ಪಿಎಂ ಕಿಸಾನ್ ಯೋಜನೆಯಡಿ ಸುಮಾರು 4.2 ಮಿಲಿಯನ್ ಅನರ್ಹರಿಗೆ 2,900 ಕೋಟಿ ರೂ.ಗಳನ್ನು ವರ್ಗಾಯಿಸಲಾಗಿದೆ. ಅನರ್ಹ ಕೃಷಿಕರಿಂದ ಆ ಮೊತ್ತವನ್ನು ಮರಳಿ ಪಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ಥೋಮರ್ ಸಂಸತ್ ನಲ್ಲಿ ತಿಳಿಸಿದ್ದಾರೆ.ಲೋಕಸಭೆಯಲ್ಲಿ ಉತ್ತರಿಸಿದ ಅವರು, ಹಲವು ರಾಜ್ಯಗಳಲ್ಲಿ ಅನರ್ಹರು ಫಲಾನುಭವಿಗಳಾಗಿದ್ದಾರೆ. ಅಸ್ಸಾಂ, ತಮಿಳುನಾಡು, ಛತ್ತೀಸ್ ಗಢ, ಪಂಜಾಬ್ ಹಾಗೂ ಬಿಹಾರದಲ್ಲಿ ಅನರ್ಹ ಕೃಷಿಕರು ಪಿಎಂ ಕಿಸಾನ್ ಯೋಜನೆಯ ಫಲಾನುಭವ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.
PM kisan scheme-ಹಣ ಪಡೆದ 4.2 ಮಿಲಿಯನ್ ಅನರ್ಹರಿಗೆ ಬಿಗ್ ಶಾಕ್.
2019ರ ಫೆಬ್ರವರಿ 24ರಂದು ಈ ಯೋಜನೆಯನ್ನು ಜಾರಿಗೆ ತರಲಾಯಿತು. ಈ ಯೋಜನೆಯಡಿಯಲ್ಲಿ ದೇಶದಾದ್ಯಂತ ಇರುವ ಕೃಷಿಕರಿಗೆ 6,000 ರೂ.ಗಳನ್ನು ಕೇಂದ್ರ ಸರಕಾರ ಮೂರು ಕಂತುಗಳಲ್ಲಿ 2,000 ರೂ.ನಂತೆ ವರ್ಗಾಯಿಸುತ್ತದೆ.ಈ ಲಾಭ ಪಡೆಯಬೇಕಾದ ರೈತರು ಕೆಲವೊಂದು ಮಾನದಂಡಗಳನ್ನು ಹೊಂದಿರಬೇಕಾದುದು ಅಗತ್ಯ. ಹೀಗಾಗಿ ಅನರ್ಹರಿಂದ ಮೊತ್ತ ವಸೂಲಿ ಮಾಡಬೇಕೆಂದು ಸಂಸತ್ತಿಗೆ ನೀಡಿರುವ ಉತ್ತರದಲ್ಲಿ ಹೇಳಿಕೊಂಡಿದ್ದಾರೆ.
PM kissan samman nidhi yojana-ಕಿಸಾನ್ ಸಮ್ಮಾನ್ ಯೋಜನೆಯ 9ನೇ ಕಂತಿನ ಹಣ ಬಿಡುಗಡೆ.
PM kisan scheme-ಹಣ ಪಡೆದ 4.2 ಮಿಲಿಯನ್ ಅನರ್ಹರಿಗೆ ಬಿಗ್ ಶಾಕ್.
ಈ ವರ್ಷದ ಮೇ ತಿಂಗಳಿನಲ್ಲಿ ಸರಕಾರವು 90 ದಶಲಕ್ಷ ಕೃಷಿ ಕುಟುಂಬಗಳಿಗೆ 19,000 ಕೋಟಿ ರೂ. ಪಾವತಿಸಿದೆ. ಕೇಂದ್ರವು ಈವರೆಗೆ ಸುಮಾರು 1.15 ಲಕ್ಷ ರೂ. ಪಾವತಿಸಿದೆ ಎಂದು ಉತ್ತರಿಸಿದ್ದಾರೆ. ಇನ್ನು ಅನರ್ಹರು ಹಣ ಪಡೆದ ಬಗ್ಗೆ ಮೇ 21ರಂದು ಕೇಂದ್ರ ಕೃಷಿ ಸಚಿವಾಲಯವು ಪಿಎಂ ಕಿಸಾನ್ ನಲ್ಲಿನ ಸಂಭವನೀಯ ವಂಚನೆಯ ಬಗ್ಗೆ ವರದಿ ಹಾಗೂ ತನಿಖೆಗಾಗಿ ಅಸ್ಸಾಂ ಸರಕಾರಕ್ಕೆ ಕೋರಿಕೊಂಡಿತು. ಅಧಿಕಾರಿಗಳಿಂದ ನಿರಂತರ ಪರಿಶೀಲನೆ ಮತ್ತು ಮೌಲ್ಯಮಾಪನದ ಆಧಾರದ ಮೇಲೆ ಅನರ್ಹ ಕೃಷಿಕರಿಗೆ ಯೋಜನೆ ತಲುಪಿರುವುದು ಪತ್ತೆಯಾಯಿತು ಎಂದು ತೋಮರ್ ತಿಳಿಸಿದ್ದಾರೆ.
Top 3 central government pension scheme-ಕೇಂದ್ರ ಸರ್ಕಾರದ 3 ಪಿಂಚಣಿ ಯೋಜನೆಗಳು.
PM kisan scheme-ಹಣ ಪಡೆದ 4.2 ಮಿಲಿಯನ್ ಅನರ್ಹರಿಗೆ ಬಿಗ್ ಶಾಕ್.
ಅಸ್ಸಾಂನಲ್ಲಿ ಅನರ್ಹ ಫಲಾನುಭವಿಗಳ ಸಂಖ್ಯೆ 83,5268 ರಷ್ಟಿದ್ದು, ಅನರ್ಹ ಫಲಾನುಭವಿ ಪಡೆದ ಮೊದಲ ರಾಜ್ಯವಾಗಿದೆ. ಇದು ಅನರ್ಹ ಫಲಾನುಭವಿಗಳಲ್ಲಿ ಐದನೇ ಒಂದು ಭಾಗದಷ್ಟಿದೆ. ನಂತರದ ಸ್ಥಾನವನ್ನು ತಮಿಳುನಾಡು ಹೊಂದಿದ್ದು, 72,2271 ರಷ್ಟು ಜನರು ಫಲಾನುಭವಿಗಳಾಗಿದ್ದಾರೆ. ಛತ್ತೀಸ್ ಗಢ 58,289, ಪಂಜಾಬ್ 56,2256 ಹಾಗೂ ಬಿಹಾರದಲ್ಲಿ 52,178 ಮಂದಿ ಅನರ್ಹರು ಈ ಯೋಜನೆಯ ಲಾಭ ಪಡೆದಿದ್ದಾರೆ ಎಂದು ಸಚಿವರು ವಿವರಿಸಿದ್ದಾರ.
Farmer’s loan waiver scheme 2021-ರೈತರ-ಸಾಲ-ಮನ್ನಾ.
PM kisan scheme-ಹಣ ಪಡೆದ 4.2 ಮಿಲಿಯನ್ ಅನರ್ಹರಿಗೆ ಬಿಗ್ ಶಾಕ್.
ಇನ್ನು ಈ ಯೋಜನೆಯಿಂದ ಲಾಭ ಪಡೆದಿರುವ ಅನರ್ಹರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ನಿರ್ಧರಿಸಲಾಗಿದೆ ಹಾಗೂ ಪಾವತಿಯಾಗಿರುವ ಮೊತ್ತವನ್ನು ವಸೂಲಿ ಮಾಡುವಂತೆ ಆಯಾಯ ರಾಜ್ಯಗಳನ್ನು ಕೇಳಲಾಗಿದೆ ಎಂದು ಥೋಮರ್ ಹೇಳಿದ್ದಾರೆ.
ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ಫಲಾನುಭವಿಯು, ಭೂ ದಾಖಲೆಗಳ ಪ್ರಕಾರ ಗಂಡ, ಹೆಂಡತಿ ಹಾಗೂ ಅಪ್ರಾಪ್ತ ಮಕ್ಕಳನ್ನು ಒಳಗೊಂಡಿರುವ ರೈತ ಕುಟುಂಬವಾಗಿರಬೇಕು. ರೈತರೇತರರನ್ನು ಹೊರಗಿಡಲಾಗುತ್ತದೆ. ಆದಾಯ ತೆರಿಗೆ ಪಾವತಿಸುವವರು, ಸರಕಾರಿ ಸೇವೆಯಿಂದ ನಿವೃತ್ತಿ ಪಡೆದಿರುವವರು 10,000 ರೂ. ಅಥವಾ ಅದಕ್ಕಿಂತ ಹೆಚ್ಚಿನ ಪಿಂಚಣಿ ಪಡೆಯುವವರು, ಸಾಂಸ್ಥಿಕ ಭೂಮಾಲೀಕರು, ಮಾಜಿ ಅಥವಾ ಪ್ರಸ್ತುತ ಮಂತ್ರಿಗಳಾಗಿರುವವರು ಮುಂತಾದವರು ಈ ಯೋಜನೆಗೆ ಅರ್ಹರಾಗಿರುವುದಿಲ್ಲ.
Ganga Kalyana Yojana 2021-ರಾಜ್ಯ ಸರ್ಕಾರದಿಂದ ರೈತರಿಗೆ ಉಚಿತ ಬೋರ್ವೇಲ್ ಈಗಲೇ ಅರ್ಜಿ ಸಲ್ಲಿಸಿ.
PM kisan scheme-ಹಣ ಪಡೆದ 4.2 ಮಿಲಿಯನ್ ಅನರ್ಹರಿಗೆ ಬಿಗ್ ಶಾಕ್.
ಸರಕಾರದ ಆರ್ಥಿಕ ಸಮೀಕ್ಷೆ 2015-16ರ ಪ್ರಕಾರ, ಭಾರತದಲ್ಲಿ ಸುಸ್ಥಿತಿಯಲ್ಲಿರುವ ಅಥವಾ ಅನರ್ಹ ಜನರು ತಮಗೆ ಅರ್ಹತೆ ಇಲ್ಲದಿದ್ದರೂ ಅಂತಹ ಪ್ರಯೋಜನ ಪಡೆಯುತ್ತಾರೆ ಎಂಬುದು ತಿಳಿದು ಬಂದಿದೆ.
PM KISAN OFFICIAL WEBSITE LINKhttps://pmkisan.gov.in/