Virat Kohli: ದಾಖಲೆಗಳ ಸರದಾರ ಕಿಂಗ್ ಕೊಹ್ಲಿ

Virat Kohli: ದಾಖಲೆಗಳ ಸರದಾರ ಕಿಂಗ್ ಕೊಹ್ಲಿ

Virat Kohli: ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂ ನಡೆದ ಭಾರತ ವರ್ಸಸ್ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಅರ್ಧಸತಕ ಬಾರಿಸುವ ಮೂಲಕ ವಿರಾಟ್ ಕೊಹ್ಲಿ ದಾಖಲೆಗಳನ್ನು ನಿರ್ಮಿಸಿದ್ದಾರೆ ಅವುಗಳಲ್ಲಿ ಕೆಲವೊಂದು ವಿಶ್ವ ದಾಖಲೆಯಾಗಿದೆ.
ನಿನ್ನೆ ನಡೆದ ಭಾರತ ವರ್ಸಸ್ ಆಸ್ಟ್ರೇಲಿಯಾ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕೊಹ್ಲಿ 75 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದರು. ಈ ಮೂಲಕ ಕೊಹ್ಲಿ ಹೆಸರಿಗೆ ಹಲವು ದಾಖಲೆಗಳು ಸೇರ್ಪಡೆಯಾಯಿತು.

 

  • 11 ಸಾವಿರ ರನ್: ODI cricket ಒನ್ದೌನ್ ಇಳಿದು 11000 ಪೂರೈಸಿದ ಪ್ರಥಮ ಭಾರತೀಯ ಎಂಬ ದಾಖಲೆಯನ್ನು ಕೂಡ ಕೊಹ್ಲಿ ಬರೆದಿದ್ದಾರೆ.

 

  • Highest 50: ODI ಕ್ರಿಕೆಟ್ ಮ್ಯಾಚ್ ನಲ್ಲಿ ಅತ್ಯಧಿಕ 50 ಪ್ಲಸ್ ಸ್ಕೋರ್ ಗಳಿಸಿದ ಆರಂಭಿಕನಲ್ಲದ ಬ್ಯಾಟರ್ ಎಂಬ ದಾಖಲೆ ಬರೆದಿದ್ದಾರೆ. ಇದಕ್ಕೂ ಮೊದಲು ಈ ದಾಖಲೆಯನ್ನು ಶ್ರೀಲಂಕಾದ ಕುಮಾರ ಸಂಗಾಕ್ಕಾರ ಹೆಸರಿನಲ್ಲಿತ್ತು ಇವರು 369 ಇನಿಂಗ್ಸ್ನಲ್ಲಿ 112 ಬಾರಿ ಫಿಫ್ಟಿ ಪ್ಲಸ್ ಸ್ಕೋರ್ ಗಳಿಸಿದ್ದರು. ಆದರೆ ಇದೀಗ ವಿರಾಟ್ ಕೊಹ್ಲಿ 113 ಬಾರಿ ಅಪ್ಸೆಂಚುರಿಗಿಂತ ಹೆಚ್ಚಿನ ಸ್ಕೋರ್ ಗಳಿಸಿದ್ದಾರೆ.

 

  • Highest run: ಐಸಿಸಿ ವೈಟ್ ಬಾಲ್ ನಲ್ಲಿ  ವಿರಾಟ್ ಕೊಹ್ಲಿ ಭಾರತದ ಪರ ಅತ್ಯಧಿಕ ರನ್ ಗಳಿಸಿದ ಬ್ಯಾಟರ್ ಎಂಬ ದಾಖಲೆ ಇದೀಗ ಸೇರ್ಪಡೆಯಾಗಿದೆ. ಈ ದಾಖಲೆ ಮೊದಲು ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿತ್ತು ಇವರು ಐಸಿಸಿ ಟೂರ್ನಿಗಳಲ್ಲಿ ಒಟ್ಟು 2719 ರನ್ನು ಕಲೆಹಾಕಿದ್ದರು. ಆದರೆ ಇದೀಗ ವಿರಾಟ್ ಕೊಹ್ಲಿ 2730+ ರನ್ ಗಳಿಸಿದ್ದಾರೆ.Waqar Younis calls Virat Kohli 'crazy man', says VK will break records 'a lot more than anybody can think' | Mint

 

  • ODI ಏಕದಿನ ವಿಶ್ವಕಪ್ ನಲ್ಲಿ ಭಾರತದ ಪರ ಅಧಿಕ ರನ್ ಕಲೆ ಹಾಕಿದ ಎರಡನೇ ಬ್ಯಾಟರ್ ಎಣಿಸಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ 2278 ಕಲೆ ಹಾಕಿರುವ ಸಚಿನ್ ತೆಂಡೂಲ್ಕರ್ ಪ್ರಥಮ ಸ್ಥಾನದಲ್ಲಿದ್ದಾರೆ, 1050+ ರಂಗ್ ಗಳಿಸಿರುವ ವಿರಾಟ್ ಕೊಹ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

Cricket ASIAN GAMES 2023 ಮೆನ್ಸ್ ಕ್ರಿಕೆಟ್ ಭಾರತಕ್ಕೆ ಚಿನ್ನ

 

ಈ ಮೂಲಕ ಕಿಂಗ್ ಕೊಹ್ಲಿ ದಾಖಲೆಯನ್ನು ನಿರ್ಮಿಸುವ ಮೂಲಕ ಏಕದಿನ ವಿಶ್ವಕಪ್ ನಲ್ಲಿ ತಮ್ಮ ಉತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ಆರಂಭಿಸಿದ್ದಾರೆ. ಈ ಮೂಲಕ ಮುಂದಿನ ಪಂದ್ಯದಲ್ಲಿ ಇನ್ನಷ್ಟು ದಾಖಲೆಗಳನ್ನು ವಿರಾಟ್ ಕೊಹ್ಲಿ ಅವರಿಂದ ನಿರೀಕ್ಷಿಸಬಹುದು .

ಇನ್ನು ಹೆಚ್ಚಿನ ಅಪ್ಡೇಟ್ಗಳಿಗಾಗಿ ನಮ್ಮ ಚಾನೆಲ್ ಗೆ ಭೇಟಿ ನೀಡಿ

Leave a Comment