Senior citizen Special Fixed deposit – ಸೆಪ್ಟೆಂಬರ್ 30 ರ ನಂತರ ಕೊನೆಗೊಳ್ಳಲಿದೆ ಈ ಸ್ಕೀಮ್, ತಕ್ಷಣವೇ ಈ ಸ್ಕೀಮ್ ನ ಲಾಭ ಪಡೆದುಕೊಳ್ಳಿ.

ಎಸ್‌ಬಿಐ, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾ ಹಿರಿಯ ನಾಗರಿಕರಿಗಾಗಿ ವಿಶೇಷ ಎಫ್‌ಡಿ ಯೋಜನೆಗಳನ್ನು ನಡೆಸುತ್ತಿವೆ. ಈ ಯೋಜನೆಗಳು ಸೆಪ್ಟೆಂಬರ್ 30 ರಂದು ಸ್ಥಗಿತಗೊಳಿಸಲಾಗುವುದುಈ ಯೋಜನೆಯನ್ನು 2020 ರ ಮೇಯಲ್ಲಿ ಹಿರಿಯ ನಾಗರಿಕರಿಗಾಗಿ ಬ್ಯಾಂಕುಗಳು ಆರಂಭಿಸಿವೆ.

Senior citizen Special Fixed deposit - ಸೆಪ್ಟೆಂಬರ್ 30 ರ ನಂತರ ಕೊನೆಗೊಳ್ಳಲಿದೆ ಈ ಸ್ಕೀಮ್, ತಕ್ಷಣವೇ ಈ ಸ್ಕೀಮ್ ನ ಲಾಭ ಪಡೆದುಕೊಳ್ಳಿ.

ಏನಿದು ವಿಶೇಷ ಎಫ್‌ಡಿ ಯೋಜನೆ ?

ಈ ಸ್ಪೆಷಲ್ ಎಫ್ ಡಿ ಸ್ಕೀಮ್ ನಲ್ಲಿ  ಹೆಚ್ಚಿನ ಬ್ಯಾಂಕುಗಳು ಹಿರಿಯ ನಾಗರಿಕರಿಗೆ ಹೆಚ್ಚಿನ ಬಡ್ಡಿದರವನ್ನು ನೀಡುತ್ತವೆ. ಆಯ್ದ ಮೆಚ್ಯೂರಿಟಿ ಅವಧಿಯೊಂದಿಗೆ ನಿಶ್ಚಿತ ಠೇವಣಿಯಲ್ಲಿ, ಹಿರಿಯ ನಾಗರಿಕರು ಅನ್ವಯವಾಗುವ ಬಡ್ಡಿ ದರಕ್ಕಿಂತ 0.50 ಪ್ರತಿಶತದಷ್ಟು ಹೆಚ್ಚುವರಿ ಬಡ್ಡಿಯನ್ನು ಪಡೆಯುತ್ತಾರೆ. ಅಂದರೆ ಸಾಮಾನ್ಯ ಗ್ರಾಹಕರಿಗಿಂತ 1 ಪ್ರತಿಶತದಷ್ಟು ಹೆಚ್ಚಿನ ಬಡ್ಡಿಯನ್ನು ಪಡೆಯುತ್ತಾರೆ.

Senior citizen Special Fixed deposit – ಸೆಪ್ಟೆಂಬರ್ 30 ರ ನಂತರ ಕೊನೆಗೊಳ್ಳಲಿದೆ ಈ ಸ್ಕೀಮ್, ತಕ್ಷಣವೇ ಈ ಸ್ಕೀಮ್ ನ ಲಾಭ ಪಡೆದುಕೊಳ್ಳಿ.

ಈ ಯೋಜನೆಯನ್ನು ಹಲವು ಬಾರಿ ವಿಸ್ತರಿಸಲಾಗಿದೆ

ಬ್ಯಾಂಕುಗಳು (Bank) ಈ ಯೋಜನೆಯನ್ನು ಹಲವು ಬಾರಿ ವಿಸ್ತರಿಸಿವೆ. ಈ ಯೋಜನೆಯನ್ನು ಮೊದಲು 30 ಸೆಪ್ಟೆಂಬರ್ 2020, ನಂತರ 31 ಡಿಸೆಂಬರ್, ನಂತರ 31 ಮಾರ್ಚ್ 2021 ರವರೆಗೆ, ಮಾರ್ಚ್ ನಂತರ 30 ಜೂನ್ 2021 ರವರೆಗೆ ವಿಸ್ತರಿಸಲಾಯಿತು, ನಂತರ ಇದನ್ನು 30 ಸೆಪ್ಟೆಂಬರ್ 2021 ರವರೆಗೆ ವಿಸ್ತರಿಸಲಾಗಿದೆ.

10 best FD schemes-ಅತ್ಯುತ್ತಮ ಬಡ್ಡಿ ಸಿಗುವ 10 ಎಫ್ ಡಿ ಯೋಜನೆಗಳು.

ಎಸ್‌ಬಿಐ ವಿಕೇರ್ ಡಿಪೋಸಿಟ್ ಸ್ಪೆಷಲ್ ಎಫ್‌ಡಿ ಸ್ಕೀಮ್

ಎಸ್‌ಬಿಐ ಮೇ 2020 ರಲ್ಲಿ ಹಿರಿಯ ನಾಗರಿಕರಿಗಾಗಿ ಎಸ್‌ಬಿಐ ವಿಕೇರ್  ಹಿರಿಯ ನಾಗರಿಕರ ಅವಧಿ ಠೇವಣಿ ಯೋಜನೆಯನ್ನು ಘೋಷಿಸಿತ್ತು. ಇದರ ಅಡಿಯಲ್ಲಿ, 5 ವರ್ಷಗಳಿಗಿಂತ ಹೆಚ್ಚಿನ ಎಫ್‌ಡಿಗಳ ಮೇಲೆ ಹಿರಿಯ ನಾಗರಿಕರಿಗೆ 0.80 ಶೇಕಡಾ ಹೆಚ್ಚಿನ ದರ ನೀಡಲಾಗಿತ್ತು. ಪ್ರಸ್ತುತ, ಸಾಮಾನ್ಯ ಜನರು 5 ವರ್ಷಗಳ ಎಫ್‌ಡಿ ಮೇಲೆ 5.40 ಶೇಕಡಾ ದರದಲ್ಲಿ ಬಡ್ಡಿಯನ್ನು ಪಡೆದರೆ, ಹಿರಿಯ ನಾಗರಿಕರು ವಿಶೇಷ ಯೋಜನೆಯಡಿ 6.20 ಶೇಕಡಾ ದರದಲ್ಲಿ ಬಡ್ಡಿಯನ್ನು ಪಡೆಯುತ್ತಾರೆ.

Senior citizen Special Fixed deposit – ಸೆಪ್ಟೆಂಬರ್ 30 ರ ನಂತರ ಕೊನೆಗೊಳ್ಳಲಿದೆ ಈ ಸ್ಕೀಮ್, ತಕ್ಷಣವೇ ಈ ಸ್ಕೀಮ್ ನ ಲಾಭ ಪಡೆದುಕೊಳ್ಳಿ.

ಬ್ಯಾಂಕ್ ಆಫ್ ಬರೋಡಾ ಸ್ಪೆಷಲ್ ಎಫ್‌ಡಿ ಸ್ಕೀಮ್

‘ವಿಶೇಷ ಹಿರಿಯ ನಾಗರಿಕರ ಎಫ್‌ಡಿ ಯೋಜನೆ’ ಅಡಿಯಲ್ಲಿ ಹಿರಿಯ ನಾಗರಿಕರಿಗೆ 100 ಮೂಲ ಅಂಕಗಳನ್ನು ಅಂದರೆ 1% ಹೆಚ್ಚಿನ ಬಡ್ಡಿಯನ್ನು ಬ್ಯಾಂಕ್ ಆಫ್ ಬರೋಡಾ  ನೀಡುತ್ತಿದೆ. 5 ವರ್ಷದಿಂದ 10 ವರ್ಷದ ಎಫ್‌ಡಿಗಳ ಮೇಲೆ ಹಿರಿಯ ನಾಗರಿಕರಿಗೆ ಬ್ಯಾಂಕ್ ವಾರ್ಷಿಕ 6.25% ದರದಲ್ಲಿ ಬಡ್ಡಿಯನ್ನು ನೀಡುತ್ತಿದೆ.

PPF account -ತಿಂಗಳಿಗೆ 1000 ರೂಪಾಯಿ ಹೂಡಿಕೆ ಮಾಡಿ 12 ಲಕ್ಷ ಗಳಿಸಿ.

ಐಸಿಐಸಿಐ ಬ್ಯಾಂಕ್ ವಿಶೇಷ ಎಫ್‌ಡಿ ಯೋಜನೆ

ಐಸಿಐಸಿಐ ಬ್ಯಾಂಕ್  ಹಿರಿಯ ನಾಗರಿಕರಿಗಾಗಿ ‘ICICI Bank Golden Years ಹೆಸರಿನ ಯೋಜನೆಯನ್ನು ನಡೆಸುತ್ತಿದೆ. ಇದರ ಅಡಿಯಲ್ಲಿ, ಎಫ್‌ಡಿ ಹೊಂದಿರುವ ಹಿರಿಯ ನಾಗರಿಕರಿಗೆ 80 ಬೇಸಿಸ್ ಪಾಯಿಂಟ್‌ಗಳನ್ನು ಹೆಚ್ಚು ಬಡ್ಡಿಯಾಗಿ ನೀಡಲಾಗುತ್ತದೆ. ಅಂದರೆ, ಹಿರಿಯ ನಾಗರಿಕರು ಈ ಯೋಜನೆಯಡಿ ಎಫ್ಡಿ ಮಾಡಲು 6.30% ಬಡ್ಡಿಯನ್ನು ಪಡೆಯುತ್ತಿದ್ದಾರೆ.

HDFC ಬ್ಯಾಂಕ್ ಸೀನಿಯರ್ ಸಿಟಿಜನ್ ಕೇರ್ FD

HDFC ಬ್ಯಾಂಕ್ ಹಿರಿಯ ನಾಗರಿಕರಿಗಾಗಿ ಸೀನಿಯರ್ ಸಿಟಿಜನ್ ಕೇರ್ FD’ ಯೋಜನೆಯನ್ನು ಆರಂಭಿಸಿತ್ತು. ಇದರ ಅಡಿಯಲ್ಲಿ, ಬ್ಯಾಂಕ್ FD ಯ ಮೇಲೆ 0.25 ಶೇಕಡಾ ಹೆಚ್ಚುವರಿ ಪ್ರೀಮಿಯಂ ಅನ್ನು ಆಫರ್ ಮಾಡುತ್ತಿದೆ. ಹಿರಿಯ ನಾಗರಿಕರಿಗೆ ಇದು ಈಗಿರುವ ಪ್ರೀಮಿಯಂ ಶೇಕಡಾ 0.50 ಕ್ಕಿಂತ ಹೆಚ್ಚಾಗಿದೆ. ಈ ಯೋಜನೆಯು 5 ವರ್ಷದಿಂದ 10 ವರ್ಷಗಳವರೆಗೆ ಇರುತ್ತದೆ. ಅಂದರೆ, ಎಚ್‌ಡಿಎಫ್‌ಸಿ ಬ್ಯಾಂಕ್ ಸೀನಿಯರ್ ಸಿಟಿಜನ್ ಕೇರ್ ಎಫ್‌ಡಿಯಲ್ಲಿ ಲಭ್ಯವಿರುವ ಬಡ್ಡಿ ದರವು 6.25 ಶೇಕಡಾ.

Leave a Comment