗಳನ್ನು ಸುಲಭವಾಗಿ ಮತ್ತು ಅತಿವೇಗವಾಗಿ ಮಾಡಬಹುದು. ಆದ್ದರಿಂದ ದೇಶದ ಪ್ರತಿಯೊಬ್ಬ ರೈತನಿಗೂ ಟ್ರ್ಯಾಕ್ಟರ್ ನ ಅವಶ್ಯಕತೆ ಇದ್ದೇ ಇರುತ್ತದೆ.
PM Kisan scheme 2021-ಟ್ರ್ಯಾಕ್ಟರ್ ಖರೀದಿಸಲು ರೈತರಿಗೆ 5 ಲಕ್ಷ ರೂಪಾಯಿ ಸಹಾಯಧನ.
Scholarship alert-1ರಿಂದ 10ನೇ ತರಗತಿಯ ಪರಿಶಿಷ್ಟ ಜಾತಿ, ವರ್ಗದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್.
ಈ ಯೋಜನೆಯಲ್ಲಿ ಟ್ರ್ಯಾಕ್ಟರ್ ಖರೀದಿಸುವ ಪ್ರತಿಯೊಬ್ಬ ರೈತನಿಗೂ ಕೇಂದ್ರ ಸರ್ಕಾರದಿಂದ ಸಬ್ಸಿಡಿ ಅಂದರೆ ಸಹಾಯಧನವನ್ನು ನೀಡಲಾಗುತ್ತದೆ. ಆದ್ದರಿಂದ ಭಾರತ ದೇಶದಲ್ಲಿ ಇರುವಂತಹ ಎಲ್ಲ ಅರ್ಹ ರೈತರು pm-kisan ಟ್ರ್ಯಾಕ್ಟರ್ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿ ಯೋಜನೆಯ ಲಾಭವನ್ನು ಪಡೆಯಬಹುದಾಗಿದೆ. ಹಾಗೂ ಶೇಕಡ 50 ರಷ್ಟು ಸಬ್ಸಿಡಿಯನ್ನು ನೀವು ಪಡೆಯಬಹುದಾಗಿದೆ. ಹಾಗಾದರೆ 2020-21 ನೇ ಸಾಲಿನ ಪಿಎಂ ಕಿಸಾನ್ ಯೋಜನೆ ಯಲ್ಲಿ ಟ್ರ್ಯಾಕ್ಟರ್ ಖರೀದಿಸಲು ಅರ್ಜಿ ಸಲ್ಲಿಸುವ ಅಂತಹ ರೈತರು ಯಾವೆಲ್ಲಾ ಶರತ್ತುಗಳನ್ನು ಅನುಸರಿಸಬೇಕು ಎಂದು ನೋಡುವುದಾದರೆ,
- ಈ ಯೋಜನೆಗೆ ಅರ್ಜಿ ಸಲ್ಲಿಸುವಂತಹ ರೈತರು ಕಳೆದ 7 ವರ್ಷಗಳಲ್ಲಿ ಸರಕಾರದ ಯಾವುದೇ ಯೋಜನೆಯಲ್ಲಿ ಟ್ರ್ಯಾಕ್ಟರ್ ಖರೀದಿಸಿರಬಾರದು.
- ಅರ್ಜಿ ಸಲ್ಲಿಸುವಂತಹ ಅರ್ಹ ರೈತನು ತನ್ನ ಹೆಸರಿನಲ್ಲಿ ಕೃಷಿಭೂಮಿಯನ್ನು ಹೊಂದಿರಬೇಕು.
- ಒಂದು ಕುಟುಂಬದಲ್ಲಿ ಒಬ್ಬ ರೈತರು ಮಾತ್ರ ಪಿಎಂ ಕಿಸಾನ್ ಯೋಜನೆ ಯಲ್ಲಿ ಟ್ರ್ಯಾಕ್ಟರ್ ಖರೀದಿಸಲು ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.
- ಈ ಯೋಜನೆಯಲ್ಲಿ ರೈತ ಖರೀದಿಸುವಂತಹ ಟ್ರ್ಯಾಕ್ಟರ್ ಅನ್ನು ಬೇರೆ ಯಾವುದೇ ಸಬ್ಸಿಡಿ ಯೋಜನೆಯೊಂದಿಗೆ ಸಂಯೋಜಿಸಬಾರದು.
- ಕುಟುಂಬದ ಒಬ್ಬ ಸದಸ್ಯರಿಗೆ ಮಾತ್ರ ಈ ಸಹಾಯಧನಕ್ಕಾಗಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಅಂತಹ ಅರ್ಹ ರೈತರಿಗೆ ಶೇಕಡಾ 50 ರಷ್ಟು ಸಬ್ಸಿಡಿ ಹಣ ಸಿಗಲಿದೆ.
- ಈ ಯೋಜನೆಯ ಕಡಿಮೆ ಹಿಡುವಳಿ ಭೂಮಿಯನ್ನು ಹೊಂದಿರುವಂತಹ ರೈತರಿಗೆ ಸೀಮಿತವಾಗಿದೆ.
PM kissan samman nidhi yojana-ಕಿಸಾನ್ ಸಮ್ಮಾನ್ ಯೋಜನೆಯ 9ನೇ ಕಂತಿನ ಹಣ ಬಿಡುಗಡೆ.
ಈ ಎಲ್ಲಾ ಶರತ್ತುಗಳನ್ನು ಕಡ್ಡಾಯವಾಗಿ ಹೊಂದಿರುವಂತಹ ರೈತರು ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಪಿಎಂ ಕಿಸಾನ್ ಟ್ರ್ಯಾಕ್ಟರ್ ಯೋಜನೆಯಲ್ಲಿ ಅರ್ಜಿ ಸಲ್ಲಿಸುವಂತಹ ರೈತರು ಯಾವ ಎಲ್ಲಾ ದಾಖಲಾತಿಗಳನ್ನು ಹೊಂದಿರಬೇಕು ಎಂದು ನೋಡುವುದಾದರೆ,
- ಕಡಿಮೆ ಹಿಡುವಳಿ ಭೂಮಿ ಹೊಂದಿರುವ ಬಗ್ಗೆ ಜಮೀನಿಗೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಹೊಂದಿರಬೇಕು. ಅಂದರೆ ಪಹಣಿ ಪತ್ರವನ್ನು ಹೊಂದಿರಬೇಕು.
- ನೋಂದಣಿಗಾಗಿ ಅರ್ಜಿದಾರನು ಆಧಾರ್ ಕಾರ್ಡನ್ನು ಹೊಂದಿರಬೇಕು.
- ಅರ್ಜಿದಾರನು ಗುರುತಿನ ಚೀಟಿ ಅಂದರೆ ವೋಟರ್ ಐಡಿ ಕಾರ್ಡ್ ನ್ನು ತಪ್ಪದೇ ಅರ್ಜಿಯೊಂದಿಗೆ ಸಲ್ಲಿಸಬೇಕು.
- ಜೊತೆಗೆ ಪಾನ್ ಕಾರ್ಡ್, ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಸಹ ಹೊಂದಿರಬೇಕು.
- ಅರ್ಜಿದಾರನ ಚಾಲ್ತಿಯಲ್ಲಿರುವಂತಹ ಮೊಬೈಲ್ ನಂಬರನ್ನು ನೀಡಬೇಕಾಗುತ್ತದೆ.
- ಅರ್ಜಿದಾರನ ಚಾಲ್ತಿಯಲ್ಲಿರುವಂತಹ ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ಅನ್ನು ನೀಡಬೇಕು ಹಾಗೂ ಅರ್ಜಿದಾರನ ಇತ್ತೀಚಿನ ಪಾಸ್ಪೋರ್ಟ್ ಸೈಜಿನ 4 ಫೋಟೋಗಳನ್ನು ಸಲ್ಲಿಸಬೇಕು.
PM Kisan scheme 2021-ಟ್ರ್ಯಾಕ್ಟರ್ ಖರೀದಿಸಲು ರೈತರಿಗೆ 5 ಲಕ್ಷ ರೂಪಾಯಿ ಸಹಾಯಧನ.
Ganga Kalyana Yojana 2021-ರಾಜ್ಯ ಸರ್ಕಾರದಿಂದ ರೈತರಿಗೆ ಉಚಿತ ಬೋರ್ವೇಲ್ ಈಗಲೇ ಅರ್ಜಿ ಸಲ್ಲಿಸಿ.
ಈ ಎಲ್ಲಾ ದಾಖಲಾತಿಗಳನ್ನು ತಪ್ಪದೆ ಅರ್ಜಿಯೊಂದಿಗೆ ಸಲ್ಲಿಸಬೇಕು. ಪ್ರಧಾನಮಂತ್ರಿ ಕಿಸಾನ್ ಟ್ರ್ಯಾಕ್ಟರ್ ಯೋಜನೆಯಲ್ಲಿ ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು ಎಂದು ನೋಡುವುದಾದರೆ, ಪಿಎಂ ಕಿಸಾನ್ ಟ್ರ್ಯಾಕ್ಟರ್ ಯೋಜನೆ ಇಡೀ ಭಾರತದಲ್ಲಿ ಚಾಲ್ತಿಯಲ್ಲಿದೆ.ಈ ಯೋಜನೆಗಾಗಿ ಫಲಾನುಭವಿಯು ಅರ್ಜಿ ಸಲ್ಲಿಸುವುದು ಬಹು ಮುಖ್ಯವಾಗಿರುತ್ತದೆ. ಈ ಯೋಜನೆಯಲ್ಲಿ ಆಯ್ಕೆ ಆದಂತಹ ರೈತರ ಬ್ಯಾಂಕ್ ಅಕೌಂಟ್ ಗೆ ಸಬ್ಸಿಡಿಯ ಹಣವನ್ನು ಜಮೆ ಮಾಡಲಾಗುವುದು. ಇದಕ್ಕಾಗಿ ಅರ್ಹ ರೈತರು online ಮತ್ತು ofline ಎರಡರಲ್ಲಿಯೂ ಸಹ ಅರ್ಜಿಯನ್ನು ಸಲ್ಲಿಸಬಹುದು. ಈ ಯೋಜನೆಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವಂತಹ ಅರ್ಹ ರೈತರುhttps://crida.in/pm-kisan-tractor-scheme/ ಈ ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದು. ಒಂದು ವೇಳೆ ಆಫ್ ಲೈನ್ ಮುಖಾಂತರ ಅರ್ಜಿಿ ಸಲ್ಲಿಸುವ ಅಂತಹ ರೈತರು ನಿಮ್ಮ ಹತ್ತಿರದ CSC centre ಅಂದರೆ common service centre ಗೆ ಭೇಟಿ ನೀಡಿ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ ಈ ಯೋಜನೆಯ ಲಾಭವನ್ನು ಪಡೆಯಬಹುದಾಗಿದೆ.