PPF ACCOUNT ಸುರಕ್ಷಿತ ಪಿಪಿಎಫ್ ಖಾತೆ ತೆರೆಯಲು ಇಲ್ಲಿದೆ ಉತ್ತಮ ಟಿಪ್ಸ್.
ಕೇಂದ್ರ ಸರ್ಕಾರದ ಸುರಕ್ಷ ತೆಯಲ್ಲಿ ಜನರು ತೆರೆಯಬಹುದಾದ ದೀರ್ಘಾವಧಿ ಉಳಿತಾಯ/ಹೂಡಿಕೆ ಯೋಜನೆ ಎಂದರೆ ‘ ಪಬ್ಲಿಕ್ ಪ್ರಾವಿಡೆಂಟ್ ಫಂಡ್- ಪಿಪಿಎಫ್ ‘. 1968ರಲ್ಲಿ ಆರಂಭಗೊಂಡ ಈ ಯೋಜನೆ ಸದ್ಯ ದೇಶದಲ್ಲೇ ಅತ್ಯಂತ ಸುರಕ್ಷಿತ ಉಳಿತಾಯ ಯೋಜನೆ ಎನಿಸಿದೆ.
ವಾರ್ಷಿಕ 500 ರೂ.ನಿಂದ 1.50 ಲಕ್ಷ ರೂ.ವರೆಗೂ ಪಿಪಿಎಫ್ ಖಾತೆಯಲ್ಲಿ ಉಳಿತಾಯ ಮಾಡಬಹುದಾಗಿದೆ. ಇದಕ್ಕೆ ಆದಾಯ ತೆರಿಗೆ ಅನ್ವಯಿಸುವುದಿಲ್ಲ. ಸ್ಟಾಕ್ ಎಕ್ಸ್‌ಚೇಂಜ್ ಮಾದರಿಯಲ್ಲಿ ಅಥವಾ ಬ್ಯಾಂಕ್‌ಗಳ ಫ್ಲೋಟಿಂಗ್ ಬಡ್ಡಿ ದರದ ಮಾದರಿಯಲ್ಲಿ ಪಿಪಿಎಫ್ ಉಳಿತಾಯದ ಬಡ್ಡಿಯಲ್ಲಿ ಏರುಪೇರು ಇರುವುದಿಲ್ಲ. ಅಲ್ಲಿಗೆ ಇದು ಆರ್ಥಿಕತೆಯ ಏರಿಳಿತಗಳಿಂದಲೂ ಮುಕ್ತವಾಗಿದೆ ಎಂದರ್ಥ.
PPF ACCOUNT ಸುರಕ್ಷಿತ ಪಿಪಿಎಫ್ ಖಾತೆ ತೆರೆಯಲು ಇಲ್ಲಿದೆ ಉತ್ತಮ ಟಿಪ್ಸ್.
ಇನ್ನು , ಪಿಪಿಎಫ್ ಖಾತೆ ಅಡಿಯಲ್ಲಿ ಖಾತೆದಾರರು ವರ್ಷಕ್ಕೆ 1% ಬಡ್ಡಿಯಂತೆ ಸಾಲ ಕೂಡ ಪಡೆಯಬಹುದಾಗಿದೆ. ಇಷ್ಟು ಕಡಿಮೆ ಬಡ್ಡಿಗೆ ಸಾಲವು ಬಹುಶಃ ದೇಶದಲ್ಲಿ ಎಲ್ಲಿಯೂ ಸಿಗಲ್ಲ. ಆದರೆ, ಇದಕ್ಕೂ ಮುನ್ನ ಪಿಪಿಎಫ್ ಹೂಡಿಕೆ/ಉಳಿತಾಯ ಮಾಡುತ್ತಾ ಕನಿಷ್ಠ 3-6 ವರ್ಷಗಳು ಮುಕ್ತಾಯವಾಗಿರಬೇಕು. ಪಿಪಿಎಫ್ ಖಾತೆಯಿಂದ ಪೂರ್ಣ ಹಣವು ವಾಪಸ್ ಬೇಕಾದಲ್ಲಿ ಉಳಿತಾಯ ಮಾಡಿರುವವರು ಆರು ವರ್ಷಗಳು ಕಾಯಲೇಬೇಕು ಎನ್ನುವುದನ್ನು ಮರೆಯಬೇಡಿರಿ. ಬ್ಯಾಂಕ್‌ಗಳ ‘ಎಫ್‌ಡಿ’ ಮುರಿದಂತೆ ಮಧ್ಯದ ಅವಧಿಯಲ್ಲಿ ಮುರಿದುಕೊಂಡು ಹಣ ತೆಗೆದುಕೊಳ್ಳಲು ಆಗಲ್ಲ.
PPF ACCOUNT ಸುರಕ್ಷಿತ ಪಿಪಿಎಫ್ ಖಾತೆ ತೆರೆಯಲು ಇಲ್ಲಿದೆ ಉತ್ತಮ ಟಿಪ್ಸ್.
ಒಟ್ಟಾರೆ 15 ವರ್ಷಗಳ ಅವಧಿಗೆ ಪಿಪಿಎಫ್ ಖಾತೆ ತೆರೆದು ಉಳಿತಾಯ ಆರಂಭಿಸಬಹುದಾಗಿದೆ. 15 ವರ್ಷಗಳ ಬಳಿಕ ಸಿಗುವ ದೊಡ್ಡ ಮೊತ್ತವನ್ನು ಪುನಃ ವಿಸ್ತರಿತ ಅವಧಿಗೆ (5 ವರ್ಷಗಳ ಮಾದರಿಯಲ್ಲಿ) ಪಿಪಿಎಫ್ ಖಾತೆಯಲ್ಲೇ ಇರಿಸಬಹುದಾಗಿದೆ. ಸದ್ಯಕ್ಕೆ ಪಿಪಿಎಫ್ ಖಾತೆಗೆ 7.1%ವರೆಗೆ ವಾರ್ಷಿಕ ಬಡ್ಡಿಯನ್ನು ನೀಡಲಾಗುತ್ತಿದೆ.
PPF ACCOUNT ಸುರಕ್ಷಿತ ಪಿಪಿಎಫ್ ಖಾತೆ ತೆರೆಯಲು ಇಲ್ಲಿದೆ ಉತ್ತಮ ಟಿಪ್ಸ್.
ಪಿಪಿಎಫ್ ಖಾತೆಗಳನ್ನು ತೆರೆಯುವುದು ಕೂಡ ಬಹಳ ಸುಲಭ. ನೇರವಾಗಿ ಅಂಚೆ ಕಚೇರಿ, ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ಭೇಟಿ ನೀಡಿ ಪಿಪಿಎಫ್ ಖಾತೆಯ ಅರ್ಜಿ ಪಡೆದು ಅಗತ್ಯ ದಾಖಲೆಗಳನ್ನು ನೀಡಬಹುದು. ಇಲ್ಲವಾದರೆ, ನಿಮ್ಮ ಉಳಿತಾಯ ಖಾತೆ ಇರುವ ಬ್ಯಾಂಕ್‌ನ ವೆಬ್‌ಸೈಟ್‌ನಲ್ಲಿ ಪಿಪಿಎಫ್ ತೆರೆಯಲು ಮಾಡಿಕೊಟ್ಟಿರುವ ಅನುಕೂಲವನ್ನು ಬಳಸಿಕೊಳ್ಳಬಹುದಾಗಿದೆ. ಒಟಿಪಿ ನಂಬರ್ ಮೂಲಕ ಖಾತೆ ತೆರೆಯಲಾಗುವ ಕಾರಣ, ನೋಂದಾಯಿತ ಮೊಬೈಲ್ ಸಂಖ್ಯೆಯಿರುವ ಮೊಬೈಲ್ ನಿಮ್ಮ ಬಳಿಯೇ ಇರಿಸಿಕೊಂಡಿರುವುದು ಸೂಕ್ತ.